15 ವರ್ಷಗಳಲ್ಲಿ ಬಳ್ಳಾರಿ ಜಿಲ್ಲೆಗೆ ರಾಮುಲು ಕೊಡುಗೆ ಏನು?: ಖರ್ಗೆ


Team Udayavani, Oct 27, 2018, 4:17 PM IST

dvg-5.jpg

ಸಂಡೂರು: ಬಳ್ಳಾರಿ ಜಿಲ್ಲೆಗೆ ಕಳೆದ 15 ವರ್ಷಗಳಲ್ಲಿ ನೀವು ಕೊಟ್ಟ ಕೊಡುವೆ ಏನು? ಎಂಬುದನ್ನು ಶ್ರೀರಾಮುಲು ಅವರೇ ನೀವು ಉತ್ತರಿಸಬೇಕೆಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಪ್ರಶ್ನಿಸಿದರು.

ತಾಲೂಕಿನ ತೋರಣಗಲ್ಲಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಪರ ಆಯೋಜಿಸಿದ್ದ ಚುನಾವಣಾ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಹಿಂದೆ 371(ಜೆ) ತರಲು ವಿರೋಧಿಸಿದ್ದರು. ಆದರೆ ಕಾಂಗ್ರೆಸ್‌ ಪಕ್ಷ ಅದನ್ನು ಜಾರಿಗೊಳಿಸಿತು. 

ಸೋನಿಯಾ ಪ್ಯಾಕೇಜ್‌ನಡಿ ಬಳ್ಳಾರಿಯಲ್ಲಿ ಥರ್ಮಲ್‌ಪವರ್‌ ಪ್ರಾರಂಭವಾಯಿತು. ಲಕ್ಷಾಂತರ ಮನೆಗಳ ನಿರ್ಮಾಣವಾದವು. ಕಾರ್ಖಾನೆಗಳು ಸ್ಥಾಪನೆಯಾದವು. ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ ಯೋಜನೆಗಳು ಜಾರಿಗೆ ತರುವ ಮೂಲಕ ಹಸಿವು ಮುಕ್ತ ಕರ್ನಾಟಕವನ್ನಾಗಿ ಮಾಡಿದ್ದೇವೆ. ಆದರೆ ಶ್ರೀರಾಮುಲು ಅವರೇ ಬಳ್ಳಾರಿ ಜನತೆಗೆ ನಿಮ್ಮ ಕೊಡುಗೆ ಏನು ಎಂದು ಮತ್ತೂಮ್ಮೆ ಪ್ರಶ್ನಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್‌ ಮಾತನಾಡಿ, ಶ್ರೀರಾಮುಲು ಅಣ್ಣನವರೇ, ಶಾಂತಕ್ಕನವರೇ ನಾವು ಜನರ ಕಷ್ಟಗಳಿಗೆ ಸ್ಪಂದಿಸಲು ಬಂದಿದ್ದೇವೆ. ಉಗ್ರಪ್ಪನವರು ಬೇರೆ ಜಿಲ್ಲೆಯವರಾಗಿರಬಹುದು. ಆದರೆ ಸಂವಿಧಾನಬದ್ಧವಾಗಿ ಇಲ್ಲಿ ಸ್ಪರ್ಧಿಸಿದ್ದಾರೆ.

ಆದರೆ ನೀವೇಕೆ ಬಾದಾಮಿಗೆ ಹೋದಿರಿ, ಮೊಳಕಾಲ್ಮೂರುಗೆ ಹೋಗಿದ್ದೀರಿ ಅದಕ್ಕೆ ಉತ್ತರಿಸಿ. ಈ ರಾಜ್ಯದಲ್ಲಿ ಎಲ್ಲಾ ವರ್ಗದ ಜನತೆಗೆ ಸಮಪಾಲು-ಸಮಬಾಳು ತತ್ವವನ್ನು ಈ ಸಮ್ಮಿಶ್ರ ಸರ್ಕಾರ ಪಾಲಿಸುತ್ತಿದೆ. ಜೈಲಿಗೆಕಳುಹಿಸುತ್ತೀನಿ ಎನ್ನುತ್ತೀರಿ, ನೀವೇನು ಜಡೆ, ನಾನು ತೀರ್ಮಾನಿಸಲು ನಾನು ಜಡ್‌‌ ಅಲ್ಲ, ಅದಕ್ಕೆ ಕಾನೂನು ಇದೆ, ಸಂವಿಧಾನ ಇದೆ. ಇನ್ನು ಜನರಿಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದವರಲ್ಲ, ನುಡಿದಂತೆ ನಡೆದು ಅಧಿಕಾರ ನಡೆಸುತ್ತಿದ್ದೇವೆ ಎಂದು ಶ್ರೀರಾಮುಲುಗೆ ತಿರುಗೇಟು ನೀಡಿದರು. 

ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಮಾತನಾಡಿ, ಎಲ್ಲಿ ಹೋದರೂ ನಾನು ವಾಲ್ಮೀಕಿ ಎನ್ನುತ್ತೀರಿ, ಉಗ್ರಪ್ಪ, ತುಕಾರಾಂ ವಾಲ್ಮೀಕಿಯಲ್ಲವೇ. ವಾಲ್ಮೀಕಿ ಸಮುದಾಯದಲ್ಲಿ ಯಾವ ವ್ಯಕ್ತಿಯನ್ನು ಬೆಳೆಯಲು ಬಿಟ್ಟಿದ್ದೀರಿ. ಅಧಿಕಾರಕ್ಕಾಗಿ ಹಲವಾರು ಬಾರಿ ರಾಜೀನಾಮೆ ನೀಡಿದ್ದೀರಿ. ನೀವು ನೀಡಿದ ರಾಜೀನಾಮೆ ಸ್ಥಳೀಯರಿಗೆ ಉದ್ಯೋಗ ಕೊಡಿಸಲು, ತುಂಗಭದ್ರಾ ನದಿಯ ಹೂಳೆತ್ತಲೋ, ರಸ್ತೆ ನಿರ್ಮಿಸಲೊ, ರೈತರ ಸಾಲಮನ್ನಾಕ್ಕಾಗಿಯೋ ಹೇಳಿ, ಯಾವುದಕ್ಕೆ ರಾಜೀನಾಮೆ ನೀಡಿದ್ದೀರಿ. ಬರೀ ರಾಜಕೀಯ ಲಾಭಕ್ಕಾಗಿ ಎಂದು ಕುಟುಕಿದರು.

ಆದರೆ ನಿಜವಾದ ವಾಲ್ಮೀಕಿಗಳಾದ ನಾವು ಸಂವಿಧಾನಬದ್ದ ಹಕ್ಕುಗಳನ್ನು ವಾಲ್ಮೀಕಿ ಸಮಾಜಕ್ಕೆ ಕೊಡಿಸಿದ್ದೇವೆ. ಬೆಂಗಳೂರಿನಲ್ಲಿ 2.5 ಎಕರೆ ಭೂಮಿಯಲ್ಲಿ ವನ ಸ್ಥಾಪಿಸಿದ್ದೇವೆ. ವಿಧಾನಸೌಧದ ಮುಂದೆ ವಾಲ್ಮೀಕಿ ಪುತ್ಥಳಿ ಸ್ಥಾಪಿಸಿದ್ದೇವೆ. ನೂರಾರು ಸಮಾಜದ ನಾಯಕರನ್ನು ಬೆಳೆಸಿದ್ದೇವೆ. ಆದರೆ ನೀವು ಮಾಡಿದ್ದೇನು. ಬರೀ ಕುಟುಂಬದ ಸದಸ್ಯರೇ ಸ್ಪರ್ಧಿಸಬೇಕು. ನಮ್ಮ ಕೈಯಲ್ಲಿಯೇ ಇರಬೇಕು ಎನ್ನುದು. ಆದರೆ ವಾಲ್ಮೀಕಿ ಹೇಳಿದ್ದು ಸಮಪಾಲು, ಸಮಬಾಳು, ವರ್ಗರಹಿತ, ವರ್ಣರಹಿತ, ಜಾತಿ ರಹಿತ ಸಮಾನತೆಯ ರಾಮರಾಜ್ಯ ಅಂತಹ ಕೆಲಸ ಮಾಡುವವರು ನಾವು ನಿಜವಾದ ವಾಲ್ಮೀಕಿಗಳು ಎಂದು ಜಾತಿ ರಾಜಕಾರಣ ಟೀಕಿಸುವ ಮೂಲಕ ಟಾಂಕ್‌ ನೀಡಿದರು.

ಶಾಸಕ ಈ.ತುಕಾರಾಂ ಮಾತನಾಡಿದರು. ಜೆಡಿಎಸ್‌ ಜಿಲ್ಲಾಧ್ಯಕ್ಷ ಕೆ.ಶಿವಪ್ಪ, ಮಾಜಿ ಸಚಿವ ಅಮರೇಗೌಡ ಬೈಯಾಪುರ, ಡಿಸಿಸಿ ಅಧ್ಯಕ್ಷ ಶಿವಯೋಗಿ, ಕೆ.ಎಸ್‌.ಎಲ್‌. ಸ್ವಾಮಿ, ಸಿರಾಜ್‌ಶೇಖ್‌, ಆಶಾಲತಾ ಸೊಮಪ್ಪ, ಸತೀಶ್‌, ಏಕಾಂಬರಪ್ಪ ಇನ್ನಿತರರಿದ್ದರು.

ಟಾಪ್ ನ್ಯೂಸ್

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

1-eqwqwewe

Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ

13-

Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ

Sanduru-BJP-Cong-Candidates

Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ

Bellary-BYV

Covid Scam: ನ್ಯಾ.ಡಿ.ಕುನ್ಹಾ ವರದಿ ವಿಪಕ್ಷಗಳ ಬೆದರಿಸುವ ತಂತ್ರ: ಬಿ.ವೈ.ವಿಜಯೇಂದ್ರ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.