ಧರ್ಮ ಮಾರ್ಗದಿಂದ ಮೋಕ್ಷ ಸಾಧನೆ: ನಿರ್ಮಲಾನಂದನಾಥ ಶ್ರೀ
ಜ್ಞಾನದ ಅರಿವಿಗೆ ಗುರುವಿನ ಮಾರ್ಗದರ್ಶನ ಅಗತ್ಯ
Team Udayavani, May 16, 2019, 4:02 PM IST
ಭದ್ರಾವತಿ: ಅತಿರುದ್ರಮಹಾಯಾಗದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಭದ್ರಾವತಿ: ಧರ್ಮಮಾರ್ಗದಿಂದ ಅರ್ಥಸಂಪಾದನೆ ಮಾಡಿ ಅದರಿಂದ ಸಾತ್ವಿಕ ಕಾಮನೆಗಳನ್ನು ಪೂರೈಸಿಕೊಂಡಾಗ ಮೋಕ್ಷ ಸಾಧನೆ ಸಾಧ್ಯ ಎಂದು ಆದಿಚುಂಚನಗಿರಿ ಮಹಾಸಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ನ್ಯೂಟೌನ್ ಶ್ರೀಸತ್ಯಸಾಯಿ ಸೇವಸಂಸ್ಥೆ ನಡೆಸುತ್ತಿರುವ ಅತಿರುದ್ರ ಮಹಾಯಾಗದ ಕಾರ್ಯಕ್ರಮಕ್ಕೆ ಭೇಟಿ ನೀಡಿ ವೇದಿಕೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಆಹಾರ ತಯಾರಿಸಲು ಅಗತ್ಯವಾದ ಸಾಮಗ್ರಿಗಳು ಇದ್ದರೆ ಸಾಲದು. ಆಹಾರ ತಯಾರಿಸಲು ಬೆಂಕಿ ಅಗತ್ಯ. ಬದುಕಿನಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷ ಅವುಗಳನ್ನು ಸರಿಯಾದ ರೀತಿ ಅರಿತು ನಡೆಯಲು ಜ್ಞಾನವೆಂಬ ಅಗ್ನಿ ಅಗತ್ಯ. ಸರಿಯಾದ ಗುರುವಿನ ಮಾರ್ಗದರ್ಶನದಿಂದ ಜ್ಞಾನ ಗಳಿಸಲು ಸಾಧ್ಯ ಎಂದರು.
ಭಗವದ್ಗೀತೆಯಂತಹ ಭಾರತೀಯ ಕೃತಿಗಳು ವಿಶ್ವಕ್ಕೆ ನೀಡಿದ ಕೊಡುಗೆ ಅಪಾರ ಶ್ರೇಷ್ಠ ವಿಜ್ಞಾನಿ ಐನ್‌ಸ್ಟೀನ್ ಭಗವದ್ಗೀತೆಯಲ್ಲಿರುವ ವೈಜ್ಞಾನಿಕ ವಿಚಾರಧಾರೆಯ ಮಹತ್ವವನ್ನು ತನ್ನ ಕೃತಿಯಲ್ಲಿ ಉಲ್ಲೇಖೀಸಿದ್ದಾನೆ ಎಂದು ತಿಳಿಸಿದರು.
ಆಧ್ಯಾತ್ಮಿಕ ಜ್ಞಾನಸಂಪತ್ತಿನ ಅರಿವನ್ನು ಪಡೆದು ಜೀವನದ ಗುರಿಯನ್ನು ತಲುಪಬೇಕಾದರೆ ಸರಿಯಾದ ಗುರುವಿನ ಮಾರ್ಗದರ್ಶನ ಅತ್ಯಗತ್ಯ. ಪಂಚೇಂದ್ರಿಯಗಳು ಕೇವಲ ವ್ಯಕ್ತರೂಪದ ವಸ್ತು, ವಿಷಯಗಳನ್ನು ನಮಗೆ ಪರಿಚಯ ನೀಡುತ್ತವೆ. ಆದರೆ, ಅವ್ಯಕ್ತ ರೂಪದಲ್ಲಿರುವ ಸಂಗತಿ, ವಿಷಯಗಳ ಅರಿವು ನಮಗಾಗ ಬೇಕಾದರೆ ಗುರುವಿನ ಮಾರ್ಗದರ್ಶನ ಬೇಕು ಎಂದರು.
