ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಸಹಸ್ರಾರು ಭಕ್ತರು ಭಾಗಿ •ಯುವತಿಯರಿಂದ ಆಕರ್ಷಕ ನೃತ್ಯ•ಸಿಡಿಮದ್ದು ಪ್ರದರ್ಶನ

Team Udayavani, Sep 11, 2019, 1:50 PM IST

11-Sepctember–15

ಭದ್ರಾವತಿ: ಹಿಂದೂ ಮಹಾಸಭಾ ಗಣಪತಿಯ ಅಭೂತಪೂರ್ವ ಮೆರವಣಿಗೆ ನಡೆಯಿತು.

ಭದ್ರಾವತಿ: ನಗರದ ಹೊಸಮನೆ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಸಭೆ ಮತ್ತು ಹಿಂದೂ ರಾಷ್ಟ್ರಸೇನಾ ಗಣಪತಿಯ ವಿಸರ್ಜನಾ ಪೂರ್ವ ಮೆರವಣಿಗೆ ಮಂಗಳವಾರ ಸಹಸ್ರಾರು ಸಂಖ್ಯೆಯ ಜನರ ಪಾಲ್ಗೊಳ್ಳುವಿಕೆಯಲ್ಲಿ ಶಾಂತಿಯುತವಾಗಿ ನೆರವೇರಿತು.

ಬೆಳಗ್ಗೆ 11-30ಕ್ಕೆ ಗಣಪತಿ ಪೆಂಡಾಲ್ನಲ್ಲಿ ಗಣಪತಿಗೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಬಿ.ಕೆ. ಸಂಗಮೇಶ್ವರ್‌, ತಹಶೀಲ್ದಾರ್‌ ಸೋಮಶೇಖರ್‌, ಉಪ ತಹಶೀಲ್ದಾರ್‌ ಮಂಜಾನಾಯ್ಕ ಹಾಗೂ ಪೊಲೀಸ್‌ ಅಧಿಕಾರಿಗಳು ಇದ್ದರು.

ಗಣಪತಿ ಮೆರವಣಿಗೆ ಶಿವಾಜಿ ವೃತ್ತ ಬಳಸಿಕೊಂಡು ಹೊಸಮನೆ ಮುಖ್ಯ ರಸ್ತೆ ಮೂಲಕ ಸಾಗಿ ಬಂದು ರಂಗಪ್ಪ ವೃತ್ತ, ಚೆನ್ನಗಿರಿ ರಸ್ತೆ, ಬಿ.ಎಚ್. ರಸ್ತೆ, ಮಾಧವಾಚಾರ್‌ ವೃತ್ತ, ಹುತ್ತಾ ಬಸ್‌ ನಿಲ್ದಾಣದವರೆಗೆ ಸಾಗಿ ಪುನಃ ಅದೇ ಮಾರ್ಗದಲ್ಲಿ ಹಿಂದಿರುಗಿ ಬಂದು ತರೀಕೆರೆ ರಸ್ತೆಯ ಗಾಂಧಿ ವೃತ್ತವನ್ನು ಬಳಸಿಕೊಂಡು ಸಾಗಿ ಬಂದಿತು.

ಸಂಸದ ಬಿ.ವೈ ರಾಘವೇಂದ್ರ ಬೇಟಿ: ಮೆರವಣಿಗೆ ಮಾರ್ಗಮಧ್ಯದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಆಗಮಿಸಿ ಗಣಪತಿಗೆ ಪೂಜೆ ಸಲ್ಲಿಸಿ ತೆರಳಿದರು.

ವೈವಿಧ್ಯಮಯ ಪ್ರಸಾದ ವಿತರಣೆ: ಮೆರವಣಿಗೆ ಮಾರ್ಗದುದ್ದಕ್ಕೂ ಅಲ್ಲಲ್ಲಿ ವಿನಾಯಕ ಸ್ನೇಹ ಬಳಗ, ಆಟೋ ಸಂಘ ಸೇರಿದಂತೆ ವಿವಿಧ ಹಲವು ಸಂಘ-ಸಂಸ್ಥೆಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರಿಗೆ ಉಚಿತವಾಗಿ ಪಲಾವ್‌, ಚಿತ್ರಾನ್ನ, ಕೇಸರಿಬಾತ್‌, ಜಾಮೂನು ಮುಂತಾದ ಹಲವು ಬಗೆಯ ಊಟ- ಉಪಹಾರವನ್ನು ಪ್ರಸಾದ ರೂಪದಲ್ಲಿ ಯಥೇಚ್ಛವಾಗಿ ನೀಡಿದರು.

