ಕೃಷಿ ಅರಣ್ಯ-ಬದು ಬೇಸಾಯಕ್ಕೆ ಒತ್ತು
Team Udayavani, Jun 5, 2021, 10:16 AM IST
ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಅವಿಭಜಿತ ಬಳ್ಳಾರಿ ಜಿಪಂ ಕೃಷಿ ಅರಣ್ಯೀಕರಣಕ್ಕೆ ಮತ್ತು ಬದುಬೇಸಾಯಕ್ಕೆ ಒತ್ತು ನೀಡಿದೆ. ನರೇಗಾ ಅಡಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ವಿವಿಧ ರೀತಿಯ ಕೆಲಸಗಳನ್ನು ಸದ್ದಿಲ್ಲದೇ ಕೈಗೊಳ್ಳುವಮೂಲಕ ಗಮನಸೆಳೆದಿರುವುದು ವಿಶೇಷ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದಮಣ್ಣು ಮತ್ತು ತೇವಾಂಶ ಸಂರಕ್ಷಣೆಯ ಕಾಮಗಾರಿಗಳು, ಬ್ಲಾಕ್ ನೆಡುತೋಪುಕಾಮಗಾರಿಗಳು, ರಸ್ತೆ ಬದಿ ನೆಡುತೋಪು ಕಾಮಗಾರಿಗಳು, ಕೃಷಿ ಅರಣ್ಯೀಕರಣ,ಬದು ಬೇಸಾಯ ಸೇರಿದಂತೆ ಇನ್ನಿತರ ಕೃಷಿ ಚಟುವಟಿಕೆ ಮೂಲಕ ಪರಿಸರ ಸಂರಕ್ಷಣೆಮತ್ತು ಅರಣ್ಯೀರಣ ಕಾರ್ಯವನ್ನು ಅವಿಭಜಿತ ಬಳ್ಳಾರಿ ಜಿಪಂ ಮಾಡುತ್ತಿದೆ.
ಬಳ್ಳಾರಿ ಮತ್ತು ವಿಯಯನಗರ ಅವಳಿ ಜಿಲ್ಲೆಗಳ ಸಾಮಾಜಿಕ ಅರಣ್ಯ ವಿಭಾಗ ವ್ಯಾಪ್ತಿಗೆಬರುವ ಸಾಮಾಜಿಕ ಅರಣ್ಯ ವಲಯಗಳಲ್ಲಿ2021ನೇ ಮಳೆಗಾಲಕ್ಕೆ ಕೃಷಿ ಅರಣ್ಯ ಮತ್ತುಬದು ಬೇಸಾಯಕ್ಕಾಗಿ ಅನೇಕ ರೀತಿಯಸಸಿಯ ತಳಿಗಳನ್ನು ಬೆಳೆಸಲಾಗಿದೆ.
ಕೃಷಿ ಅರಣ್ಯ ಮತ್ತು ಬದು ಬೇಸಾಯಕ್ಕಾಗಿ ಬೆಳೆಸಿದ ಸಸಿಗಳ ವಿವರ: ಅವಳಿ ಜಿಲ್ಲೆಗೆ ಒಳಪಟ್ಟಂತೆ ಕೃಷಿ ಅರಣ್ಯೀಕರಣಕ್ಕೆ 2,27,050 ಸಸಿಗಳನ್ನು ಬೆಳೆಸಲಾಗಿದೆ.ಬದು ಬೇಸಾಯಕ್ಕಾಗಿ 4.30ಲಕ್ಷ ಸಸಿಗಳನ್ನುಬೆಳೆಸಲಾಗಿದೆ. ಬದು ಬೇಸಾಯಕ್ಕಾಗಿ ಶ್ರೀಗಂಧ, ಸೀಮಾರೂಬ, ಮಹಾಗನಿ, ನಿಂಬೆ, ಕರಿಬೇವು, ನೆಲ್ಲಿ, ಪೇರಲ, ಹುಣಸೆ, ಸಾಗುವಾನಿ, ನುಗ್ಗೆ, ಗೊಬ್ಬರಗಿಡ, ಸಿಲ್ವರ್‌ಓಕ್ ಬಿದಿರು, ಬೇವು, ಸೀತಾಫಲ, ಹಿಪ್ಪೆ, ಸಿಹಿಹುಣಸೆ, ನೆರಳೆ, ಹಲಸು, ನಾಯಿನೆರಳೆ, ಪಪ್ಪಾಯ ಸೇರಿದಂತೆ ವಿವಿಧ ರೀತಿಯ ಸಸಿಗಳನ್ನು ಬೆಳೆಸಲಾಗಿದೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ತಿಳಿಸಿದ್ದಾರೆ. ಕೃಷಿ ಅರಣ್ಯ ಮತ್ತು ಬದು
