ನೀರು ಜಾಗತಿಕ ಸಮಸ್ಯೆ
Team Udayavani, Dec 18, 2018, 4:43 PM IST
ಹೊಸಪೆಟೆ: ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕರು ಸಂಶೋಧನೆಯ ಆಚೆಯೂ ಕ್ರಿಯಾಶೀಲರಾಗಿರುತ್ತಾರೆ ಎಂಬುದನ್ನು “ನೀರು ತಂದವರು” ಚಲನಚಿತ್ರ ಪ್ರತಿನಿಧಿಸುತ್ತಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ| ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಸೋಮವಾರ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ
ವತಿಯಿಂದ ಆಯೋಜಿಸಿದ್ದ ಡಾ| ಅಮರೇಶ ನುಗಡೋಣಿಯವರ ಕಥೆ ಆಧಾರಿತ “ನೀರು ತಂದವರು’ ಚಲನಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ದೃಶ್ಯ ಮಾಧ್ಯಮಕ್ಕೆ ಪ್ರತಿಕ್ರಿಯಿಸಲು ನಮಗೆ ಇನ್ನು ತಾಂತ್ರಿಕ ತರಬೇತಿ ದೊರೆತಿಲ್ಲ. ಆದ್ದರಿಂದ ಸಾಹಿತ್ಯಕವಾಗಿ ವಿಮರ್ಶೆ ಮಾಡಲಾಗುತ್ತದೆ. ಚಲನಚಿತ್ರವು
ಅತ್ಯಂತ ಹಿಡಿತವಾಗಿ ಲವಲವಿಕೆಯಿಂದ ಸಾಗುತ್ತದೆ. ಮಹಿಳೆಯ ಪಾತ್ರ ವಿಶೇಷವಾಗಿದೆ. ಪುರುಷರ ಅಹಂಕಾರ,
ರಾಜಕೀಯ, ಜಾತಿ ಸಂಘರ್ಷಗಳ ನಡುವೆ ಮಹಿಳೆಯರು ತಮ್ಮ ವಿವೇಕ ಮೆರೆಯುತ್ತಾರೆ. ವಾಸ್ತವಗಳನ್ನು ಮೀರುವ ಆದರ್ಶದ ಆಶಯ ಹಾಗೂ ಅಸ್ಪೃಶ್ಯತೆಯನ್ನು ಮುರಿಯುವ ಆಶಯ ಸಿನಿಮಾದಲ್ಲಿದೆ. ನೀರು ಕರ್ನಾಟಕದ ಊರು ಕೇರಿಗಳ ಸಮಸ್ಯೆ ಮಾತ್ರವಲ್ಲ. ಕರ್ನಾಟಕ ತಮಿಳುನಾಡು, ಪಾಕಿಸ್ತಾನ ಭಾರತ, ನೇಪಾಳ ಭಾರತಗಳ ನಡುವೆ ಇದ್ದು, ಇದೊಂದು ಜಾಗತಿಕ ಸಮಸ್ಯೆಯಾಗಿದೆ ಎಂದು ಹೇಳಿದರು.
ಕಥೆಗಾರ ಹಾಗೂ ಪ್ರಾಧ್ಯಾಪಕ ಡಾ| ಅಮರೇಶ ನುಗಡೋಣಿ ಮಾತನಾಡಿ, ನಾನು ಬರೆದ ಕಥೆಯಲ್ಲಿ ನೀರು ಸ್ವೀಕರಿಸಿಲ್ಲ. ಆದರೆ ಸಿನಿಮಾದಲ್ಲಿ ಕೇರಿಯವರಿಂದ ಊರಿನವರು ನೀರು ಸ್ವೀಕರಿಸುವ ದೃಶ್ಯವಿದೆ. ನನ್ನದು ಭಾಷಾ
ಮಾಧ್ಯಮ. ಕಥೆಗೂ ಸಿನಿಮಾಕ್ಕೂ ಬಹಳ ವ್ಯತ್ಯಾಸಗಳಿವೆ. ಸಿನಿಮಾದವರು ಒಂದು ಹೆಜ್ಜೆ ಮುಂದಿಟ್ಟು ನೀರನ್ನು
ಮಹಿಳೆಯರ ಮೂಲಕ ಊರಿಗೆ ತಲುಪಿಸಿದ್ದಾರೆ. “ನೀರು ತಂದವರು’ ಸಿನಿಮಾ ಪೂರ್ತಿ ಕಮರ್ಷಿಯಲ್
ಆಗಿಲ್ಲ ಅಥವಾ ಕಲಾತ್ಮಕವಾಗಿಯೂ ಇಲ್ಲ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಮಾತನಾಡಿ, ಸಿನಿಮಾದಲ್ಲಿನ ಪಾತ್ರಗಳು ನಿರ್ದೇಶಕರ ಕೈಯಲ್ಲಿರುತ್ತವೆ. 26 ವರ್ಷಗಳ ಹಿಂದೆ ನುಗಡೋಣಿ ಅವರು ಬರೆದ ಕಥೆಯನ್ನು 40 ಲಕ್ಷ ರೂ. ಬಂಡವಾಳದಲ್ಲಿ ಚಲನಚಿತ್ರ ಮಾಡಲಾಗಿದೆ.”ನೀರು ತಂದವರು’ ಚಲನಚಿತ್ರವು ಕ್ಯಾಲಿಫೋರ್ನಿಯ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್ ಹಾಗೂ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡಿದೆ. ಅಲ್ಲದೇ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದೆ. ನಿಮ್ಮೆಲ್ಲರ ಪ್ರೋತ್ಸಾಹ ಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಮಾತನಾಡಿದ ಕುಲಪತಿ ಡಾ| ಮಲ್ಲಿಕಾ ಎಸ್. ಘಂಟಿ, ಮೂಲ ಕೃತಿಯ ಆಶಯಕ್ಕೆ ಧಕ್ಕೆ ಬರದ
ಹಾಗೆ ಚಲನಚಿತ್ರ ಮಾಡಲಾಗಿದೆ. ಪ್ರೇಕ್ಷಕನ ಬಯಕೆಗೆ ತಕ್ಕಂತೆ ಸಾಹಿತ್ಯ ಕೃತಿಯನ್ನು ಬಗ್ಗಿಸುವುದು ನಿರ್ದೇಶಕರಿಗೆ
ನಿಜವಾಗಿಯೂ ಒಂದು ಸವಾಲಾಗಿದೆ. ಸಾಮಾಜಿಕ ಅಪಮಾನಗಳಿಗೆ ದೃಶ್ಯ ಮಾಧ್ಯಮ ಹಾಗೂ ಪ್ರೇಕ್ಷಕ ಹೇಗೆ
ಪ್ರತಿಕ್ರಿಯಿಸುತ್ತಾನೆ ಎಂಬುದು ಮುಖ್ಯ ಎಂದರು.
