ನೀರಿನ ಸಮಸ್ಯೆ ನೀಗಿಸಲು ಆಗ್ರಹ
•ಅಧಿಕಾರಿಗಳ ಕಾರ್ಯವೈಖರಿಗೆ ಆಕ್ರೋಶ•8428 ಹೆಕ್ಟೇರ್ ಬಿತ್ತನೆ ಗುರಿ
Team Udayavani, Jun 25, 2019, 9:42 AM IST
ಹೊಸಪೇಟೆ: ತಾಪಂ ಅಧ್ಯಕ್ಷೆ ಜೋಗದ ನೀಲಮ್ಮ ಅಧ್ಯಕ್ಷತೆಯಲ್ಲಿ 14ನೇ ಸಾಮಾನ್ಯ ಸಭೆ ನಡೆಯಿತು.
ಹೊಸಪೇಟೆ: ಬೇಸಿಗೆ ಕಳೆದರೂ ತಾಲೂಕಿನಲ್ಲಿ ನೀರಿನ ಸಮಸ್ಯೆ ಇನ್ನೂ ನೀಗಿಲ್ಲ. ಗ್ರಾಮಸ್ಥರು ಅಶುದ್ಧ ನೀರು ಕುಡಿಯುಂತಾಗಿದ್ದು, ಅಧಿಕಾರಿಗಳು ಸಮರ್ಪಕ ಕೆಲಸ ಮಾಡದೆ ಇರುವ ಪರಿಣಾಮ ನೀರಿನ ಸಮಸ್ಯೆ ಉಲ್ಬಣಗೊಂಡಿದೆ ಎಂದು ತಾಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಸೋಮವಾರ ನಡೆದ 14ನೇ ಸಾಮಾನ್ಯ ಸಭೆಯಲ್ಲಿ ನಡೆಯಿತು.
ತಾಪಂ ಅಧ್ಯಕ್ಷೆ ಜೋಗದ ನೀಲಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನೀರಿನ ಸಮಸ್ಯೆ ಕುರಿತು ಮಾತನಾಡಿದ ಸದಸ್ಯರು, ತಾಲೂಕಿನಲ್ಲಿ ನೀರಿನ ದಿನದಿಂದ ತಲೆದೋರುತ್ತಿದೆ. ಜನರು ಅಶುದ್ಧ ನೀರು ಕುಡಿಯುವಂತಾಗಿದೆ. ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮರಿಯಮ್ಮನಹಳ್ಳಿ ಪಾವಗಡ ಯೋಜನೆಯನ್ನು ಕೈಗೊಂಡರೆ 18 ಹಳ್ಳಿಗಳ ನೀರಿನ ಸಮಸ್ಯೆ ನೀಗಲಿದೆ. ಆರು ತಿಂಗಳು ಕಳೆದರೂ ಯೋಜನೆ ಪ್ರಾರಂಭಗೊಂಡಿಲ್ಲ. ಕೂಡಲೇ ಯೋಜನೆಗೆ ಚಾಲನೆ ನೀಡಬೇಕು ಎಂದು ಸದಸ್ಯ ರಾಜಪ್ಪ ಆಗ್ರಹಿಸಿದರು.
ಕಲ್ಲಹಳ್ಳಿ ಹಾಗೂ ಮಲಪನಗುಡಿ ಗ್ರಾಮದಲ್ಲಿ ಬೋರ್ ಕೊರೆಸಿದರೆ ನೀರು ಬಿದ್ದಿಲ್ಲ. ಆರು ತಿಂಗಳ ಹಿಂದೆ ಬೋರ್ ಕೊರೆಸಿದರು, ನೀರಿನ ಸೆಲೆ ಸಿಗಲಿಲ್ಲ. ನೀರಿನ ಸಮಸ್ಯೆ ಹೋಗಲಾಡಿಸಲು ಖಾಸಗಿ ಬೋರ್‌ವೆಲ್ ಸಹಾಯ ಪಡೆಯಲಾಗುವುದು. ಚಿಲಕನಹಟ್ಟಿ ಗ್ರಾಮದ ನೀರಿನ ಸಮಸ್ಯೆಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ಮರಿಯಮ್ಮನಹಳ್ಳಿ 10 ಖಾಸಗಿ ಬೋರ್‌ಗಳನ್ನು ಪಡೆದುಕೊಂಡು ಜನರಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಡಣಾಯಕನ ಕೆರೆ, ವಡ್ರಹಳ್ಳಿ ಭಾಗದಲ್ಲಿ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಉಪ ವಿಭಾಗದ ಎಇಇ ಪಂಪಾಪತಿ ಉತ್ತರಿಸಿದರು.
ಹಂಪಿಯಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಶುದ್ಧ ನೀರಿನ ಘಟಕ ಪ್ರಾರಂಭವಾಗಿಲ್ಲ ಎಂದು ಸದಸ್ಯ ಪಾಲಪ್ಪ, ಸಭೆಗೆ ಪ್ರಶ್ನಿಸುತ್ತಿದ್ದಂತೆ ಪಿಡಿಒ ರಾಜೇಶ್ವರಿ, ಎಚ್ಕೆಆರ್‌ಡಿಬಿಯಿಂದ ಯಂತ್ರಗಳಿಗೆ 4 ಲಕ್ಷ ರೂ. ಅನುದಾನ ಕಲ್ಪಿಸಲಾಗಿದೆ. ಆದರೆ, ಕಟ್ಟಡಕ್ಕೆ ಅನುದಾನ ನೀಡಿಲ್ಲ. ಶೀಘ್ರವೇ ಯೋಜನೆ ಅನುಷ್ಠಾನಗೊಳ್ಳದೆ. ಕ್ರಿಯಾಯೋಜನೆ ಮರಳಿ ಕಳುಹಿಸಲಾಗಿದೆ ಎಂದು ತಿಳಿಸಿದರು.
ಸದಸ್ಯ ಸಿ.ಡಿ.ಮಹಾದೇವ, ಮೂರು ವರ್ಷ ನಾಲ್ಕು ತಿಂಗಳಾದರೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತಾಪಂ ಒಂದೇ ಒಂದು ಸಭೆಗೆ ಬಂದಿಲ್ಲ. ಅಧಿಕಾರಿಗಳಿಗೆ ರೈತರ ಕಾಳಜಿ ಎಷ್ಟಿದೆ. ಫೋನ್ ಸ್ವಿಚ್ಡ್ ಆಫ್ ಆಗಿರುತ್ತದೆ. ಒಂದು ವೇಳೆ ಸೂಕ್ತ ಕ್ರಮ ಕೈಗೊಳ್ಳದಿದ್ದರೇ ಇಒ ವಿರುದ್ಧ ಸದಸ್ಯರೆಲ್ಲರೂ ದೂರು ಕೊಡಲಾಗುವುದು ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಷಣ್ಮುಖಪ್ಪ, ಕಂಪ್ಲಿ ವಿಭಾಗದ ಸಣ್ಣ ನೀರಾವರಿ ಇಲಾಖೆಯಲ್ಲಿ ಎಇಇ ಅಧಿಕಾರಿ ಇರುವುದಿಲ್ಲ. ಕಚೇರಿ ಧೂಳು ಹೊಡೆಯುವುದು ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಣ್ಣ ನೀರಾವರಿ ಇಲಾಖೆ ಕಮಲಾಪುರಿನ ಎಇಇ ತಿಮ್ಮಪ್ಪ, ಕಂಪ್ಲಿ ವಿಭಾಗ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿ ಸಮಸ್ಯೆ ಕುರಿತು ಮಾಹಿತಿ ಇಲ್ಲ ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ವಾಮದೇವ, ಜನವರಿಯಿಂದ ಜೂನ್ 18ರವರೆಗೆ 134 ಮಿ.ಮೀ ವಾಡಿಕೆ ಮಳೆ ಆಗಬೇಕಾಗಿತ್ತು. ಆದರೆ, ಮಳೆ 64 ಮಿಮೀ ಆಗಿದೆ. ಹೊಸಪೇಟೆ, ಕಮಲಾಪುರ, ಕಂಪ್ಲಿ, ಮರಿಯಮ್ಮನಹಳ್ಳಿ 1148.89 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಇದರ ಪೈಕಿ 589.94 ಕ್ವಿಂಟಲ್ ಬೀಜ ವಿತರಿಸಲಾಗಿದೆ. ಇನ್ನು 558.95 ಬೀಜ ವಿತರಣೆ ಮಾಡಬೇಕಾಗಿದೆ. 8428 ಹೆಕ್ಟೇರ್ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದೆ. ಈಗ 2013 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ಮಳೆ ಇಲ್ಲ ಎಂದು ಹೇಳಿದರು.