ಬೇಸಾಯದಿಂದಾಗುವ ಪ್ರಯೋಜನ: ಕೃಷಿ ಅರಣ್ಯ ಮತ್ತು ಬದು ಬೇಸಾಯಕ್ಕೆಸಸಿಗಳನ್ನು ನೆಡುವುದರಿಂದ ಅಸಾಧಾರಣ ಮಳೆ ಬಂದಾಗ ಬೆಳೆದ ಬೆಳೆಗೆ ಹೆಚ್ಚಿನ ರೀತಿಯ ತೊಂದರೆಯಾಗುವುದಿಲ್ಲ. ನೀರಿನ ಹರಿಯುವಿಕೆಯನ್ನು ಸಸಿಗಳು ತಡೆಯುವುದರಿಂದ ಸಂಪೂರ್ಣ ಬೆಳೆ ಹಾನಿಯ ಸಾಧ್ಯತೆ ಕಡಿಮೆಯಿರುತ್ತದೆ. ಬದುಗಳನ್ನು ನಿರ್ಮಾಣ ಮಾಡಿ, ಸಸಿಗಳನ್ನು ನೆಡುವುದರಿಂದ ಭೂಮಿಯ ಮಣ್ಣಿನ ಫಲವತ್ತತೆ ಹೆಚ್ಚಳವಾಗುವುದರಜೊತೆಗೆ ಕೀಟ ಮತ್ತು ರೋಗಗಳ ಬಾಧೆ ನಿಯಂತ್ರಿಸಬಹುದಾಗಿದೆ.
ಬೆಳೆಗಳ ವೈವಿಧ್ಯತೆ ಹೆಚ್ಚಳದಿಂದ ಹೆಚ್ಚಿನ ಲಾಭವಾಗುತ್ತದೆ. ಪರಿಸರ ಸಂರಕ್ಷಣೆಗೆ ಅನುಕೂಲವಾಗುತ್ತದೆ. ಕೃಷಿ ಅರಣ್ಯಕ್ಕೆ ಸಸಿಗಳನ್ನು ನೆಡುವುದು ಮತ್ತು ಬದುಗಳ ನಿರ್ಮಾಣ ಕಾರ್ಯದಲ್ಲಿ ಕೈಗೊಳ್ಳುವುದು ಅನೇಕರಿಗೆ ಉದ್ಯೋಗ ಸೃಷ್ಟಿಸಿದಂತೆ ಆಗುತ್ತದೆ. ಸಂಪನ್ಮೂಲಗಳ ಸಂಪೂರ್ಣ ಬಾಳಿಕೆ ಸಾಧ್ಯವಾಗುತ್ತದೆ. ವಿಭಿನ್ನ ರೀತಿಯ ಸಸಿಗಳ ಬೆಳವಣಿಗೆಯಿಂದಾಗಿ ಜಾಗತಿಕ ತಾಪಮಾನ ಏರಿಕೆ ನಿಯಂತ್ರಣಕ್ಕೆ ಬರುತ್ತದೆ. ಒಂದೇ ಬೆಳೆ ಬದಲಿಗೆ ಬಹುಬೆಳೆ ಪದ್ಧತಿಯನ್ನು ಅಳವಡಸಿಕೊಂಡರೆ ಒಂದೇ ಸೂರಿನಡಿಯಲ್ಲಿ ಇಡೀ ಕುಟುಂಬಕ್ಕೆ ಪೌಷ್ಠಿಕ ಆಹಾರ ಪೂರೈಸುವ ಮೂಲಕ ಕುಟುಂಬ ಸದಸ್ಯರ ಪೌಷ್ಠಿಕ ಆಹಾರ ಮಟ್ಟ ಮತ್ತು ಆರೋಗ್ಯ ಸುಧಾರಣೆಯಾಗುತ್ತದೆ. ಇವೆಲ್ಲವನ್ನು ಹೊರೆತುಪಡಿಸಿ ಜೇನು ಕೃಷಿ ಚಟುವಟಿಕೆ ಅಳವಡಿಸಿಕೊಳ್ಳಬಹುದಾಗಿದೆಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ವಿವರಿಸುತ್ತಾರೆ.