ಮಳೆಗೂ ಹಿಂಜರಿಯದ ಯುವಕರು: ಯುವಕ- ಯುವತಿಯರೇ ಮೆರವಣಿಗೆಯಲ್ಲಿ ಹೆಚ್ಚಾಗಿ ಭಾಗವಹಿಸಿದ್ದರು. ಬೆಳಗ್ಗೆ ಬಿಸಿಲಿನ ವಾತಾವರಣ ಇದ್ದರೂ ಮೆರವಣಿಗೆ ಆರಂಭಗೊಂಡ ಕೆಲವೇ ಗಂಟೆಗಳಲ್ಲಿ ಕೆಲ ಸಮಯ ಸುರಿದ ಮಳೆಗೆ ಅಂಜದ ಯುವಸಮೂಹ ಧ್ವನಿವರ್ಧಕದಲ್ಲಿನ ಹಾಡಿಗೆ ಉತ್ಸಾಹದಿಂದ ಕುಣಿದು ಕುಪ್ಪಳಿಸಿತು. ಯುವತಿಯರೂ ಸಹ ನರ್ತಿಸುತ್ತಾ ಸಂಭ್ರಮದಿಂದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಮೆರವಣಿಗೆಯ ಮಾರ್ಗದುದ್ದಕ್ಕೂ ಅಲ್ಲಲ್ಲಿ ಕೆಲವರು ವರ್ಣಮಯವಾದ ಓಂಕಾರಾಕ್ಷರ, ಶಿವನ ಚಿತ್ರ ಸೇರಿದಂತೆ ವಿವಿಧ ರೀತಿಯ ರಂಗವಲ್ಲಿಗಳನ್ನು ಹಾಕಿದ್ದರು. ಆದರೆ ಸುರಿದ ಮಳೆಯಿಂದಾಗಿ ಗಣಪತಿ ಅದರ ಬಳಿ ಬರುವ ಮುನ್ನವೇ ರಂಗವಲ್ಲಿಗಳು ನೀರಿನಲ್ಲಿ ಕರಗಿ ಹೋದವು.

ಕೇಸರಿಮಯ: ಮೆರವಣಿಗೆ ಸಾಗಿ ಬಂದ ಮಾರ್ಗದುದ್ದ‌ಕ್ಕೂ ರಸ್ತೆಯ ಉಭಯ ಪಾರ್ಶ್ವಗಳಲ್ಲಿ ಮತ್ತು ವೃತ್ತಗಳಲ್ಲಿ ಕೇಸರಿ ತಳಿರು ತೋರಣ, ಕೇಸರಿ ಧ್ವಜವನ್ನು ಹಾಕುವ ಮೂಲಕ ಎಲ್ಲೆಡೆ ಕೇಸರಿ ವರ್ಣವೇ ರಾರಾಜಿಸುತ್ತಿತ್ತು. ಇದರ ಜೊತೆ ಯುವಕರು ಕೇಸರಿ ವರ್ಣದ ರುಮಾಲನ್ನು ಕೊರಣಿಗೆ ಹಾಕಿಕೊಂಡು ಕೇಸರಿ ಪೇಟ ಧರಿಸಿ ಬೈಕ್‌ಗಳಲ್ಲಿ ರ್ಯಾಲಿ ನಡೆಸಿ ಮೆರವಣಿಗೆಯಲ್ಲಿ ಕೇಸರಿ ಬಣ್ಣದ ಬೃಹತ್‌ ಧ್ವಜವನ್ನು ವೃತ್ತಾಕಾರವಾಗಿ ತಿರುಗಿಸುತ್ತಾ ಕುಣಿಯುತ್ತಾ ಮೇಲಕ್ಕೆ ಹಾರುತ್ತಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಅದೇ ರೀತಿ ಮಹಿಳೆಯರು, ಯುವತಿಯರೂ ಸಹ ಕೇಸರಿ ಶಾಲನ್ನು ಕೊರಳಿಗೆ ಹಾಕಿಕೊಂಡು ಕುಣಿಯುತ್ತಾ ಭಾರತ ಮಾತೆಗೆ ಜಯಕಾರ ಹಾಕುತ್ತಾ ಸಾಗಿದರು.