ಸದಸ್ಯ ನಾಗವೇಣಿ, ಸೇರ್ಪಡೆ-ಬೇರ್ಪಡೆ ಯೋಜನೆಯಲ್ಲಿ ಬೆನಕಾಪುರ ಶಾಲೆಯನ್ನು ಆಯ್ಕೆ ಮಾಡಿ ಎಂದರು. ಸದಸ್ಯ ರಾಜಪ್ಪ ಮಾತನಾಡಿ, ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿನ ಫಲಿತಾಂಶ ಕಡಿಮೆ ಬಂದಿದೆ. ಯಾಕೆ ಶಿಕ್ಷಕರು ಕಾರ್ಯನಿರ್ವಸುತ್ತಿಲ್ಲವೇ? ಖಾಸಗಿ ಫಲಿತಾಂಶ ಬಂದ ಕೂಡಲೇ ಫ್ಲೆಕ್ಸ್ ಹಾಕಿಕೊಂಡು ಪ್ರಚಾರ ಪಡೆಯುತ್ತಾರೆ. ಆದರೆ, ಸರಕಾರಿ ಶಾಲೆಯಲ್ಲಿ ಈ ವ್ಯವಸ್ಥೆ ಯಾಕೆ ಇಲ್ಲ. ಅಲ್ಲದೇ, ಮೊರಾರ್ಜಿ ಶಾಲೆ ಅಭಿವೃದ್ಧಿಗೆ ಜನಪ್ರತಿನಿಧಿಗಳಿಂದ ಸಹಾಯ ಪಡೆಯಲಾಗುತ್ತದೆ ಎಂದರು.
ಶಿಕ್ಷಣ ಇಲಾಖೆ ಸಂಯೋಜನಾಧಿಕಾರಿ ಗುರುರಾಜ ಮಾತನಾಡಿ, ಈ ಬಾರಿ ಸೇರ್ಪಡೆ-ಬೇರ್ಪಡೆ ಯೋಜನೆಯಲ್ಲಿ ಬೆನಕಾಪುರ ಶಾಲೆಯನ್ನು ಆಯ್ಕೆ ಮಾಡಲಾಗುವುದು. ಸಿಸಿ ಕ್ಯಾಮರಾ ಅಳವಡಿಸಲು ಅನುದಾನವಿಲ್ಲ. ಶಾಲೆಗಳ ಫಲಿತಾಂಶ ಬಂದಿರುವುದನ್ನು ಪ್ರಚಾರ ಪಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದರು.
ತಾಪಂ ಅಧ್ಯಕ್ಷೆ ಜೋಗದ ನೀಲಮ್ಮ, ಸದಸ್ಯೆ ಮಲ್ಲೆ ಹನುಮಕ್ಕ, ಶಿವಪ್ಪ, ತೋಟಗಾರಿಗೆ ಇಲಾಖೆಯ ಅಧಿಕಾರಿ ರಾಜೇಂದ್ರ, ಪಶುಸಂಗೋಪಣೆ ಇಲಾಖೆಯ ಬೆಣ್ಣೆ ಬಸವರಾಜ, ಪಿಡಬ್ಲ್ಯೂಡಿ ರವಿನಾಯಕ, ಮೀನುಗಾರಿಕೆ ಇಲಾಖೆ ಕಣ್ಣಿಭಾಗ್ಯ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್
Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ
Bellary: ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.