1970ರಿಂದ ಓದಿದ ದಲಿತ ಓದಲಾರದ ಜಮೀನಾರರ ನಡುವೆ ತಿಕ್ಕಾಟಗಳಿವೆ. ಇಂದಿಗೂ ನೀರು ಮತ್ತು ಜಾತಿಯ ಭಯಾನಕತೆ ಹಳ್ಳಿಗಳಲ್ಲಿ ಕಾಣಬಹುದು. ಚಲನಚಿತ್ರದಲ್ಲಿಯ ವಸ್ತ್ರಾಲಂಕಾರವು ಉತ್ತರ ಕರ್ನಾಟಕವನ್ನು
ಪ್ರತಿನಿಧಿಸುತ್ತದೆ. ನೀವು ಊರಿಗೆ ಹೋದಾಗ ಕೇರಿಯವರನ್ನು ಪ್ರೀತಿಸಲು ಕಲಿಯಿರಿ. ಊರು ಕೇರಿ ಬಂದಾಗ ಕೇರಿ
ಊರಿಗೆ ಹೋದಾಗ ಮಾತ್ರ “ನೀರು ತಂದವರು’ ಸಿನಿಮಾ ಸಾರ್ಥಕವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು
ಹೇಳಿದರು.
ಇದೇ ಸಂದರ್ಭದಲ್ಲಿ ಚಿಗುರು ಕ್ರಿಯೆಷನ್ಸ್ ತಂಡದ ವತಿಯಿಂದ ಡಾ| ಅಮರೇಶ ನುಗಡೋಣಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನಂತರ “ನೀರು ತಂದವರು’ ಚಲನಚಿತ್ರ ಪ್ರದರ್ಶಿಸಲಾಯಿತು. ಸಿಬ್ಬಂದಿಗಳು,
ವಿದ್ಯಾರ್ಥಿಗಳು ಕಸ್ತೂರ ಬಾ ಶಾಲೆಯ ಮಕ್ಕಳು, ಅಧ್ಯಾಪಕರು, ಚಲನಚಿತ್ರ ಕಲಾವಿದರು, ಕುಲಪತಿಯವರು
ಚಲನಚಿತ್ರ ವೀಕ್ಷಿಸಿದರು.
ಬಳಿಕ ನಡೆದ ಸಂವಾದದಲ್ಲಿ ಅಧ್ಯಾಪಕರಾದ ಡಾ| ಸಿದ್ದಗಂಗಮ್ಮ, ಡಾ| ವೀರೇಶ ಬಡಿಗೇರ, ಡಾ| ಮಲ್ಲಿಕಾರ್ಜುನ ವಣೇನೂರ, ಡಾ| ಅಮರೇಶ ಯತಗಲ್ ಹಾಗೂ ವಿದ್ಯಾರ್ಥಿಗಳಾದ ಸಂಗಮೇಶ, ರೇಖಾ, ಮಂಜುನಾಥ್, ಸಿದ್ದಪ್ಪ ಮಾದರ, ಪಂಚಾಕ್ಷರಿ ಸ್ವಾಮಿ ಹಿರೇಮಠ, ಗಾಯತ್ರಿ ಬಾವಿಕಟ್ಟೆ, ವಿಶ್ವನಾಥ ಪತ್ತಾರ, ಚೌಡಪ್ಪ, ಅನುಷಾ ಮೊದಲಾದವರು ಸಂವಾದಿಸಿದರು.
ಸಿನಿಮಾದಲ್ಲಿನ ಪಾತ್ರಗಳು ನಿರ್ದೇಶಕರ ಕೈಯಲ್ಲಿರುತ್ತವೆ. 26 ವರ್ಷಗಳ ಹಿಂದೆ ನುಗಡೋಣಿ ಅವರು ಬರೆದ ಕಥೆಯನ್ನು 40 ಲಕ್ಷ ರೂ. ಬಂಡವಾಳದಲ್ಲಿ ಚಲನಚಿತ್ರ ಮಾಡಲಾಗಿದೆ.”ನೀರು ದವರು’ ಚಲನಚಿತ್ರವು ಕ್ಯಾಲಿಫೋರ್ನಿಯ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ಹಾಗೂ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡಿದೆ. ನಿಡಸಾಲೆ ಪುಟ್ಟಸ್ವಾಮಯ್ಯ, ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ಹೊಸ ಸೇರ್ಪಡೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.