ಪುರಾತನ ಬಡವಿಲಿಂಗಕ್ಕೆ ಜಲಮುಕ್ತಿ!
Team Udayavani, Jul 20, 2017, 10:21 AM IST
ಹೊಸಪೇಟೆ: ಸದಾ ಜಲದಲ್ಲೇ ಇದ್ದು ಭಕ್ತರಿಗೆ ದರ್ಶನ ಭಾಗ್ಯ ನೀಡುತ್ತಿದ್ದ ಐತಿಹಾಸಿಕ ಹಂಪಿಯ ಬೃಹತ್ ಬಡವಿ ಲಿಂಗ(ಶಿವಲಿಂಗ) ಅಪರೂಪಕ್ಕೆ ಜಲಸ್ತಂಭನದಿಂದ ಹೊರಬಂದು ದರ್ಶನ ಭಾಗ್ಯ ನೀಡಿದ್ದಾನೆ.
ಹೌದು! ಹಂಪಿಯ ಪುರಾತನ ಬಡವಿ ಲಿಂಗ ದೇವಸ್ಥಾನ ಸದಾ ಕಾಲವೂ ನೀರಿ ನಿಂದ ಆವೃತ್ತವಾಗಿರುತ್ತದೆ. ಇಲ್ಲಿರುವ ಸುಮಾರು 3 ಮೀಟರ್ ಎತ್ತರದ ಏಕ ಶಿಲಾ ಬೃಹತ್ ಶಿವಲಿಂಗ ಯಾವಾಗಲೂ ನೀರಿನಲ್ಲೇ ಮುಳುಗಿರುತ್ತದೆ. ನೀರಿನಿಂದಾಗಿ ಶಿವಲಿಂಗದ ಪೂರ್ಣ ದರ್ಶನವಾಗುವುದೇ ಇಲ್ಲ. ಆದರೆ ಇತ್ತೀ ಚೆಗೆ ಶಿವಲಿಂಗ ಸಂಪೂರ್ಣ ಗೋಚರವಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ದೇವಾಲಯದಲ್ಲಿನ ಅಷ್ಟೂ ನೀರನ್ನು ಹೊರ ಹಾಕಿ ಸ್ವತ್ಛತಾ ಕಾರ್ಯ ಕೈಗೊಂಡಿದೆ. ಹೀಗಾಗಿ ಸಂಪೂರ್ಣ ಶಿವ ಲಿಂಗ
ದರ್ಶನವಾಗಿದೆ. ವರ್ಷವಿಡೀ ನೀರಿನಲ್ಲಿ ಮುಳುಗಿರುತ್ತಿದ್ದ ಶಿವಲಿಂಗ ಕಂಡಿದ್ದ ಭಕ್ತರು ನೀರು ಖಾಲಿಯಾದ ಸಂದರ್ಭದಲ್ಲಿ ಲಿಂಗದ ದರ್ಶನ ಪಡೆದು ಧನ್ಯರಾದರು.
ದೇವಾಲಯದಲ್ಲಿದ್ದ ನೀರನ್ನು ಹೊರಹಾಕುತ್ತಿದ್ದಂತೆ ವೃತ್ತಾಕಾರದ ಎತ್ತರದ ಶಿವ ಪೀಠವು ಸ್ಥಳದಲ್ಲಿದ್ದ ಕೆಲ ಭಕ್ತರಿಗೆ ಮಾತ್ರ ಗೋಚರವಾಯಿತು. ಹೀಗೆ ಶಿವಲಿಂಗದ ಸಂಪೂರ್ಣ ದರ್ಶನವಾಗುವುದ ಸಹ ಕೆಲ ಹೊತ್ತು ಮಾತ್ರ. ಕಾರಣ ಪುನಃ ದೇವಾಲಯದಲ್ಲಿ ನೀರು ಸಂಗ್ರಹವಾಗಿ ಬಡವಿ ಲಿಂಗದ ತಳ ಭಾಗ ಜಲಾವೃತವಾಗಿ, ವೀಕ್ಷಣೆಗೆ ಅವಕಾಶ ಸಿಗುವುದಿಲ್ಲ.
ಸುಮಾರು 3 ಮೀಟರ್ಗಳಷ್ಟು ಎತ್ತರವಾದ ಬೃಹದಾಕಾರದವಾದ ಶಿವ ಲಿಂಗವು ಪಕ್ಕ ದಲ್ಲಿರುವ ಉಗ್ರನರಸಿಂಹ ವಿಗ್ರಹ ದಂತೆ
ಏಕ ಶಿಲಾ ವಿಗ್ರಹವಾಗಿದ್ದು, ಅಲ್ಲಿಯೇ ದೊರೆತ ಹೆಬ್ಬಂಡೆಯಿಂದ ಕೆತ್ತಲ್ಪಟ್ಟಿದೆ. ಸನಿಹದಲ್ಲಿ ತ್ರೀವ ಕೃಷಿ ಚಟುವಟಿಕೆಯಿಂದ
ಈ ಭಗ್ನಗೊಂಡ ದೇವಾಲಯದಲ್ಲಿ ಸದಾ ಕಾಲವೂ ನೀರು ತುಂಬಿರುವುದರಿಂದ ಶಿವ ಲಿಂಗ ಪೀಠವೂ ನೀರಿನಲ್ಲಿ ಜಲಾವೃತವಾಗಿರುತ್ತದೆ. ಸ್ಥಾನಿಕವಾಗಿ ಈ ಶಿವ ಲಿಂಗವನ್ನು ವೃತ್ತಾಕಾರದ ಎತ್ತರ ಪೀಠ ಹಾಗೂ ಪ್ರನಾಳ ಸಹಿತ ಯೋನಿ ಪೀಠ ಹೊಂದಿದೆ. ಶಿವ ಲಿಂಗವು ಸ್ತಂಭಾ ಕೃತಿಯಲ್ಲಿದ್ದು, ಶಿರೋಭಾಗ ಸ್ವಲ್ಪ ಚಪ್ಪಟೆಯಾಗಿದೆ. ಸೋಮ ಸೂತ್ರದ ಬಳಿಯಲ್ಲಿ ಮೂರು ಕಣ್ಣುಗಳನ್ನು ಚಿತ್ರಿಸಲಾಗಿದೆ. ಗರ್ಭ ಗೃಹದ ಕಟ್ಟಡವನ್ನು ಕಲ್ಲು, ಇಟ್ಟಿಗೆ ಮತ್ತು ಗಾರೆಯಿಂದ ನಿರ್ಮಿಸಲಾಗಿದೆ. ಸ್ಥಾನಿಕವಾಗಿ ಈ ದೇವಾಲಯವನ್ನು ಬಡವಿಯಾದ ಹೆಣ್ಣು ಮಗಳು ಕಟ್ಟಿಸಿದಳೆಂದು ಉಲ್ಲೇಖೀಸಲಾಗಿದೆ. ಹೀಗಾಗಿ ಈ ಶಿವ ಲಿಂಗವನ್ನು ಬಡವಿ ಲಿಂಗ ಎಂದು ಕರೆಯಲಾಗುತ್ತಿದೆ.
ಪಿ. ಸತ್ಯನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.