ಭಾರತೀಯ ಸಂಸ್ಕೃತಿಗೆ ಯಾಲೆ ವಿವಿ ತಂಡ ಫಿದಾ!
Team Udayavani, Jun 20, 2018, 10:22 AM IST
ಕಂಪ್ಲಿ: ಐತಿಹಾಸಿಕ ಹಂಪಿಯ ವಿಜಯನಗರ ಸಾಮ್ರಾಜ್ಯದ ಪರಂಪರೆಯ ಕಿನ್ನಾಳ ಶೈಲಿಯ ಸಂಪ್ರದಾಯಿಕ ಚಿತ್ರಕಲೆ ಅಧ್ಯಯನಕ್ಕೆ ಅಮೆರಿಕದ ಕ್ಯಾಲಿಪೋರ್ನಿಯಾದ ಯಾಲೆ ವಿವಿಯ ತಂಡ ಮಂಗಳವಾರ ಕಂಪ್ಲಿಗೆ ಭೇಟಿ ನೀಡಿ ಮಾಹಿತಿ
ಸಂಗ್ರಹಿಸಿತು.
ಜಗತ್ತಿನಲ್ಲಿಯೇ ಭಾರತೀಯ ಕಲೆ, ಸಂಸ್ಕೃತಿ ಅತ್ಯಂತ ವಿಶಿಷ್ಟವಾಗಿದ್ದು, ಇದನ್ನು ಅಭ್ಯಸಿಸಲು ಜಗತ್ತಿನ ವಿವಿಧ ದೇಶಗಳ ವಿದ್ಯಾರ್ಥಿಗಳು, ಉಪನ್ಯಾಸಕರು, ಇತಿಹಾಸ ತಜ್ಞರು ಭಾರತಕ್ಕೆ ಆಗಮಿಸುತ್ತಾರೆ. ಅಂತೆಯೇ ವಿಶಿಷ್ಟ ಚಿತ್ರಕಲೆ ಹೊಂದಿರುವ ಪಟ್ಟಣದ ಹಿರಿಯ ಜನಪದ ಕಲಾವಿದ ಪರುಶುರಾಮಪ್ಪ ಚಿತ್ರಗಾರ ಮನೆಗೆ ಕ್ಯಾಲಿಪೋರ್ನಿಯಾದ ಯಾಲೆ ವಿವಿಯ ಇತಿಹಾಸ ಹಾಗೂ ಸಂಸ್ಕೃತಿ ವಿಭಾಗದ ವಿದ್ಯಾರ್ಥಿಗಳು, ಉಪನ್ಯಾಸಕರು ಭೇಟಿ ನೀಡಿ ವಿಜಯನಗರ ಪರಂಪರೆಯ ಕಿನ್ನಾಳ ಶೈಲಿಯ ಸಾಂಪ್ರದಾಯಿಕ ಚಿತ್ರಕಲೆ ವೀಕ್ಷಿಸಿ ಸೂಕ್ತ ಮಾಹಿತಿ ಪಡೆದರು.
ಕಂಪ್ಲಿಯ ಹಿರಿಯ ಜನಪದ ಕಲಾವಿದ ಪರುಶುರಾಮಪ್ಪ ಚಿತ್ರಗಾರ ಅವರು ಕಟ್ಟಿಗೆ, ಮಣ್ಣಿನಿಂದ ತಯಾರಿಸಿದ ರಥಗಳಿಗೆ ಅಲಂಕಾರಕ್ಕಾಗಿ ಬಳಸುವ ರಾಮಾಯಣ ಹಾಗೂ ಮಹಾಭಾರತದ ವಿಗ್ರಹಗಳು, ಬೀರಪ್ಪ ದೇವರು, ಮದೇವತೆ, ಗರಡಿ ಕೃಷ್ಣಮೂರ್ತಿ, ಕೃಷ್ಣ, ಗಜಗೌರಿ, ಋಷಿಮುನಿ, ವಿವಿಧ ಅಲಂಕಾರಿಕ ಗೊಂಬೆಗಳು, ಕಾಮಧೇನು,ದ್ವಾರಪಾಲಕ, ಪ್ರಾಣಿಗಳ ಮುಖವಾಡ, ಸಿಂಹ, ಹುಲಿಯ ಮುಖವಾಡಗಳು, ಬಳ್ಳಾರಿಯ ಬಯಲಾಟದ ಕಿರೀಟಗಳು, ಹಸು,ಕುದುರೆ, ದೇವರ ಛತ್ರಿ, ಚಾಮರ, ಕುಂಚದಿಂದ ಬಿಡಿಸಲಾದ ವೈವಿದ್ಯಮಯ ಚಿತ್ರಗಳು ಸೇರಿದಂತೆ ಪಾರಂಪರಿಕ ಕಲಾತ್ಮಕ ವಸ್ತುಗಳನ್ನು ಕುತೂಹಲದಿಂದ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯಾಲೆ ವಿವಿಯ ಉಪನ್ಯಾಸಕ ಡಾ| ಕರೆನ್‌ಫೇಸ್, ಭಾರತದ ಗ್ರಾಮೀಣ
ಭಾಗದಲ್ಲಿರುವ ಸಂಪ್ರದಾಯಿಕ ಚಿತ್ರಕಲೆ, ಸಂಸ್ಕೃತಿ, ಪರಂಪರೆಗಳ ಆಳ ಅಧ್ಯಯನದ ಅಂಗವಾಗಿ ಪಟ್ಟಣದ
ಹಿರಿಯ ಜನಪದ ಕಲಾವಿದರಾದ ಪರುಶುರಾಮಪ್ಪ ಚಿತ್ರಗಾರ ಅವರ ಮನೆಗೆ ಭೇಟಿ ನೀಡಿದ್ದೇವೆ. ಅವರು
ಸಿದ್ಧಪಡಿಸಿದ ಜನಪದ ಶೈಲಿಯ ಮೂರ್ತಿ ಶಿಲ್ಪಗಳನ್ನು ನೋಡಿದಾಗ ಭಾರತದಲ್ಲಿ ಬಹುಮುಖೀ ಸಂಸ್ಕೃತಿ
ಇನ್ನು ಜೀವಂತವಾಗಿದೆ ಎಂದರು.
