ವಿಶ್ವಪ್ರಸಿದ್ಧ ಹಂಪಿಯಲ್ಲಿ ಪ್ರವಾಸಿ ವಾಹನ ಪ್ರಾಯೋಗಿಕ ಸಂಚಾರ
Team Udayavani, Mar 10, 2021, 7:43 PM IST
ಹೊಸಪೇಟೆ: ವಿಶ್ವಪ್ರಸಿದ್ಧ ಹಂಪಿಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಸಂಚಾರ ಖಾಸಗಿ ಸಹಭಾಗಿತ್ವದಲ್ಲಿ ಬ್ಯಾಟರಿ ಚಾಲಿತ ವಾಹನಗಳು ಪ್ರಾಯೋಗಿಕವಾಗಿ ಆರಂಭವಾಗಿದೆ ಎಂದು ಹೊಸಪೇಟೆ ಉಪವಿಭಾಗಾಧಿ ಕಾರಿ ಹಾಗೂ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಸಿದ್ಧರಾಮೇಶ್ವರ ಹೇಳಿದರು.
ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು ಅನೇಕ ದಿನಗಳಿಂದ ಪ್ರಾಧಿಕಾರದಿಂದ ಆರಂಭಿಸಿದ್ದ ಬ್ಯಾಟರಿ ಚಾಲಿತ ವಾಹನಗಳು ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ತೊಂದರೆಯಾಗಿತ್ತು. ಹೀಗಾಗಿ ಖಾಸಗಿ ಸಹಭಾಗಿತ್ವದ ಮೊದಲ ಯೋಜನೆಯಾಗಿ ಬೆಂಗಳೂರಿನ ಪ್ರೀವ್ಯಾಲೆನ್ಸ್ ಗ್ರೀನ್ ಸಲ್ಯೂಶನ್ಸ್ ಪ್ರೈವೇಟ್ ಕಂಪನಿ ಸಹಕಾರದೊಂದಿಗೆ ಇಂದಿನಿಂದ ಮೂರುದಿನಗಳ ಕಾಲ ಪ್ರಾಯೋಗಿಕ ಸಂಚಾರ ನಂತರ ಇಲಾಖೆಯ ದರ ನಿಗದಿಯೊಂದಿಗೆ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಪ್ರವಾಸಿಗರಿಗೆ ಹೊರೆಯಾಗದಂತೆಯೇ ದರ ನಿಗದಿಯಾದರೂ ಸದ್ಯದ ದರಕ್ಕೆ ಸ್ವಲ್ಪ ಹೆಚ್ಚಳವಿರಲಿದೆ. ಇಲಾಖೆ 30:70 ಅನುಪಾತದಲ್ಲಿ ಹಂಚಿಕೆಯಾಗಲಿದೆ.
ಈ ಒಪ್ಪಂದದೊಂದಿಗೆ ಬ್ಯಾಟರಿ ಚಾಲಿತ ವಾಹನಗಳ ಸಂಚಾರ ಆರಂಭವಾಗಲಿದೆ. ಸದ್ಯ ರೈಲು ಮಾದರಿಯ ಒಂದು ಹಾಗೂ ಆಟೋ ಮಾದರಿಯ ಮುಕ್ತವಾಹನ ಸಂಚಾರ ಆರಂಭಿಸಲಿದ್ದು ಅದರ ಪರಿಣಾಮದ ಆಧಾರದಲ್ಲಿ ಮುಂದಿನ ದಿನ ಮತ್ತಷ್ಟು ವಿಸ್ತರಿಸಲಾಗುವುದು ಎಂದರು.
ಈ ಹಿಂದೆ ಇಲಾಖೆ ಖರೀದಿಸಿದ್ದ ಸದ್ಯ ಬಳಕೆಯಲ್ಲಿ ಇಲ್ಲದ 10 ವಾಹನಗಳನ್ನು ಮತ್ತೇ ಆರಂಭಿಸಲು ಸಹ ಗಂಭೀರ ಚಿಂತನೆ ನಡೆದಿದ್ದು ಹೊಸ ವಾಹನಗಳನ್ನು ಬೈ ಬ್ಯಾಕ್ ಪಡೆಯಲು ಚಿಂತಿಸಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ
Koteshwar: ಬೀಜಾಡಿಯ ಯೋಧ ಅನೂಪ್ ಪೂಜಾರಿ ಮೃತ್ಯು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.