ಮೂಲಸೌಕರ್ಯ ಅಭಿವೃದ್ಧಿಯೇ ವಾರ್ಡ್‌ಗಳಿಗೆ ಸವಾಲು
ಬೆಳ್ತಂಗಡಿ: ಗ್ರಾಮ ಪಂಚಾಯತ್ ಉಪಚುನಾವಣೆ
Team Udayavani, May 26, 2019, 10:26 AM IST
ಚೈತ್ರೇಶ್ ಇಳಂತಿಲ
ಬೆಳ್ತಂಗಡಿ: ತಾಲೂಕಿನ ಉಜಿರೆ ಹಾಗೂ ಕೊಯ್ಯೂರು ಗ್ರಾ.ಪಂ.ಗಳ 3 ವಾರ್ಡ್‌ಗಳಿಗೆ ಉಪ ಚುನಾವಣೆ ಮೇ 29ರಂದು ನಡೆಯಲಿದ್ದು, ವಾರ್ಡ್ ಗಳಲ್ಲಿ ಪ್ರಗತಿಯ ನಿರೀಕ್ಷೆ ಹೆಚ್ಚಿದೆ.
ಉಜಿರೆ ವಾರ್ಡ್ ನಂ. 4ರಲ್ಲಿ ಇರುವ ರಸ್ತೆಗಳ ಅಭಿವೃದ್ಧಿಗಾಗಿ ಶಾಶ್ವತ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಬೇಡಿಕೆ ಹೆಚ್ಚಿದೆ. ಉಜಿರೆ ಗ್ರಾ.ಪಂ.ನ ಪಟ್ಟಣ ಅಭಿವೃದ್ಧಿಯಲ್ಲಿ ಮುಂದಿದ್ದರೂ ವಾರ್ಡ್‌ಗಳಲ್ಲಿ ಕೊರತೆ ಎದ್ದು ಕಾಣುತ್ತಿದೆ. ಈ ಬಾರಿ ಬೇಸಗೆಯಲ್ಲಿ ನೀರಿನ ಅಭಾವ ಎದುರಾಗಿದ್ದು, ಶ್ರೀನಗರದಿಂದ ಕಲ್ಲೆ ವರೆಗೆ ನೀರಿನ ಪೈಪ್‌ಲೈನ್ ಅಳವಡಿಸುವಂತೆ ಹಲವು ವರ್ಷಗಳಿಂದ ಕೂಗು ಕೇಳಿಬಂದಿದ್ದರೂ ಇನ್ನು ಫಲಪ್ರದವಾಗಿಲ್ಲ.
ನಿವೇಶನ ಹಂಚಿಕೆಗೆ ಬೇಡಿಕೆ
ನಿವೇಶನ ಇನ್ನೇನು ಅರ್ಜಿಸಲ್ಲಿಸಿ ಹಂಚಿಕೆಯಾಗ ಬೇಕು ಅನ್ನುವಷ್ಟರಲ್ಲಿ ಚುನಾವಣೆ ನೀತಿಸಂಹಿತೆಯಿಂದ ಕೆಲಸಗಳು ತಟಸ್ಥಗೊಂಡಿವೆ. ದಾರಿದೀಪ ದುರಸ್ತಿ, ಹೊಸ ದೀಪ ಅಳವಡಿಕೆ ಅಳವಡಿಕೆಯಾಗಬೇಕು. ರಸ್ತೆ ಬದಿ ಸ್ವಚ್ಛತೆಗೆ ಆದ್ಯತೆ ಸಿಗಬೇಕಿದೆ.
ಉಜಿರೆ ವಾರ್ಡ್ ನಂ. 4ರಲ್ಲಿ ಅತ್ತಾಜೆ ಶಾಲೆಗೆ ಆವರಣ ಗೊಡೆ ನಿರ್ಮಾಣವಾಗಿಲ್ಲ. ಕುಡಕಂಡ ಎಂಬಲ್ಲಿ ಇರು ಕೊಳವೆ ಬಾವಿ ಬತ್ತಿಹೋಗಿದ್ದು, ಹೊಸ ಕೊಳವೆ ಬಾವಿ ಕೊರೆಯಲು ಬೇಡಿಕೆ ಹೆಚ್ಚಿದೆ. ದಾರಿದೀಪ ಕೆಲಸ ಸಂಪೂರ್ಣವಾಗಿಲ್ಲ. ಸುಮದಾಯ ಭವನ ನಿರ್ಮಾಣದ ಬೇಡಿಕೆಯೂ ಇದೆ.