ಸಂಪದ್ಭರಿತವಾದ ನಮ್ಮ ಕ್ಯಾಲಿಪೋರ್ನಿಯಾ ಹಾಗೂ ಭಾರತದಲ್ಲಿ ಇಂದಿಗೂ ಜೀವಂತವಿರುವ ಅವಿಭಕ್ತ
ಕುಟುಂಬಗಳ ಏಕತೆ, ಸಮಗ್ರತೆ,ಅರ್ಥೈಸಿಕೊಳ್ಳುವಿಕೆ ಗುಣಗಳ ಜತೆಗೆ ಸಾಂಪ್ರದಾಯಿಕ ಆಚರಣೆಗಳು ಹಾಗೂ ಸಾಂಪ್ರದಾಯಿಕ ಪರಿಕಲ್ಪನೆ, ಸಂಸ್ಕೃತಿ ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ಇಲ್ಲಿನ ಕ್ಷೇತ್ರ ಕಾರ್ಯ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ನಮ್ಮ ದೇಶ ಆರ್ಥಿಕವಾಗಿ ಸಬಲವಾಗಿದೆ. ಆದರೆ, ಬದುಕಲು ಬೇಕಾದ ಸಂಸ್ಕೃತಿ, ಸಂಪ್ರದಾಯದ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಭಾರತದ ಗ್ರಾಮೀಣ ಚಿತ್ರಕಲೆ, ಚಿತ್ರಕಲಾವಿದರನ್ನು ಮತ್ತು ಅವರ ಕುಟುಂಬವನ್ನು ಕಂಡು ನಮಗೆ ಸಂತಸವಾಗಿದೆ. ಇಂಥ ಸಂಪ್ರದಾಯ ನಮ್ಮಲ್ಲಿ ಆರಂಭವಾಗಬೇಕು ಎನ್ನುವ ಉದ್ದೇಶ ನಮ್ಮದಾಗಿದೆ
ಎಂದು ವಿವಿಯ ಬಿಎ ವಿದ್ಯಾರ್ಥಿಗಳಾದ ಬ್ರೆಡನ್ ಕೌನ್, ಡೆನಿಚೋ,ಲೂರೆಲ್ ಆ್ಯಡಮ್ಸ್, ಮಿಚಿಲೆ
ಬೊನಿಲ್ ತಿಳಿಸಿದರು.
ಕ್ಯಾಲಿಪೋರ್ನಿಯಾ ಯಾಲೆ ವಿವಿಯ ಕಲಾ ವಿಭಾಗದ ಉಪನ್ಯಾಸಕಿ ಮೇಘನಾ ಬಿಸಿನೀರು, ಬೆಂಗಳೂರು ಜನಸ್ತೋಮ ಸಂಘಟನೆಯ ಟಿ.ಬಿ.ದಿನೇಶ್, ಹಂಪಿ ಕನ್ನಡ ವಿವಿಯ ಚೆಲುವರಾಜು, ಉಪನ್ಯಾಸಕಿ ಕೆ.ನಾಗಪುಷ್ಪ ಲತಾ, ಗೋಪಿಕೃಷ್ಣ, ಚಿತ್ರಕಲಾವಿದ ಸುಮಿತ್ರಮ್ಮ, ಚಿತ್ರಕಲಾ ಶಿಕ್ಷಕ ರಾಮಚಂದ್ರಪ್ಪ ಚಿತ್ರಗಾರ, ರವಿ ಚಿತ್ರಗಾರ ಹಾಗೂ ಎಸ್.ಡಿ.ಬಸವರಾಜ ಇನ್ನಿತರರಿದ್ದರು.
ಭಾರತದ ಗ್ರಾಮೀಣ ಭಾಗದಲ್ಲಿರುವ ಸಂಪ್ರದಾಯಿಕ ಚಿತ್ರಕಲೆ, ಸಂಸ್ಕೃತಿ, ಪರಂಪರೆಗಳ ಆಳ ಅಧ್ಯಯನದ
ಅಂಗವಾಗಿ ಪಟ್ಟಣದ ಹಿರಿಯ ಜನಪದ ಕಲಾವಿದರಾದ ಪರುಶುರಾಮಪ್ಪ ಚಿತ್ರಗಾರ ಅವರ ಮನೆಗೆ ಭೇಟಿ ನೀಡಿದ್ದೇವೆ. ಅವರು ಸಿದ್ಧಪಡಿಸಿದ ಜನಪದ ಶೈಲಿಯ ಮೂರ್ತಿ ಶಿಲ್ಪಗಳನ್ನು ನೋಡಿದಾಗ ಭಾರತದಲ್ಲಿ ಬಹುಮುಖೀ ಸಂಸ್ಕೃತಿ ಇನ್ನು ಜೀವಂತವಾಗಿದೆ.
ಡಾ| ಕರೆನ್‌ಫೇಸ್, ಉಪನ್ಯಾಸಕ,ಯಾಲೆ ವಿವಿ, ಕ್ಯಾಲಿಪೋರ್ನಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.