ಕಮ್ಮವಾರಿ ಸಂಘದ ಪದಾಧಿಕಾರಿಗಳಿಂದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿ
ಅಂಜನಾದ್ರಿ ಬೆಟ್ಟಕ್ಕೆ ಮೂಲ ಸೌಕರ್ಯ, ನವಲಿ ಜಲಾಶಯ ಗಿಣಿಗೇರಾ ಗದ್ವಾಲ್ ರೈಲು ಮಾರ್ಗ ಸೇರಿ ಅಗತ್ಯ ಸೌಕರ್ಯ ನೀಡಲು ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಮನವಿ
Team Udayavani, Aug 22, 2021, 1:20 PM IST
ಗಂಗಾವತಿ : ಗಂಗಾವತಿ ಹಂಪಿ ಮತ್ತು ತುಂಗಭದ್ರಾ ಡ್ಯಾಂಗೆ ಭೇಟಿ ನೀಡಿದ್ದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಗಂಗಾವತಿ ಕನಕಗಿರಿ ತಾಲ್ಲೂಕುಗಳ ಕಮ್ಮವಾರಿ ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ತಮ್ಮ ಶುಭಾಶಯಗಳನ್ನು ತಿಳಿಸಿದರು.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಗಂಗಾವತಿ ಕನಕಗಿರಿ ಕಾರಟಗಿ ರಾಯಚೂರು ಬಳ್ಳಾರಿ ಜಿಲ್ಲೆಗಳ ಸಂಪೂರ್ಣ ಮಾಹಿತಿ ಇದ್ದು ಇಲ್ಲಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಕಮ್ಮವಾರಿ ಸಂಘದ ಪದಾಧಿಕಾರಿಗಳು ಭೇಟಿಯ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಯುನೈಟೆಡ್ ಕಿಂಗ್ ಡಂ ನ ಮಹಿಳೆಯರು ಅಲ್ಲಿನ ವ್ಯವಸ್ಥೆಯ ಬಗ್ಗೆ ನಂಬಿಕೆ ಕಳೆದುಕೊಂಡಿರುವುದ್ಯಾಕೆ..?
ಭೇಟಿಯ ನಂತರ ಕಮ್ಮವಾರಿ ಸಂಘದ ಪ್ರಮುಖ ಪದಾಧಿಕಾರಿಗಳಾದ ಟಿ ಸತ್ಯನಾರಾಯಣ ಬಾಪಿರೆಡ್ಡಿ ಕ್ಯಾಂಪ್ ಉದಯವಾಣಿ ಜತೆ ಮಾತನಾಡಿ, ನಮ್ಮ ಹಿರಿಯರು ಆಂಧ್ರಪ್ರದೇಶದಿಂದ ವಲಸೆ ಬಂದಿರಬಹುದು ನಾವು ಇಲ್ಲೇ ಜನಿಸಿದ್ದೇವೆ ಈ ಭಾಗದ ಅಭಿವೃದ್ಧಿ ಇಲ್ಲಿಯ ಜನರ ಮೂಲ ಸೌಕರ್ಯಗಳ ಬಗ್ಗೆ ನಮಗೆಲ್ಲಾ ಅರಿವಿದೆ ಆದ್ದರಿಂದ ಉಪರಾಷ್ಟ್ರಪತಿಗಳಿಗೆ ಮನವಿ ಮಾಡಿ ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟಕ್ಕೆ ಮೂಲ ಸೌಕರ್ಯ ಸೇರಿದಂತೆ ಗಿಣಿಗೇರಾ ಗದ್ವಾಲ್ ರೈಲ್ವೆ ಮಾರ್ಗ,ತುಂಗಭದ್ರಾ ಡ್ಯಾಮಿನ ಒತ್ತಡ ಕಡಿಮೆ ಮಾಡಲು ನವಲಿ ಹತ್ತಿರ ಸಮನಾಂತರ ಜಲಾಶಯ ನಿರ್ಮಿಸಿ ಸಮುದ್ರಕ್ಕೆ ಹರಿದು ಹೋಗುವ ಸುಮಾರು ಮೂವತ್ತೇಳು ಟಿಎಂಸಿಯಷ್ಟು ನೀರನ್ನು ಉಳಿಸುವಂತೆ ಮನವಿ ಮಾಡಲಾಗಿದೆ.
ಶೈಕ್ಷಣಿಕವಾಗಿ ಔದ್ಯೋಗಿಕವಾಗಿ ಗಂಗಾವತಿ ಕನಕಗಿರಿ ಕಾರಟಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಮೂಲ ನಕ್ಷೆ ರೂಪಿಸಿ ಅದನ್ನು ಅನುಷ್ಠಾನ ಮಾಡುವಂತೆ ಮನವಿ ಮಾಡಲಾಗಿದೆ ಉಪ ರಾಷ್ಟ್ರಪತಿಗಳಾದ ವೆಂಕಯ್ಯನಾಯ್ಡು ಅವರು ಇದಕ್ಕೆ ಪೂರಕವಾಗಿ ಸ್ಪಂದಿಸಿ, ಈ ಭಾಗದ ಸಮಗ್ರ ಪರಿಚಯ ತಮಗಿದ್ದು ತಾವುಗಳು ಸಲ್ಲಿಸಿದ ಮನವಿಯನ್ನು ಸಂಬಂಧಪಟ್ಟ ಇಲಾಖೆಯವರಿಗೆ ಸಲ್ಲಿಸಿ ನಂತರ ಸೂಕ್ತ ಕ್ರಮ ಜರುಗಿಸುವಂತೆ ಶಿಫಾರಸು ಮಾಡಲಾಗುತ್ತದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಕಲ್ಗುಡಿ ಯಡ್ಲಪಲ್ಲಿ ಆನಂದ್ರಾವ್ ಶ್ರೀರಾಮಕೃಷ್ಣ ಚಿಟ್ಟೂರಿ ದುರ್ಗಾರಾವ್ ಕೊಲ್ಲಾ ಶೇಷಗಿರಿರಾವ್ ಸೇರಿದಂತೆ ಕಮ್ಮವಾರಿ ಸಂಘದ ಇತರ ಹಿರಿಯ ಪದಾಧಿಕಾರಿಗಳು ಇದ್ದರು.
ಇದನ್ನೂ ಓದಿ : ಹಾಲ್ ಮಾರ್ಕ್ ಕಡ್ಡಾಯ : ಪ್ರತಿಭಟನೆಯ ನಿರ್ಧಾರವನ್ನು ಪರಿಶೀಲಿಸಿ :ಜಿಜೆಸಿ ಗೆ ಕೇಂದ್ರ ಸೂಚನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
Congress: ಸಿದ್ದರಾಮಯ್ಯ ಮಾಸ್ ಲೀಡರ್, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.