ರಾಜ್ಯದ ಅತಿ ದೊಡ್ಡ ಜೈವಿಕ ಉದ್ಯಾನ ನಾಳೆ ಲೋಕಾರ್ಪಣೆ
Team Udayavani, Nov 2, 2017, 7:40 AM IST
ಬಳ್ಳಾರಿ: ಶಿಲ್ಪಕಲಾ ವೈಭವದ ಮೂಲಕ ಈಗಾಗಲೇ ವಿಶ್ವದ ಗಮನ ಸೆಳೆದಿರುವ ಐತಿಹಾಸಿಕ ಹಂಪಿಯ ಬಳಿಯೇ ರಾಜ್ಯದ ಅತಿ ದೊಡ್ಡ ಜೈವಿಕ ಉದ್ಯಾನವನ ತಲೆ ಎತ್ತಿದ್ದು ನ.3ರಂದು ಲೋಕಾರ್ಪಣೆಗೊಳ್ಳಲಿದೆ.
ಪರಿಸರವಾದಿಗಳ ವಿರೋಧದ ನಡುವೆಯೂ ಕರ್ನಾಟಕ ರಾಜ್ಯ ಮೃಗಾಲಯ ಪ್ರಾಧಿಕಾರ ರಾಜ್ಯದ ಅತಿ ದೊಡ್ಡ ಎನಿಸಿ
ಕೊಂಡಿರುವ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನವನವನ್ನು (ಝುವಾಲಜಿ ಕಲ್ ಪಾರ್ಕ್)ಹಂಪಿ ಪರಿಸರದ ಕಮಲಾಪುರ ಪಟ್ಟಣದ ವ್ಯಾಪ್ತಿಯಲ್ಲಿ ನಿರ್ಮಿಸಿದ್ದು ಸಾರ್ವಜನಿಕರಿಗೆ ಮುಕ್ತವಾಗಲಿದೆ.
ಬಿಳಿಕಲ್ಲು ಅರಣ್ಯ ಪ್ರದೇಶದ 149 ಹೆಕ್ಟೇರ್ ವಿಸ್ತಾರವಾದ ಅರಣ್ಯ ಪ್ರದೇಶದಲ್ಲಿ ಈ ಉದ್ಯಾನ ನಿರ್ಮಾಣವಾಗಿದೆ.
2012ರಲ್ಲಿ ಅಂದಿನ ಪ್ರವಾಸೋದ್ಯಮ ಸಚಿವರಾಗಿದ್ದ ಗಾಲಿ ಜನಾರ್ದನರೆಡ್ಡಿ ಅಟಲ್ ಬಿಹಾರಿ ವಾಜಪೇಯಿ ಜೈವಿಕ
ಉದ್ಯಾನವನವನ್ನು ಒಟ್ಟು 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಯೋಜನೆ ರೂಪಿಸಿ ಕಾರ್ಯ ಆರಂಭಿಸಿದ್ದರು. ಆದರೆ ಇದಕ್ಕೆ ರಾಜ್ಯ ಸರ್ಕಾರದ ಅನುಮತಿ ದೊರೆತಿರಲಿಲ್ಲ. ಆದರೂ ಉದ್ಯಾನಕ್ಕಾಗಿ ಅಂದಿನ ಬಿಜೆಪಿ ಸರ್ಕಾರ 20 ಕೋಟಿ ರೂ. ಹಾಗೂ ಸಂಡೂರಿನ ಎನ್‌ಎಂಡಿಸಿ ಸಂಸ್ಥೆ ಸಿಎಸ್‌ಆರ್ ಅನುದಾನದಲ್ಲಿ 2 ಕೋಟಿ ರೂ. ನೀಡಿತ್ತು. ಈ ಮೊತ್ತವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗಿತ್ತು. ಆ ಹಣಕ್ಕೆ ಬಡ್ಡಿ ಸೇರಿ ಒಟ್ಟು 30 ಕೋಟಿಯಾಗಿತ್ತು. ಈ ಮೊತ್ತವನ್ನು ಸಫಾರಿ ಅಭಿವೃದಿಟಛಿಪಡಿಸಲು, ಸಿಬ್ಬಂದಿ ವೇತನ, ನೌಕರರ ಕೂಲಿ, ಫೆನ್ಸಿಂಗ್ ಹಾಕಲು ಮುಂತಾದ ಕಾಮಗಾರಿಗಳಿಗೆ ಈಗಾಗಲೇ ವೆಚ್ಚ ಮಾಡಲಾಗಿದೆ.