ಕೊಯ್ಯೂರು ವಾರ್ಡ್ – 2
ಕೊಯ್ಯೂರು ಕೃಷಿ ಪ್ರಧಾನ ಕ್ಷೇತ್ರವಾಗಿದ್ದು, ಉತ್ತಮ ಸ್ಥಿತಿವಂತರಲ್ಲದಿದ್ದರೂ ಶ್ರಮಿಕರು. ಆದರೆ ನಿರೀನ ಅಭಾವ ತಲೆದೋರಿದ್ದು, ರಸ್ತೆ ದುರಸ್ತಿಯಾಗಿಲ್ಲ. ಕೊಯ್ಯೂರು ಮೂಲಕ ಉಪ್ಪಿನಂಗಡಿ, ಗೇರುಕಟ್ಟೆ, ಬೆಳ್ತಂಗಡಿ ಸಂಪರ್ಕಿ ಸುವ ರಸ್ತೆಗಳು ತೀರ ಹದಗೆಟ್ಟಿವೆ. ಇಲ್ಲಿನ ದ.ಕ. ಜಿ.ಪಂ. ಹಿ.ಪ್ರಾ. ಶಾಲೆ ಕೊಯ್ಯೂರು ದೇವಸ್ಥಾನ 50 ವರ್ಷ ಸಂದಿದ್ದು, ಮುಂದಿನ ವರ್ಷ ಬೆಳ್ಳಿಹಬ್ಬ ಆಚರಿಸುತ್ತಿದೆ. ಶೌಚಾಲಯ, ಆವರಣ ಗೊಡೆ ನಿರ್ಮಾಣವಾಗದೆ ಶಾಲೆ ಬಡವಾಗಿದೆ. ಇನ್ನೂ ಶಾಶ್ವತ ರಸ್ತ, ನೀರು ದಾರಿದೀಪದ ನಿರೀಕ್ಷೆಯಲ್ಲಿದ್ದಾರೆ ನಿವಾಸಿಗಳು. ಸ್ಥಳೀಯರು ಎಣಿಲೆಗುತ್ತು ಎಂಬಲ್ಲಿ 97-98ರಲ್ಲಿ ಕಂಬಳ ಕ್ರೀಡೆಯನ್ನು ಆರಂಭಿಸಿ ಸತತ ಮೂರು ವರ್ಷ ವಲಯಮಟ್ಟದ ಕಂಬಳ ಜರಗಿತ್ತು. ಬಳಿಕ ನಿಂತುಹೋಗಿದೆ.
ಅದೃಷ್ಟ ಪರೀಕ್ಷೆಯ ಕಣದಲ್ಲಿರುವವರು
ಕೊಯ್ಯೂರು ವಾರ್ಡ್ – 2ರಲ್ಲಿ ನೇರ ಸ್ಪರ್ಧೆ ಏರ್ಪಟ್ಟಿದ್ದು, ಬಾಬು ಹೇಮಲ್ಕೆ (ಕಾಂಗ್ರೆಸ್ ಬೆಂಬಲಿತ) ಕೊರಗಪ್ಪ (ಬಿಜೆಪಿ ಬೆಂಬಲಿತ) ಕಣದಲ್ಲಿದ್ದಾರೆ. ಉಜಿರೆ ವಾರ್ಡ್ ನಂ. 4ರಲ್ಲಿ ಸುಮಂಗಲಾ (ಕಾಂಗ್ರೆಸ್ ಬೆಂಬಲಿತ) ಹೇಮಾವತಿ (ಬಿಜೆಪಿ ಬೆಂಬಲಿತ), ವಾಡ್ ನಂ. 11ರಲ್ಲಿ ಜಿನ್ನಪ್ಪ ನಾಯ್ಕ (ಕಾಂಗ್ರೆಸ್ ಬೆಂಬಲಿತ) ಸತೀಶ್(ಬಿಜೆಪಿ ಬೆಂಬಲಿತ) ಬೆಂಬಲಿತರಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಉಜಿರೆ: ವಾರ್ಡ್ ನಂ. 4
ಮೀಸಲಾತಿ: ಪರಿಶಿಷ್ಟ ಪಂಗಡ (ಮಹಿಳೆ) ವ್ಯಾಪ್ತಿ: ಶಾಂತಿನಗರ, ವಿಜಯನಗರ, ಜಯನಗರ ಮತಗಳು: ಪುರುಷರು-524, ಮಹಿಳೆಯರು-545, ಒಟ್ಟು -1,069. ಮತಗಟ್ಟೆ ಸ್ಥಳ: ಎಸ್.ಡಿ.ಎಂ. ಬಿಎಡ್ ಕಾಲೇಜು ಉಜಿರೆ
ಉಜಿರೆ: ವಾರ್ಡ್ ನಂ. 11
ಕೊಯ್ಯೂರು: ವಾರ್ಡ್- 2
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.