ಗ್ರಂಥಾಲಯಕ್ಕೆ ಕಟ್ಟಡದ್ದೇ ಸಮಸ್ಯೆ!
ಜನವಸತಿ ಪ್ರದೇಶದಿಂದ ದೂರ ಇರುವುದರಿಂದ ತೊಂದರೆ ಸುಸಜ್ಜಿತ ಸ್ವಂತ ಕಟ್ಟಡ ನಿರ್ಮಾಣಕ್ಕೆ ಓದುಗರ ಒತ್ತಾಯ
Team Udayavani, Oct 25, 2019, 3:37 PM IST
ಭದ್ರಾವತಿ: ದೇವತಾರ್ಚನೆಗೆ ದೇವಾಲಯ ಹೇಗೆ ಮುಖ್ಯವೋ ಹಾಗೆಯೇ ಜ್ಞಾನಾರ್ಜನೆಗೆ ಗ್ರಂಥಾಲಯ ಅತ್ಯಗತ್ಯ. ಇದು ಪುಸ್ತಕದ ಮಹತ್ವ ಸಾರುವ ಬಿತ್ತಿ ಬರಹ.
ಗ್ರಂಥಾಲಯುದ ಮಹತ್ವದ ಕುರಿತ ವಿಚಾರಧಾರೆಗಳ ವಾಕ್ಯವನ್ನು ಭದ್ರಾವತಿಯ ಹಳೇನಗರದಲ್ಲಿರುವ ಕೇಂದ್ರ ಗ್ರಂಥಾಲಯದ ಬಿತ್ತಿಗಳ ಮೇಲೆ ಬರೆಯುವ ಮೂಲಕ ಗ್ರಂಥಗಳ ಅಧ್ಯಯನ ಹಾಗೂ ಗ್ರಂಥಾಲಯಗಳ ಮಹತ್ವವನ್ನು ವಿವರಿಸಲಾಗಿದೆ.
ತಾಲೂಕಿನ ಹಳೇನಗರದ ಬಸೇವೇಶ್ವರ ವೃತ್ತದ ಸಮೀಪ ಗ್ರಂಥಾಲಯಗಳ ಪಿತಾಮಹರೆನಿಸಿರುವ ಡಾ| ಎಸ್.ಆರ್.ರಂಗನಾಥ್ ಅವರ ಹೆಸರನ ರಾಜ್ಯ ಸರ್ಕಾರದ ಸಾರ್ವಜನಿಕ ಕೇಂದ್ರ ಗ್ರಂಥಾಲಯ ನೆಲ ಅಂತಸ್ತು ಸೇರಿದಂತೆ ಮೂರು ಅಂತಸ್ತಿನಲ್ಲಿರುವ ಸುಸಜ್ಜಿತವಾದ ಉತ್ತಮ ಗ್ರಂಥಾಲಯವಾಗಿದೆ. ಕೆಳ ಅಂತಸ್ತಿನಲ್ಲಿ ದಿನಪತ್ರಿಕೆ, ಪಾಕ್ಷಿಕ ಪತ್ರಿಕೆಗಳನ್ನು ಓದಲು ವ್ಯವಸ್ಥೆ ಮಾಡಿದ್ದರೆ, ಅದರ ಮೇಲಿನ ಅಂತಸ್ತಿನಲ್ಲಿ ಪುಸ್ತಕಗಳನ್ನು ಓದಲು ವ್ಯವಸ್ಥೆ ಮಾಡಲಾಗಿದೆ.
ಪ್ರತಿನಿತ್ಯ ಬೆಳಗ್ಗೆ 7ರಿಂದ 11.30ರವರೆಗೆ ಸಂಜೆ 4ರಿಂದ 7.30ರವರೆಗೆ ವಾಚನಾಲಯ ಸಾರ್ವಜನಿಕರಿಗೆ ಓದಲು ಮುಕ್ತವಾಗಿ ತೆರೆದಿರುತ್ತದೆ.
ಪುಸ್ತಕಗಳ ಉತ್ತಮ ಸಂಗ್ರಹ: ಈ ಗ್ರಂಥಾಲಯದಲ್ಲಿ ಕನ್ನಡದ 8 ಜನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು, ದ.ರಾ. ಬೇಂದ್ರೆ, ವಿ.ಕೃ. ಗೋಕಾಕ್, ಡಾ|
ಗಿರೀಶ್ ಕಾರ್ನಾಡ್, ಯು.ಆರ್. ಅನಂತಮೂರ್ತಿ, ಮಾಸ್ತಿ ವೆಂಕಟೇಶ್ ಐಯ್ಯಂಗಾರ್, ಚಂದ್ರಶೇಖರ ಕಂಬಾರ ಅವರ ಭಾವಚಿತ್ರವನ್ನು ಮೊದಲನೇ ಮಹಡಿಯಲ್ಲಿ ಹಾಕಲಾಗಿದೆ.
