ನಗರಸಭೆಯಿಂದ ಸೂರು ಯೋಜನೆ
ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಅನುಮೋದನೆ
Team Udayavani, Aug 9, 2019, 3:23 PM IST
ಭದ್ರಾವತಿ: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಗರಸಭೆ ನಿರ್ಮಿಸಲು ಮುಂದಾಗಿರುವ ಜಿ+3 ಮನೆಗಳ ಮಾದರಿಯನ್ನು ಪ್ರದರ್ಶಿಸಿದ ಶಾಸಕ ಸಂಗಮೇಶ್ವರ್ ಹಾಗೂ ಪೌರಾಯುಕ್ತ ಮನೋಹರ್.
ಭದ್ರಾವತಿ: ರಾಜ್ಯ ಹಾಗೂ ಕೇಂದ್ರ ಸರಕಾರಗಳ ಸರ್ವರಿಗೂ ಸೂರು ಅನುಷ್ಠಾನದ ಮಹತ್ವಾಕಾಂಕ್ಷಿ ವಸತಿ ಯೋಜನೆಯಾದ ಪ್ರಧಾನಮಂತ್ರಿ ಅವಾಜ್ ಯೋಜನೆಯಡಿ ನಗರಸಭೆ ಜಿ+3 ನಾಲ್ಕು ಸಾವಿರ ಗುಂಪು ಮನೆಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 2022 ರೊಳಗೆ ಸರ್ವರಿಗೂ ಸೂರು ಇರಬೇಕೆಂಬ ಉದ್ದೇಶದಿಂದ ನಗರಸಭೆ ಸುಮಾರು 4 ಸಾವಿರ ಜಿ+3 ಮಾದರಿಯಲ್ಲಿ ಗುಂಪು ಮನೆಗಳನ್ನು ನಿರ್ಮಾಣ ಮಾಡಲು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಅನುಮೋದನೆ ಪಡೆಯಲಾಗಿದೆ ಎಂದರು.
ನಗರದ ತಿಮ್ಲಾಪುರದಲ್ಲಿ 8 ಎಕರೆ, ಮೂಲೆಕಟ್ಟೆ (ಬುಳ್ಳಾಪುರ) 8 ಎಕರೆ, ಜೇಡಿಕಟ್ಟೆ ಹೊಸೂರು 18 ಎಕರೆ ಜಾಗದಲ್ಲಿ ಗುಂಪು ಮನೆಗಳನ್ನು ನಿರ್ಮಿಸಿ ಅರ್ಹ ವಸತಿ ರಹಿತರಿಗೆ ವಿತರಿಸಲು ಕ್ರಮ ವಹಿಸಲಾಗುವುದು. ಈ ಯೋಜನೆಯಡಿ 5,14 ಲಕ್ಷ ರೂಗಳಾಗಿದ್ದು ಸಾಮಾನ್ಯ ವರ್ಗಕ್ಕೆ ರಾಜ್ಯ ಸರಕಾರ 1.20, ಕೇಂದ್ರ ಸರಕಾರ 1.5 ರೂಗಳಂತೆ ಒಟ್ಟು 2.7 ಲಕ್ಷ ರೂಗಳ ಸಹಾಯಧನ ನೀಡಲಾಗುವುದು. ಪರಿಶಿಷ್ಟ ಜಾತಿ /ಪಂಗಡ ಫಲಾನುಭವಿಗಳಿಗೆ ರಾಜ್ಯ ಸರಕಾರ 2 ಲಕ್ಷ ಹಾಗೂ ಕೇಂದ್ರ ಸರಕಾರ 1.5 ಲಕ್ಷ ರೂ ಒಟ್ಟು 3.50 ಲಕ್ಷ ರೂ.ಗಳನ್ನು ಹಾಗು ಸಾಮಾನ್ಯ ವರ್ಗದ ಜನರಿಗೆ 2.30 ಲಕ್ಷ ರೂ.ಗಳನ್ನು ಆಯ್ಕೆಯಾದ ಫಲಾನುಭವಿಗಳಿಂದ ಪಡೆಯಲಾಗುವುದು. ಒಂದು ವೇಳೆ ಮೊತ್ತವನ್ನು ಫಲಾನುಭವಿಗಳು ನೀಡಲು ಸಾಧ್ಯವಾಗದಿದ್ದಲ್ಲಿ ಉಳಿಕೆ ಮೊತ್ತವನ್ನು ಫಲಾನುಭವಿಗಳ ಹೆಸರಲ್ಲಿ ಯಾವುದಾದರೂ ಬ್ಯಾಂಕಿನಿಂದ ಸಾಲ ಕೊಡಿಸಲು ಕ್ರಮ ವಹಿಸಲಾಗುವುದು. ವಿಧವೆಯರಿಗೆ, ಮಾಜಿ ಸೈನಿಕರಿಗೆ ಹಾಗೂ ವಿಕಲಾಂಗದವರಿಗೆ ಮೀಸಲಾತಿ ಕಲ್ಪಿಸಲಾಗಿದೆ.
