ವಿವಿಗಳಲ್ಲಿಯೂ ಕ್ರೀಡೆ ಕ್ಷೀಣ ಖೇದಕರ
ದಕ್ಷಿಣ ವಲಯ ರಾಕೆಟ್‌ಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿ ಉದ್ಘಾಟನೆ
Team Udayavani, Oct 16, 2022, 3:03 PM IST
ಸಂಡೂರು: ಕ್ರೀಡೆಗಳು ತಳಮಟ್ಟದಿಂದ ವಿಶ್ವ ವಿದ್ಯಾಲಯಗಳಲ್ಲಿಯೂ ಸಹ ಕ್ಷಿಣಿಸುತ್ತಿರುವುದು ಅತಂಕದ ಸಂಗತಿಯಾಗಿದೆ. ಅದನ್ನು ಬೆಳೆಸುವಂಥ ಮಹತ್ತರ ಕಾರ್ಯವನ್ನು ಬಿಕೆಜಿ ಫೌಂಡೇಷನ್ ಮುಖ್ಯಸ್ಥರಾದ ಬಿ. ನಾಗನಗೌಡ ಮಾಡುತ್ತಿರುವುದು ಅತಿ ಉತ್ತಮವಾದ ಕೆಲಸವಾಗಿದೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ| ಬಸವರಾಜ ಪೂಜಾರ್ ಅಭಿಪ್ರಾಯಪಟ್ಟರು.
ಅವರು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಥಮ ದಕ್ಷಿಣ ವಲಯ ರಾಕೆಟ್‌ಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, 25-30 ವರ್ಷಗಳ ಹಿಂದೆ ಇದೇ ಕ್ರೀಡಾಂಗಣದಲ್ಲಿ ನಾನು ಖೋ ಖೋ ಬ್ಲೂ ಅಗಲು ಅಡಲು ಬಂದಿದ್ದೆ, ಅಂದು ಕ್ರೀಡಾಪಟುಗಳು ಬೆಳಗಿನ 6ರಿಂದ ರಾತ್ರಿ 8 ಗಂಟೆಯವರೆಗೆ ಕಾಣುತ್ತಿದ್ದರು. ಆದರೆ ಇಂದು ಕ್ರೀಡಾ ಯುಗಾಂತ್ಯವಾಗುತ್ತಿರುವುದು ಅತಂಕದ ಸಂಗತಿ. ಮತ್ತೂಮ್ಮೆ ಬಿ. ನಾಗನಗೌಡರು ಸಾಹಿತ್ಯ ಪ್ರೇಮಿಗಳಾಗಿ, ಕಸಾಪ ಅಧ್ಯಕ್ಷರಾಗಿ, ಸಾಮಾನ್ಯ ಜನರ ಹಿತ ಬಯಸುವ ಅವರು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿ ಕೇವಲ 4 ಕ್ರೀಡಾಪಟುಗಳಿಂದ ಇಂದು ನೂರಾರು ಕ್ರೀಡಾಪಟುಗಳು ಬೆಳೆದು ದಕ್ಷಿಣ ಭಾರತದ ವಲಯಮಟ್ಟದ 6 ರಾಜ್ಯಗಳು ಭಾಗಿಯಾಗುವಂತೆ ಮಾಡಿರುವುದು ಸಾಧನೆಯಾಗಿದೆ ಎಂದರು.
ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ರವಿ.ಬಿ. ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಪೂಜಾರ್ ಅವರ ಅಭಿಪ್ರಾಯ ಸತ್ಯವಾಗಿದ್ದು ನಾವು ಇಂದು ಅಂಕಗಳ ಹಿಂದೆ ಓಡುತ್ತಿದ್ದೇವೆ ವಿನಃ ಆಟದ ಹಿಂದೆ ಓಡುತ್ತಿಲ್ಲ. ಬಿಕೆಜಿ ಫೌಂಡೇಷನ್ ನಿರಂತರವಾಗಿ ಸಮಾಜಮುಖೀಯಾಗಿ ಸೇವೆ ಸಲ್ಲಿಸುತ್ತಿದೆ. ಅನುಭವದ ಶಿಕ್ಷಣವನ್ನು ಯಾವ ವಿಶ್ವವಿದ್ಯಾಲಯವೂ ಸಹ ನೀಡಲಾರದು ಎಂದರು.
ನಿವೃತ್ತ ಪ್ರಾಂಶುಪಾಲರು, ದೈಹಿಕ ನಿರ್ದೇಶಕರಾದ ಜ್ಯೋತಿಬಾ ತಾರಪ್ಪಗೋಳ್, ಬಿಕೆಜಿ ಅಡ್ಮಿನ್ ರಮೇಶ್.ಆರ್, ಅಯ್ಕೆ ಸಮಿತಿ ಅಧ್ಯಕ್ಷರಾದ ಈಶ್ವರ ಬೊಮ್ಮನಾಳ್, ದೈಹಿಕ ನಿರ್ದೇಶಕರು ಟಿ.ದಾಸರಹಳ್ಳಿಯ ಡಾ|ಅಬೀದಾ ಬೇಗಂ, ರಾಷ್ಟ್ರೀಯ ಕ್ರೀಡಾಪಟು ಚೆನ್ನೈನ ರಮಣಮೂರ್ತಿ, ಮಣಿಶಂಕರ್, ತಹಶೀಲ್ದಾರ್ ವಿ.ಕೆ. ನೇತ್ರಾ, ಸಂಘಟನಾ ಕಾರ್ಯದರ್ಶಿ ಆರ್. ಚಂದ್ರಶೇಖರ್ ಅನಿಸಿಕೆ ಹಂಚಿಕೊಂಡರು.
ಬಿ. ನಾಗನಗೌಡ ಮಾತನಾಡಿ, ಕ್ರೀಡಾಪಟುಗಳು ಮುಂದೆ ಬಂದಾಗ ಹಿರಿಯ ಪಟುಗಳ ಪೂರ್ಣ ಶ್ರಮದ ಫಲವಾಗಿ ಇಂದು ಈ ಸಂಸ್ಥೆ ರಾಷ್ಟ್ರಮಟ್ಟದಲ್ಲಿ ಬೆಳೆದು ಉತ್ತಮ ಕ್ರೀಡಾಪಟುಗಳನ್ನು ನಾಡಿಗೆ ಕೊಡುತ್ತಿದೆ ಎಂದರು.
ಚಂದ್ರಶೇಖರ್ ಮಾತನಾಡಿ, ಮೊದಲ ಬಾರಿಗೆ ದಕ್ಷಿಣ ವಲಯ ಚಾಂಪಿಯನ್ ಶಿಫ್ ಸ್ಪರ್ಧೆಯಲ್ಲಿ ಅಂಧ್ರಪ್ರದೇಶ್, ತಮಿಳುನಾಡು, ತೆಲಂಗಾಣ, ಕರ್ನಾಟಕ ಮತ್ತು ಪಾಂಡಿಚೇರಿಯಿಂದ ತಂಡಗಳು ಭಾಗವಹಿಸಿದ್ದವು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.