ಬೆಂಗಳೂರಿನಲ್ಲಿ ಇತೀ¤ಚೆಗೆ ನಡೆದ ಸಂಪುಟ ಸಮಿತಿ ಸಭೆಯಲ್ಲಿ ಉದ್ಯಾನವನಕ್ಕೆ ಅಧಿಕೃತ ಅನುಮೋದನೆ ನೀಡಲಾಗಿದೆ. ಅಲ್ಲದೆ ಉದ್ಯಾನವನದ ಪರಿಷ್ಕೃತ ಆರ್ಥಿಕ ಪ್ರಸ್ತಾವನೆ ಅನುಮೋದಿಸಿ ಈ ಮೊತ್ತವನ್ನು 67 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಈಗಾಗಲೇ ಬಳ್ಳಾರಿ ಕಿರು ಮೃಗಾಲಯದಿಂದ ತಂದಿರುವ 75 ಚುಕ್ಕೆ ಜಿಂಕೆ, 70 ಕೃಷ್ಣಮೃಗಗಳ ಜೊತೆಗೆ ಮೈಸೂರಿನಿಂದ ತರಲಾದ 5 ನೀಲಗಾಯ್‌ಗಳು “ಜಿಂಕೆ ಸಫಾರಿ ಗೆ ಮೀಸಲಾದ ಪ್ರದೇಶದಲ್ಲಿವೆ.
ಸುಮಾರು 80 ಎಕರೆ ವಿಸ್ತಾರದ ಜಿಂಕೆ ಸಫಾರಿ ಪ್ರದೇಶದಲ್ಲಿರುವ ಈ ಎಲ್ಲ ಪ್ರಾಣಿಗಳು ಗಿಡ-ಮರ-ಪೊದೆಗಳಲ್ಲಿ ಅಡಗಿ ಕೊಂಡಿದ್ದು ಆಗಾಗ ಗೋಚರಿಸುತ್ತವೆ. ಮೂರು ಆವರಣಗಳು: ಉದ್ಯಾನವನ ದಲ್ಲಿ ತಲಾ 80 ಎಕರೆ ವಿಸ್ತಾರದ 3 ಆವರಣಗಳನ್ನು ನಿರ್ಮಿಸಲಾಗಿದ್ದು ಒಂದರಲ್ಲಿ ಜಿಂಕೆ ಹಾಗೂ ಸಸ್ಯಹಾರಿ ಪ್ರಾಣಿಗಳು, ಮತ್ತೂಂದರಲ್ಲಿ ಮೈಸೂರು ಹಾಗೂ ಬನ್ನೇರುಘಟ್ಟ ದಿಂದ ಕರೆ ತರಲು ಉದ್ದೇಶಿಸಿರುವ ಎರಡು ಜೋಡಿ ಹುಲಿಗಳನ್ನು ಇರಿಸುವ ಯೋಜನೆ ರೂಪಿಸಲಾಗಿದೆ ಎನ್ನುತ್ತಾರೆ ಉದ್ಯಾನವನದ ಇಡಿ ಕೆ.ಪುರುಷೋತ್ತಮ್.
16ರಂದು ವಿಚಾರಣೆ
ಪರಿಸರವಾದಿ ಸಂತೋಷ್ ಮಾರ್ಟಿನ್, ಅವರ ಸಹವರ್ತಿಯೊಬ್ಬರು ಜೈವಿಕ ಉದ್ಯಾನವನ ಆರಂಭಕ್ಕೆ ತಡೆ ನೀಡಬೇಕೆಂದು ಹೈಕೋರ್ಟ್ ಪೀಠಕ್ಕೆ ಅ.28ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿದ ವಿಭಾಗೀಯ ಪೀಠ ಉದ್ಯಾನವನ ಉದ್ಘಾಟನೆಗೆ ತಡೆ ನೀಡದೆ, ರಾಜ್ಯ ಸರ್ಕಾರ ಸೇರಿ 11 ಜನ ಪ್ರತಿವಾದಿಗಳಿಗೆ ತುರ್ತು ಆದೇಶ ಜಾರಿ ಮಾಡಿದ್ದು ನ.16ಕ್ಕೆ ವಿಚಾರಣೆಯನ್ನು ನಿಗದಿಪಡಿಸಿದೆ.
– ಎಂ.ಮುರಳಿಕೃಷ್ಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.