ವಿವಿಧ ಬೀರುಗಳಲ್ಲಿ ಸಾಹಿತ್ಯ, ರಾಜಕೀಯ ಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರ, ಕಾನೂನು, ಚರಿತ್ರೆ, ಭೂಗೋಳ, ಪರಿಸರ, ಶಬ್ದಕೋಶ, ಮಕ್ಕಳ ಕಥಾ, ಕಾದಂಬರಿ, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ ಮುಂತಾದ ಅನೇಕ ಪ್ರಾಕಾರಗಳ ಪುಸ್ತಕಗಳನ್ನು ಪ್ರತ್ಯೇಕವಾದ ಬೀರುವಿನಲ್ಲಿ ಓದುಗರಿಗೆ ಲಭ್ಯವಾಗುವ ರೀತಿ ಒಪ್ಪವಾಗಿ ಜೋಡಿಸಿಡಲಾಗಿದೆ. ಜೆರಾಕ್ಸ್ ಯಂತ್ರವನ್ನೂ ಸಹ ಇಲ್ಲಿ ಇಡಲಾಗಿದೆ. ಸ್ವಂತ ಕಟ್ಟಡದ ಅಗತ್ಯವಿದೆ: ಈ ಕುರಿತಂತೆ ಗ್ರಂಥಾಲಯದ ಮೇಲ್ವಿಚಾರಕರಾದ ಸುಸೆನ್ನಾ ಸೌಮ್ಯಲತಾ ಅವರು ಹೇಳುವಂತೆ ತಾಲೂಕಿನ ನಗರವ್ಯಾಪ್ತಿಯಲ್ಲಿ ಆರು ಗ್ರಂಥಾಲಯಗಳಿವೆ.
ನ್ಯೂಟೌನ್, ಕಾಗದನಗರ, ಮಿಲ್ಟ್ರೀಕ್ಯಾಂಪ್, ಹುತ್ತಾಬಸ್ ನಿಲ್ದಾಣ ಸಮೀಪವಿರುವ ಅಂಬೇಡ್ಕರ್ ಗ್ರಂಥಾಲಯ ಹೊಸ ಸಿದ್ಧಾಪುರದಲ್ಲಿನ ಗ್ರಂಥಾಲಯ ಎಲ್ಲವೂ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ.
ಅವುಗಳಲ್ಲಿ ಕೆಲವು ಕಟ್ಟಡಗಳು ಮಳೆಗೆ ಸೋರುತ್ತವೆ. ಹಳೇನಗರದ ಈ ಗ್ರಂಥಾಲಯ ಮಾತ್ರ
ಸುಸಜ್ಜಿತವಾದ ಸ್ವಂತ ಕಟ್ಟಡವನ್ನು ಹೊಂದಿದೆ. ಉಳಿದ ಗ್ರಂಥಾಲಯಗಳಿಗೂ ಸ್ವಂತ ಕಟ್ಟಡದ ಅಗತ್ಯವಿದೆ.
ಮಿಲ್ಟ್ರೀ ಕ್ಯಾಂಪ್‌ನಲ್ಲಿರುವ ಗ್ರಂಥಾಲಯ ಜನವಸತಿ
ಪ್ರದೇಶದಿಂದ ದೂರವಿರುವ ಕಾರಣ ಅದನ್ನು ಜನರಿಗೆ ಹತ್ತಿರವಾಗುವ ಕಟ್ಟಡದಲ್ಲಿ ವ್ಯವಸ್ಥೆ ಮಾಡಿದರೆ ಓದುಗರಿಗೆ ಅನುಕೂಲವಾಗುತ್ತದೆ. ಮಕ್ಕಳ ಗ್ರಂಥಾಲಯ ಅಗತ್ಯವಿದೆ. ಹಳೇನಗರದ ಸ್ವಂತ ಕಟ್ಟದಲ್ಲಿರುವ ಗ್ರಂಥಾಲಯದ ಹಿಂಭಾಗದಲ್ಲಿ ನಗರಸಭೆಗೆ ಸೇರಿದ ಜಾಗವಿದ್ದು ಅದನ್ನು ಗ್ರಂಥಾಲಯಕ್ಕೆ ಕೊಡುವ ಭರವಸೆಯಿದೆ. ಆ ಜಾಗ ದೊರಕಿದರೆ ಅಲ್ಲಿ ಕಟ್ಟಡ ನಿರ್ಮಿಸಿ ಮಕ್ಕಳ ಗ್ರಂಥಾಲಯ ತೆರೆಯಬಹುದಾಗಿದೆ ಎನ್ನುತ್ತಾರೆ.