ಸಸಿಗಳನ್ನು ಪಡೆಯಲು ಸಂಪರ್ಕಿಸಬೇಕಾದವರ ವಿವರ: ಕೃಷಿ ಅರಣ್ಯ ಮತ್ತು ಬದು ಬೇಸಾಯಕ್ಕಾಗಿ ಬೇಕಾದ ಸಸಿಗಳನ್ನು ಪಡೆಯಲು ಬಳ್ಳಾರಿ ವ್ಯಾಪ್ತಿಯ ಶಿವಪುರ ಸಸ್ಯಕ್ಷೇತ್ರ 9448567952,9964048059, ಕುರುಗೋಡು 9448567952, 9964048059, ಹಡಗಲಿಯ ಕೊಮಾರನಹಳ್ಳಿ ತಾಂಡ ಸಸ್ಯಕ್ಷೇತ್ರ 7899638144 7619461705,ಹಗರಿಬೊಮ್ಮನಹಳ್ಳಿಯ ಮಾಲವಿ ಸಸ್ಯಕ್ಷೇತ್ರ 9902794977, 7026976711, ಹೊಸಪೇಟೆ ಮತ್ತು ಕಂಪ್ಲಿಯ ಗುಂಡಾ ಸಸ್ಯಕ್ಷೇತ್ರ 9902794977, 9740515242, ಹರಪನಹಳ್ಳಿಯ ದ್ಯಾಪನಾಯಕನಹಳ್ಳಿ ಸಸ್ಯಕ್ಷೇತ್ರ 8762606007 7760974131, ಕೂಡ್ಲಿಗಿ ಮತ್ತು ಕೊಟ್ಟೂರು ಲೊಟ್ಟನಕೆರೆಸಸ್ಯಕ್ಷೇತ್ರ 9663578364, 9901978830ಮತ್ತು ನಾಣ್ಯಾಪುರ ಸಸ್ಯಕ್ಷೇತ್ರ9663578364, 9148493925 ಸಂಡೂರಿನಸೋವೇನಹಳ್ಳಿ ಸಸ್ಯಕ್ಷೇತ್ರ 9845677378, 9008890801, ಸಿರುಗುಪ್ಪ ತಾಲೂಕಿನಶಾನವಾಸಪುರ ಸಸ್ಯಕ್ಷೇತ್ರ 7975179404, 9663543102 ಗೆ ಸಂಪರ್ಕಿಸಿ ಬೇಕಾದ ಸಸಿಗಳನ್ನು ಪಡೆಯಬಹುದಾಗಿದೆ.
