ಬಳ್ಳಾರಿ: ಕೋವಿಡ್-19 ಸೋಂಕು ಗುಣಮುಖರಾದ ಇಬ್ಬರು ಬಿಡುಗಡೆ
Team Udayavani, Apr 26, 2020, 3:22 PM IST
ಬಳ್ಳಾರಿ: ಕೋವಿಡ್-19 ವೈರಸ್ ಸೋಂಕಿನಿಂದಾಗಿ ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಇನ್ನಿಬ್ಬರನ್ನು ಭಾನುವಾರ ಮಧ್ಯಾಹ್ನ ಬಿಡುಗಡೆಗೊಳಿಸಲಾಯಿತು.
ಬಳ್ಳಾರಿ ಜಿಲ್ಲಾ ವೈದ್ಯಕೀಯ ತಜ್ಞರ ಸಲಹಾ ಸಮಿತಿ ಸೋಂಕಿತ ಸಂಖ್ಯೆ 90, ಸೊಂಕಿತ ಸಂಖ್ಯೆ 151 ಅವರು ಗುಣಮುಖರಾಗಿರುವ ಬಗ್ಗೆ ದೃಢಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿದ ಅನುಮತಿ ಮೇರೆಗೆ ಕೋವಿಡ್ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸಾರೆಡ್ಡಿಯವರು ಬಿಡುಗಡೆಗೊಳಿಸಿ, ಆಂಬ್ಯುಲೆನ್ಸ್ ಮೂಲಕ ಅವರನ್ನು ಅವರವರ ಮನೆಗೆ ಕಳುಹಿಸಿದರು.
ದೆಹಲಿಯ ನಿಜಾಮುದ್ದೀನ್ ದರ್ಗಾದಲ್ಲಿನ ನಡೆದ ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದ್ದ ಬಳ್ಳಾರಿಯ ಗುಗ್ಗರಹಟ್ಟಿಯ 41 ವರ್ಷದ ವ್ಯಕ್ತಿಗೆ ಕಳೆದ ಏ.5 ರಂದು ಸೋಂಕು ಇರುವ ಬಗ್ಗೆ ಧೃಢಪಟ್ಟಿದ್ದು, ನಗರ ಕೋವಿಡ್ 19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇನ್ನು ಹೊಸಪೇಟೆಯ ಸೋಂಕಿತ ಸಂಖ್ಯೆ 90 ಅವರು ಕಳೆದ ಮಾ.30 ರಂದು ಸೋಂಕು ದೃಢಪಟ್ಟಿತ್ತು. ಅಂದಿನಿಂದ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾದ ಹಿನ್ನೆಲೆಯಲ್ಲಿ ಭಾನುವಾರ ಬಿಡುಗಡೆಗೊಳಿಸಲಾಯಿತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.