ಓದುಗರಿಗೆ ಕೊರತೆಯಿಲ್ಲ.: ಗ್ರಂಥಾಲಯದಲ್ಲಿ ಸುಮಾರು 15 ಲಕ್ಷಕ್ಕೂ ಅಧಿಕ ವೈವಿಧ್ಯಮಯ ಪುಸ್ತಕಗಳಿದ್ದು ಸುಮಾರು 3401 ಓದುಗರು ಇಲ್ಲಿ ಸದಸ್ಯತ್ವ ಹೊಂದಿದ್ದು ಉಳಿದ ಎಲ್ಲಾ ಗ್ರಂಥಾಲಯಗಳಲ್ಲಿನ ಸದಸ್ಯರ ಸಂಖ್ಯೆ ಸೇರಿದರೆ 8730 ಸದಸ್ಯರನ್ನು ಹೊಂದಿದೆ. ಇಲ್ಲಿಯೇ ಕುಳಿತು ಓದುವವರಿಗಿಂತ ಮನೆಗಳಿಗೆ ಪುಸ್ತಕಗಳನ್ನು ತೆಗೆದುಕೊಂಡು ಹೋಗಿ ಓದುವವರ ಸಂಖ್ಯೆ ಅಧಿಕವಾಗಿದೆ. ಶಾಲಾ ಮಕ್ಕಳು ಸಹ ಬಿಡುವಿನ ವೇಳೆ ಇಲ್ಲಿಗೆ ಬಂದು ಪುಸ್ತಕ ಓದುತ್ತಾರೆ. ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ಪುಸ್ತಕಗಳು ಹಳೇನಗರದ ಈ ಗ್ರಂಥಾಲಯದಲ್ಲಿ ಲಭ್ಯವಿದ್ದು ಪರೀಕ್ಷಾರ್ಥಿಗಳು ಇಲ್ಲಿಗೆ ಬಂದು ಅದನ್ನು ಬಳಸಿಕೊಳ್ಳುತ್ತಾರೆ.
ಪತ್ರಿಕೆ ಓದಲು ಬರುವವರೇ ಹೆಚ್ಚು: ಗ್ರಂಥಾಲಯದಲ್ಲಿ ರಾಜ್ಯಮಟ್ಟದ ಎಲ್ಲಾ ಪತ್ರಿಕೆಗಳು, ಸ್ಥಳೀಯ ಪತ್ರಿಕೆಗಳು ಓದಲು ಲಭ್ಯವಿರುವ ಕಾರಣ ಪುಸ್ತಕ ಓದುವವರಿಗಿಂತ ಪತ್ರಿಕೆ ಓದಲು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಳಗ್ಗೆ ಮತ್ತು ಸಂಜೆ ಇಲ್ಲಿಗೆ ಬರುತ್ತಾರೆ. ಮುಂದಿನ ದಿನಗಳಲ್ಲಿ ಈ ಲೈಬ್ರರಿಯಲ್ಲಿ ಡಿಜಿಟಲ್ ಲೈಬ್ರರಿ ತೆರೆಯುವ ಸಾಧ್ಯತೆಯಿದೆ.
ಉತ್ತಮ ವಾಚನಾಲಯ: ಪ್ರತಿ ನಿತ್ಯ ವಾಚನಾಲಯಕ್ಕೆ ಓದಲು ಬರುವ ಕಂಟ್ರಾಕ್ಟರ್ ಸಿದ್ಧಪ್ಪ ಹೇಳುವಂತೆ ಗ್ರಂಥಾಲಯ ಅತ್ಯುತ್ತಮವಾಗಿದ್ದು ಎಲ್ಲ ಪತ್ರಿಕೆಗಳು, ಮ್ಯಾಗಜಿನ್‌ಗಳು ಬರುತ್ತವೆ. ಪುಸ್ತಕಗಳೂ ಇವೆ. ಆದರೆ ಇದನ್ನು ಈಗಿರುವ ಓದುಗರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಗ್ರಂಥಾಲಯ ಸದುಪಯೋಗ ಮಾಡಿಕೊಳ್ಳಬೇಕು ಎನ್ನುವ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ.
ಓಟ್ಟಿನಲ್ಲಿ ಗ್ರಂಥಾಲಯಗಳಿಗೆ ಅಗತ್ಯವಿರುವ ಸ್ವಂತ ಕಟ್ಟಡದ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕಾದ ಅಗತ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಟಿಟಿ ರೋಡ್‌ನಲ್ಲಿವೆ 4 ಬಾವಿ; ನೀರಿದೆ, ನಿರ್ವಹಣೆಯೇ ಇಲ್ಲ!
Sandalwood: ಭೂಗತ ಲೋಕದತ್ತ ʼಕ್ಯಾಪಿಟಲ್ ಸಿಟಿʼ
Vijay Hazare Trophy; ಅಭಿನವ್ ಮನೋಹರ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.