ಲಾಕ್‌ಡೌನ್ ಸಮಯದಲ್ಲಿ ಹಳ್ಳಿಗರಿಗೆ ನರೇಗಾ ಸಾಥ್: ಕೊರೊನಾ ಸಮಯದಲ್ಲೂ ಕ್ರಿಯಾಶೀಲವಾಗಿ ಕೆಲಸ ಮಾಡಿದ ಕೀರ್ತಿ ಗ್ರಾಮಾಣಾಭಿವೃದ್ಧಿ ಮತ್ತು ಫಂಚಾಯತ್ ರಾಜ್ ಇಲಾಖೆಗೆ ಸಲ್ಲುತ್ತದೆ. ನಗರಗಳಿಂದ ಉದ್ಯೋಗ ಕಳೆದುಕೊಂಡು ಹಳ್ಳಿಯ ಕಡೆಗೆತೆರಳಿದವರಿಗೆ ದಿನದೂಡಲು ಕಷ್ಟವಾದ ಸಮಯದಲ್ಲಿ ನರೇಗಾ ಮೂಲಕ ಅವರಿಗೆ ಕೆಲಸ ಕೊಟ್ಟು ತಮ್ಮ ತಮ್ಮ ಊರುಗಳಲ್ಲಿಯೇನೆಮ್ಮದಿ ಜೀವನ ನಡೆಸಲು ನೆರವಾಗಿದೆ. ಪ್ರತಿ ಕುಟುಂಬಕ್ಕೆ 100 ದಿವಸ ಕೆಲಸದಖಾತರಿ ಮಾಡಿ ದಿನಕ್ಕೆ ರೂ.289 ಕೂಲಿನೀಡಲಾಗುತ್ತದೆ. ಕೋವಿಡ್ ಸಮಯದಲ್ಲಿ ಕೂಡ ಕೆಲಸ ಬೇಡುವ ಕೈಗಳಿಗೆ ಕೆಲಸ ಕೊಡಲಾಗುತ್ತದೆ. ಕೆಲಸ ಮತ್ತು ಕಾಮಗಾರಿಬೇಡಿಕೆ ಸಲ್ಲಿಸಲು ಹತ್ತಿರದ ಗ್ರಾಮಪಂಚಾಯಿತಿ ಸಂಪರ್ಕಿಸಬಹುದು.
ಅಥವಾ ಕಾಯಕ ಮಿತ್ರ ಮೊಬೈಲ್ ಆ್ಯಪ್ ಮೂಲಕ ಸಲ್ಲಿಸಿ, ಇಲ್ಲವೆ ಉಚಿತ ಸಹಾಯವಾಣಿ ಸಂಖ್ಯೆ:1800 425 666ಗೆ ಸಂಪರ್ಕಿಸಬಹುದು. ಕೊರೊನಾ ಸೋಂಕು ತಡೆಯುವ ಮುಂಜಾಗ್ರಾತಾ ಕ್ರಮಗಳ ಅನ್ವಯ ಉದ್ಯೋಗ ಖಾತರಿ ಕಾಮಗಾರಿ ಸ್ಥಳದಲ್ಲಿ 2 ಮೀಟರ್ ವೈಯಕ್ತಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಕೈಗಳನ್ನು ಆಗಾಗ್ಗೆ ಸೋಪು/ಸ್ಯಾನಿಟೈಸ್ ಮಾಡುವ ಮೂಲಕ ಕೆಲಸ ಮಾಡಲಾಗುತ್ತದೆ.
“ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಇದು ಕೇವಲ ಬಾಯಿಮಾತಿಗೆ ಸೀಮಿತವಾಗದೆ ಪ್ರತಿಯೊಬ್ಬರು ಗಿಡಗಳನ್ನು ಬೆಳೆಸುವುದರ ಜೊತೆಗೆ ಪರಿಸರ ಉಳಿಸುವ ಕೆಲಸಕ್ಕೆ ಮುಂದಾಗೋಣ’ ಪರಿಸರದ ದಿನದಂದು ಎಲ್ಲರೂ ತಮ್ಮ ತಮ್ಮ ಮನೆಗಳ ಮುಂದೆ ಒಂದೊಂದು ಗಿಡವನ್ನು ನೆಡುವ ಮೂಲಕಇತರರು ಇದನ್ನು ಪಾಲಿಸುವಂತೆ ಮಾಡಿ, ಮುಂದಿನ ಪೀಳಿಗೆಗೆ ಸಮೃದ್ಧವಾದ, ಸ್ವಚ್ಛವಾದ ಪರಿಸರವನ್ನು ನೀಡೋಣ ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.