ತಾಲೂಕಿನಾದ್ಯಂತ ಮಳೆ ಹೆಚ್ಚಾಗಿರುವ ಕಾರಣ ನಗರಸಭಾ ವ್ಯಾಪ್ತಿಯಲ್ಲಿ ಮನೆಗಳು ಹಾನಿಯಾದಲ್ಲಿ ತಾಲೂಕು ಆಡಳಿತ ಹಾಗೂ ನಗರಸಭೆ ಕಾರ್ಯಾಚರಣೆಯಲ್ಲಿ ತೊಡಗಿದ್ದು ಹಾನಿಗೊಳಗಾದ ಮನೆಗಳಿಗೆ ಕನಿಷ್ಟ 10 ಸಾವಿರದಿಂದ ಅತಿ ಹೆಚ್ಚು ಹಾನಿಗೊಳಗಾದ ಮನೆಗಳಿಗೆ 25 ಸಾವಿರ ರೂಗಳನ್ನು ಪರಿಹಾರ ರೂಪದಲ್ಲಿ ನೀಡಲಾಗುವುದು. ನಗರದ ಕವಲುಗುಂದಿ ಪ್ರದೇಶದ ನಿವಾಸಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಕಡದಕಟ್ಟೆಯಲ್ಲಿ ನಿವೇಶನ ನೀಡಲಾಗುವುದು. ಈಗಾಗಲೇ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಇನ್ನುಳಿದಂತೆ ಆಂಜನೇಯ ಅಗ್ರಹಾರ, ಕೂಲಿಬ್ಲಾಕ್, ಉಜ್ಜನಿಪುರ ಸೇರಿದಂತೆ ಹಲವು ಭಾಗಗಳ ಫಲಾನುಭವಿಗಳಿಗೆ ಮಳೆಗಾಲದ ನಂತರ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದು ಸಂಗಮೇಶ್ವರ್ ತಿಳಿಸಿದರು.
ಆನ್‌ಲೈನ್ ಮೂಲಕ ಅರ್ಜಿ: ಪೌರಾಯುಕ್ತ ಮನೋಹರ್ ಮಾತನಾಡಿ, ಯೋಜನೆಯಿಂದ ನಗರಸಭೆಯು ಯುಜಿಡಿ, ರಸ್ತೆ, ಚರಂಡಿ, ರಸ್ತೆ, ವಿದ್ಯುತ್ ಇತ್ಯಾದಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು. ಈ ಹಿಂದೆ ವಸತಿ ಪಡೆಯಲು ಸಾರ್ವಜನಿಕರು ಸಲ್ಲಿಸಿರುವ ಹಳೇ ಅರ್ಜಿಗಳನ್ನು ರದ್ದು ಪಡಿಸಲಾಗಿದ್ದು ನೂತನವಾಗಿ ಸಾರ್ವಜನಿಕರಿಂದ ಆ. 31 ರಿಂದ ಮುಂದಿನ ಒಂದೂವರೆ ತಿಂಗಳವರೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುವುದು. ಅರ್ಜಿಗಳನ್ನು ಸ್ವೀಕರಿಸಲು ನಗರದ 10 ಭಾಗಗಳಲ್ಲಿ ಕೌಂಟರ್‌ಗಳನ್ನು ತೆರಯಲಾಗುವುದು. ಅರ್ಜಿಯೊಂದಿಗೆ ಪಡಿತರ ಚೀಟಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಲಗತ್ತಿಸಬೇಕು ಎಂದರು.
ವಸತಿ ರಹಿತರಿಗೆ ಮಾತ್ರ: ಅರ್ಜಿ ಸಲ್ಲಿಸುವ ಫಲಾನುಭವಿಗಳಿಗೆ ಯಾವುದೇ ನಿವೇಶನ, ಮನೆ ಇರಬಾರದು ಹಾಗೂ ಕುಟುಂಬದ ಏಕ ಸದಸ್ಯರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಕುಟುಂಬದ ಇತರೆ ಸದಸ್ಯರ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಆದಾಯ 87,600 ರೂ.ಗಳಿಗೆ ಮೀರಿರಬಾರದು. ಪುರಸಭೆ ಹಾಗೂ ನಗರಸಭೆ ಮಾಲೀಕತ್ವದಲ್ಲಿ ಹಕ್ಕುಪತ್ರಗಳನ್ನು ಪಡೆದಿರುವ ಸಾರ್ವಜನಿಕರು ಇನ್ನು ಹದಿನೈದು ದಿನಗಳಲ್ಲಿ ಮಾಲೀಕತ್ವದ ಹಕ್ಕು ಪಡೆಯಲು ಮೂಲ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ಹಕ್ಕುಪತ್ರ ಪಡೆಯಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ತಹಶೀಲ್ದಾರ್ ಸೋಮಶೇಖರ್, ನಗರಸಭಾ ಅಧಿಕಾರಿಗಳಾದ ಸುವಾಸಿನಿ, ರವಿಕುಮಾರ್ ಮುಖಂಡರಾದ ಅಣ್ಣೋಜಿ ರಾವ್, ಟಿಪ್ಪು, ಆರ್. ವೇಣುಗೋಪಾಲ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subhramanya: ಹೆದ್ದಾರಿ ತಡೆದು ಪ್ರತಿಭಟನೆ: 13 ಮಂದಿಗೆ ಜಾಮೀನು
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
MUST WATCH
ಹೊಸ ಸೇರ್ಪಡೆ
China Badminton: ಚಿರಾಗ್- ಸಾತ್ವಿಕ್ ಸೆಮಿಫೈನಲ್‌ಗೆ
Kasragodu: ನರ್ಸಿಂಗ್ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್ ತನಿಖೆ
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.