ಭಾರತೀಯ ಆಧ್ಯಾತ್ಮಿಕ ಜ್ಞಾನ ಲೋಕದಲ್ಲಿ ಅಂತಹ ಗುರುಪರಂಪರೆಯಲ್ಲಿ ಬಂದ ಅನೇಕ ಮಹಾಪುರುಷರ ಪೈಕಿ ಸತ್ಯಸಾಯಿ ಬಾಬಾ ಸಹ ಒಬ್ಬರು. ಸಾಯಿಬಾಬ ಅವರು ಜಗತ್ತಿಗೆ ನೀಡಿದ ಬಹುಮುಖ್ಯ ಸಂದೇಶಗಳೆಂದರೆ ನಿಷ್ಕಾಮ ಕರ್ಮ, ಸೇವೆ ಮತ್ತು ಜ್ಞಾನ. ಅಂತಃಕರಣದಲ್ಲಿರುವ ಭಗವಂತನನ್ನು ಕಾಣಬೇಕಾದರೆ ಯಾವುದೇ ಕಾಮನೆಯಿಲ್ಲದೆ ಕರ್ಮಗಳನ್ನು ಮಾಡಬೇಕು ಎಂದು ಹೇಳಿದರು.
ಮಾಡುವ ಕರ್ಮಗಳು ಸ್ವಾರ್ಥರಹಿತವಾದ ಸೇವಾಮನೋಭಾವದಿಂದ ಕೂಡಿರಬೇಕು ಇದನ್ನು ಸಾಧಿಸಲು ಮನಸ್ಸು ಸ್ಥಿಮಿತವಾಗಿ ಪ್ರಶಾಂತವಾಗಿರಬೇಕು. ಇದನ್ನು ಧ್ಯಾನ, ಜಪ, ಸತ್ಸಂಗ, ಯಾಗ, ಮುಂತಾದವುಗಳ ಉಪಾಸನಾ ಕ್ರಮದಿಂದ ಗಳಿಸಬೇಕು. ಕೊನೆಯದಗಿ ಜ್ಞಾನಾರ್ಜನೆ, ಜ್ಞಾನದಿಂದ ಮಾತ್ರ ಮೋಕ್ಷ ಸಾಧನೆ ಸಾಧ್ಯ. ಸತ್ಯಸಾಯಿ ಬಾಬ ಅವರು ಭಕ್ತರಿಗೆ ನೀಡಿರುವ ಈ ಕೊಡುಗೆ ಅನನ್ಯವಾದುದು ಎಂದರು. ದೇಹಕ್ಕೆ ಮಾತ್ರ ಸಾವು, ಆತ್ಮಕ್ಕೆ ಸಾವಿಲ್ಲ ಎಂಬುದನ್ನು ಅರಿತಾಗ ಸಾಯಿ ಬಾಬ ಅವರಂತಹ ಮಹಾ ಪುರುಷರು ಇಂದಿಗೂ ಭಕ್ತರನ್ನು ಸರಿಯಾದ ಮಾರ್ಗದಲ್ಲಿ ಕೈಹಿಡಿದು ನಡೆಸುತ್ತಿದ್ದಾರೆ ಎಂಬ ಮಾತುಗಳ ಅರ್ಥ ಅರಿವಿಗೆ ಬುರುತ್ತದೆ. ಸಾಯಿಬಾಬ ಅವರು ಇಂದು ನಮ್ಮೊಂದಿಗೆ ದೈಹಿಕವಾಗಿಲ್ಲ. ಆದರೂ ಅವರ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ಯಾಗದ ಕಾರ್ಯಕ್ರಮಗಳು ಆದಿವ್ಯ ಚೇತನ ಸ್ವರೂಪದ ಶಕ್ತಿಯನ್ನು ಜಗತ್ತಿಗೆ ತೋರಿಸುತ್ತದೆ ಎಂದರು.
ಆದಿಚುಂಚನಗಿರಿ ಶಿವಮೊಗ್ಗ ಶಾಖೆಯ ಶ್ರೀಗಳಾದ ಪ್ರಸನ್ನನಾಥ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯಸ್ವಾಮೀಜಿ, ಶ್ರೀ ಸತ್ಯಸಾಯಿ ಸಂಸ್ಥೆಯ ರಾಜ್ಯ ಸಂಯೋಜಕ ಪ್ರಭಾಕರ ಬೀರಯ್ಯ, ಜಗನ್ನಾಥ ನಾಡಿಗ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು
Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್. ಸಂತೋಷ್ ಹೆಗ್ಡೆ
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.