ಕಲಾತಂಡಗಳು ಮತ್ತು ಸಿಡಿಮದ್ದು ಪ್ರದರ್ಶನ: ಮೆರವಣಿಗೆಯಲ್ಲಿ ಬೃಹತ್‌ ಬಿದಿರುಗೊಂಬೆಗಳ ಕುಣಿತ ಮನರಂಜಿಸಿತು, ಇದರ ಜೊತೆಗೆ ಪಟಾಕಿ ಸಿಡಿಮದ್ದುಗಳ ಸಿಡಿತಗಳೊಂದಿಗೆ ಮೆರವಣಿಗೆ ಸಾಗಿತು.

ಜನಸಾಗರ: ಮೆರವಣಿಗೆಯಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರೆ ಮೆರವಣಿಗೆ ಮಾರ್ಗದುದ್ದಕ್ಕೂ ರಸ್ತೆಯ ಬದಿಗಳಲ್ಲಿ ಹಾಗೂ ಉಭಯ ಪಾರ್ಶ್ವಗಳಲ್ಲಿನ ಕಟ್ಟಡಗಳ ಮೇಲೆ ಸಹಸ್ರಾರು ಜನರು, ಮಕ್ಕಳು ನಿಂತು ಗಣಪತಿ ಮೆರವಣಿಗೆ ವೀಕ್ಷಿಸಿ ವಿನಾಯಕನಿಗೆ ನಮಸ್ಕರಿಸಿದರು.

ಹಣ್ಣು,ಹೂವಿನ ಹಾರಗಳ ಸುರಿಮಳೆ: ಮೆರವಣಿಗೆ ಮಾರ್ಗದುದ್ದಕ್ಕೂ ಅಲ್ಲಲ್ಲಿ ವಿವಿಧ ಅಂಗಡಿ- ಮುಂಗಟ್ಟುಗಳ ಮುಂದೆ ವ್ಯಾಪಾರಸ್ಥರು ಪೂಜೆ ಸಲ್ಲಿಸುವುದರ ಜೊತೆಗೆ ಸೇಬು ಮತ್ತಿತ‌ರ ಹಣ್ಣಿನ ಹಾರ, ಬೃಹತ್‌ ಗಾತ್ರದ ಹೂವಿನ ಹಾರಗಳನ್ನು ಗಣಪತಿಗೆ ಅರ್ಪಿಸಿದರು. ಕೆಲವೆಡೆ ಜನರು ಮೇಲಿನಿಂದ ಗಣಪತಿಯ ಮೇಲೆ ಬಿಡಿಹೂವುಗಳ ಪುಷ್ಪವೃಷ್ಟಿ ಸುರಿಸಿದರು.

ಪೊಲೀಸ್‌ ಬಿಗಿಭದ್ರತೆ: 8ಡಿವೈಎಸ್ಪಿ, 2ಎಸ್ಪಿ, 17 ವೃತ್ತ ನಿರೀಕ್ಷಕರು, 23ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌, 79 ಎಎಸ್‌ಐ, 796 ಪೊಲೀಸ್‌ ಕಾನ್ಸ್‌ಟೇಬಲ್, 350 ಗೃಹರಕ್ಷಕ ಸಿಬ್ಬಂದಿ, 50 ಆರ್‌ಪಿಎಫ್‌, 400 ಕೆಎಸ್‌ಆರ್‌ಪಿ, 8 ಪಾರಿrಡಿಆರ್‌, 30 ಎಎನೆಸ್‌ ಸೇರಿದಂತೆ 50 ಕ್ಯಾಮೆರಾಮೆನ್‌ ಮತ್ತು ಇತರೆ 25 ಕ್ಯಾಮೆರಾ ಸೇರಿದಂತೆ 1600 ಪೊಲೀಸ್‌ ಇಲಾಖೆ ರಕ್ಷಣಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

ಹಿಂದೂ ಮಹಾಸಭಾ ಅಧ್ಯಕ್ಷ ವಿ. ಕದಿರೇಶ್‌ ಹಾಗೂ ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಟಾಪ್ ನ್ಯೂಸ್

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.