ಅಧ್ಯಕ್ಷರ ಮುಂದೆ ಕಣ್ಣೀರಿಟ್ಟ ಮಹಿಳಾ ಕೈದಿಗಳು
Team Udayavani, Jun 13, 2018, 11:52 AM IST
ಬಳ್ಳಾರಿ: ನಗರದ ಕೇಂದ್ರ ಕಾರಾಗೃಹದ ಮಹಿಳಾ ಕೈದಿಗಳ ವಿಭಾಗಕ್ಕೆ ಮಂಗಳವಾರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಭೇಟಿ ನೀಡಿ, ಅಲ್ಲಿನ ಮಹಿಳಾ ಕೈದಿಗಳ ಕುಶಲೋಪರಿ ವಿಚಾರಿಸಿದರು.
ಕಾರಾಗೃಹದಲ್ಲಿ ಸಾಲಾಗಿ ನಿಂತಿದ್ದ ಮಹಿಳಾ ಕೈದಿಗಳನ್ನು ಒಬ್ಬೊರನ್ನಾಗಿ ಮಾತನಾಡಿಸಿದ ನಾಗಲಕ್ಷ್ಮೀಬಾಯಿ,
ಮಹಿಳೆಯರು ಜೈಲಿಗೆ ಬರಲು ಕಾರಣವೇನು? ಯಾವ ಪ್ರಕರಣ ಸೇರಿ ಮಕ್ಕಳ ಅಪಹರಣ, ಕೊಲೆ ಇತರೆ
ವಿಷಯಗಳ ಕುರಿತು ವಿಚಾರಿಸಿದರು.
ಈ ವೇಳೆ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಅವರ ಮುಂದೆ ಕಣ್ಣೀರಿಟ್ಟ ಸಹೋದರನ ಪುತ್ರನನ್ನು ಅಪಹರಿಸಿ, ಕೊಲೆಗೈದಿರುವ ಆರೋಪದಡಿ ಬಂಧಿತಳಾಗಿದ್ದ ಕೈದಿ ನಾಗಮ್ಮ, ನನಗೆ ಜೈಲಲ್ಲಿ ಜೀವನ ಮಾಡಲಿಕ್ಕೆ ಆಗುತ್ತಿಲ್ಲ. ಸಾಧ್ಯವಾದಷ್ಟು ಬೇಗ ನನ್ನನ್ನು ಹೊರಗಡೆ ಕಳಿಸಿಕೊಡಿ. ಕೂಲಿ-ನಾಲಿ ಮಾಡಿ ಜೀವನ ಮಾಡುತ್ತೇನೆ. ನನ್ನಪರ
ವಕೀಲರಿಗೆ ಹಣ ಜೋಡಿಸಿ ಸಾಕಾಗಿದೆ.
ನಾನು ನನ್ನ ಸಹೋದರನ ಪುತ್ರನನ್ನು ಅಪಹರಿಸಿ ಬೇರೆಯವರಿಗೆ ನೀಡಿದ್ದೇನೆ ಅಷ್ಟೇ. ಅದನ್ನೇ ದೊಡ್ಡದು ಮಾಡಿ ಕೌಲ್ ಬಜಾರ್ ಪೊಲೀಸರು ನನ್ನನ್ನು ಲಾಠಿಯಿಂದ ಹೊಡೆದು, ಅಪಹರಣ, ಕೊಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಕಣ್ಣೀರಿಟ್ಟರು. ಮಗು ಅಪಹರಣದ ಆರೋಪದಡಿ ಜೈಲು ಸೇರಿರುವ ಮೂವರು ಮಂಗಳಮುಖೀಯರು, ಮಗುವನ್ನು ದತ್ತು ಪಡೆದಿದ್ದು ನಿಜ. ಆದರೆ, ದತ್ತು ಪಡೆದ ಬಗ್ಗೆ ಯಾವುದೇ ದಾಖಲೆಗಳು ನಮ್ಮ ಬಳಿಯಿರಲಿಲ್ಲ. ಅದಕ್ಕಾಗಿಯೇ ದತ್ತು ಪಡೆದ ಮಗುವನ್ನು ಅಪಹರಿಸಿದ್ದಾರೆಂದು ಅಪಹರಣ ಪ್ರಕರಣ ದಾಖಲಿಸಲಾಗಿದೆ ಎಂದು ಅಳಲು ತೋಡಿಕೊಂಡರು.
ಇದೇ ವೇಳೆ 18 ವರ್ಷದೊಳಗೆ ಮದುವೆ ಮಾಡಿಕೊಂಡಿದ್ದ ಆರೋಪದಡಿ ಬಂಧಿತರಾದ ಯುವತಿಯನ್ನೂ ವಿಚಾರಿಸಲಾಯಿತು. ನಂತರ ಮಹಿಳಾ ಕೈದಿಗಳು ವಾಸವಿರುವ ಕೊಠಡಿ, ಕಾರಾಗೃಹದ ಅಡುಗೆ ಮನೆ, ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ ಮರಣದಂಡನೆ ವಿಧಿಸುವ ಬ್ರಿಟಿಷರ ಕಾಲದ ನೇಣುಗಂಬ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ವೆಂಕಟರಮಣ, ಆಪ್ತ ಕಾರ್ಯದರ್ಶಿ ಪುರುಷೋತ್ತಮ, ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ| ಪಿ.ರಂಗನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಾಗೇಶ ಬಿಲ್ವ, ಸಂಚಾರ ನಿಯಂತ್ರಣ ಪೊಲೀಸ್ ಠಾಣೆ ಪಿಎಸ್‌ಐ ಚಂದ್ರಹಾಸ, ಜೈಲು ಆಸ್ಪತ್ರೆ ವೈದ್ಯ ಡಾ| ಎಸ್.ಆರ್.ಗುಪ್ತಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ವಾರ್ತಾಧಿಕಾರಿ ಬಿ.ಕೆ.ರಾಮಲಿಂಗಪ್ಪ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.