ಜಾತ್ರೆಯಲ್ಲಿ ಸರಗಳ್ಳರ ಬಂಧನ
Team Udayavani, Mar 22, 2022, 1:08 PM IST
ಕುರುಗೋಡು: ಪೊಲೀಸರ ಮಿಂಚಿನ ದಾಳಿಯಿಂದ ಕುರುಗೋಡು ಜಾತ್ರೆಯಲ್ಲಿ ಮೂರು ಮಂದಿ ಮಹಿಳಾ ಸರಗಳ್ಳರನ್ನು ಶನಿವಾರ ಬಂಧಿಸಲಾಗಿದೆ.
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯವರಾದ ಸುಶೀಲಾ (55), ವಿಮಲಾ (55), ಉಷಾ (45)ಬಂಧಿತ ಮಹಿಳೆಯರು.
ಬಳ್ಳಾರಿಯ ಶಿಲ್ಪಾ ಎನ್ನುವವರು ಮಾ. 18ರಂದು ಕುರುಗೋಡು ಶ್ರೀ ದೊಡ್ಡಬಸವೇಶ್ವರ ಸ್ವಾಮಿಯ ಮಹಾರಥೋತ್ಸಕ್ಕೆ ಬಂದಾಗ ಅಪರಿಚಿತ ಹೆಂಗಸಿನ ಕೊರಳಲ್ಲಿದ್ದ ಅಂದಾಜು 80,000ರೂ. ಬೆಲೆಬಾಳುವ 20 ಗ್ರಾಂ ಬಂಗಾರದ ಮಾಂಗಲ್ಯ ಸರವನ್ನು ಕದ್ದು ತನ್ನ ಸಹಚರರೊಂದಿಗೆ ಪರಾರಿಯಾಗಿದ್ದರು.
ಈ ಕುರಿತು ಶಿಲ್ಪಾ ಮಾ.18ರಂದು ದೂರು ನೀಡಿದ್ದರು. ದೂರಿನ ಮೇರೆಗೆ ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿ ಪತ್ತೆಗಾಗಿ ಮೇಲಧಿಕಾರಿಗಳ ಮಾರ್ಗದರ್ಶನದಂತೆ, ಕುರುಗೋಡು ಪಿಎಸ್‌ಐ ಮೌನೇಶ್ ಯು.ರಾಥೋಡ್, ಸಿಪಿಐ ಚಂದನ್‌ಗೋಪಾಲ ನೇತೃತ್ವದಲ್ಲಿ ಸಿಬ್ಬಂದಿ ಮೂವರನ್ನು ಬಂಧಿಸಿದ್ದಾರೆ. ಕಳುವಾಗಿದ್ದ ಬಂಗಾರದ ಸರ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಒಂದು ಕಬ್ಬಿಣದ ಕಟರ್ ವಶಪಡಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Waqf Notice: ಸಿಎಂ ಪಿತೂರಿ, ಸಚಿವ ಜಮೀರ್ ದ್ರೋಹದಿಂದ ಜಮೀನು ಕಬಳಿಸುವ ಕೆಲಸ: ವಿಜಯೇಂದ್ರ
By Election: ಮಾತಿನ ಭರದಲ್ಲಿ ವಿಜಯೇಂದ್ರಗೂ ಪಾಲು ಎಂದ ಶ್ರೀರಾಮುಲು!
Modi,BSY ಬಗ್ಗೆ ಮಾತನಾಡುವ ಮೊದಲು ಎಚ್ಚರಿಕೆ ಇರಲಿ: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಿಡಿ
Kotturu: ಹಸಿರು ಪಟಾಕಿ ಹೆಸರಿನಲ್ಲಿ ನಿಯಮ ಉಲ್ಲಂಘಿಸಿ ಮಾಮೂಲಿ ಪಟಾಕಿ ಮಾರಾಟ…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.