ಹೆಣ್ಣು-ಗಂಡು ಭೇದವಿಲ್ಲದೇ ಮಾಡಿ ರಕ್ತದಾನ
ಆರು ತಿಂಗಳಿಗೊಮ್ಮೆ ರಕ್ತದಾನದಿಂದ ಯಾವುದೇ ತೊಂದರೆಯಿಲ್ಲ
Team Udayavani, Jul 15, 2019, 3:03 PM IST
ಭಾಲ್ಕಿ: ಪಾಟೀಲ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಭಾಲ್ಕಿ ಫೋರ್ಟ್ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಸ್ತ್ರೀರೋಗ ತಜ್ಞೆ ಡಾ| ಶೈಲಜಾ ತಳವಾಡೆ ಉದ್ಘಾಟಿಸಿದ
ಭಾಲ್ಕಿ: ಅಪಘಾತಕ್ಕೀಡಾದ ವ್ಯಕ್ತಿಗಳಿಗೆ ಹಾಗೂ ಗರ್ಭಿಣಿಯರಿಗೆ ತುರ್ತಾಗಿ ರಕ್ತದ ಅವಶ್ಯಕತೆ ಇರುವುದರಿಂದ ಹೆಣ್ಣು-ಗಂಡೆಂಬ ಭೇದವಿಲ್ಲದೆ 18ರಿಂದ 60 ವರ್ಷದ ಒಳಗಿರುವ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬೇಕು ಎಂದು ವಲಯ ಅರಣ್ಯಾಧಿಕಾರಿ ಪ್ರಕಾಶ ನಿಪ್ಪಾಣಿ ಹೇಳಿದರು.
ಪಟ್ಟಣದ ಪಾಟೀಲ ಆಸ್ಪತ್ರೆ (ಖಂಡ್ರೆ ಗಲ್ಲಿ) ಯಲ್ಲಿ ರೋಟರಿ ಕ್ಲಬ್ ಭಾಲ್ಕಿ ಫೋರ್ಟ್, ವಿಶ್ವ ಹಿಂದು ಪರಿಷತ್ ಭಾಲ್ಕಿ, ಮಾರವಾಡಿ ಯುವಾ ಮಂಚ್ ಭಾಲ್ಕಿ ಹಾಗೂ ಎಬಿವಿಪಿ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ರಕ್ತದಾನ ಶ್ರೇಷ್ಠ ಹಾಗೂ ಪವಿತ್ರ ದಾನವಾಗಿದೆ. ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಹಾಗೂ ರಕ್ತದಲ್ಲಿ ಕೊಬ್ಬಿನಾಂಶ ಕಡಿಮೆಯಾಗಲು ಸಹಾಯವಾಗುತ್ತದೆ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಸ್ವ-ಇಚ್ಛೆಯಿಂದ ರಕ್ತದಾನ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಮಾಲೋಚಕ ಕೃಷ್ಣಾ ಕುಲಕರ್ಣಿ ಮಾತನಾಡಿ, ಪುರುಷರು, ಮಹಿಳೆಯರು ಪ್ರತಿ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಿದರೆ ಶರೀರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ತಿಳಿಸಿದರು.
ಸ್ತ್ರೀರೋಗ ತಜ್ಞೆ ಡಾ| ಶೈಲಜಾ ತಳವಾಡೆ ರಕ್ತದಾನ ಶಿಬಿರ ಉದ್ಘಾಟಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಡಾ| ನಿತೀನ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಸಂಘ-ಸಂಸ್ಥೆಗಳ ಸುಮಾರು 100 ಜನ ರಕ್ತದಾನ ಮಾಡಿ, ಇತರರಿಗೆ ಪ್ರೇರಣೆಯಾದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜಕುಮಾರ ಪಾಟೀಲ, ವಿಎಚ್ಪಿ ಮುಖಂಡ ಸುಧಾಕರ ದೇಶಪಾಂಡೆ, ಡಾ| ಕವಿತಾ ನಿತೀನ ಪಾಟೀಲ, ಮಾರವಾಡಿ ಯುವ ಮಂಚ್ ಮುಖಂಡ ಶ್ರೀನಾಥ ಹೇಡಾ, ಎಬಿವಿಪಿ ಜಿಲ್ಲಾ ಸಂಚಾಲಕ ಈಶ್ವರ ರುಮ್ಮಾ, ರಕ್ತ ನಿಧಿ ಕೇಂದ್ರದ ರಾಜೇಂದ್ರ, ಡಾ| ಅಮೀತ ಅಷ್ಟೂರೆ, ಡಾ|ಸಂತೋಷ ಕಾಳೆ, ಡಾ| ವಸಂತ ಪವಾರ, ಯೊಗೇಶ ಅಷ್ಟೂರೆ, ಅಮರ ಜಲ್ದೆ, ಅಶ್ವೀನ ಭೋಸ್ಲೆ, ಚಂದ್ರಕಾಂತ ಬಿರಾದಾರ, ಡಾ| ವಿಲಾಸ ಕನಸೆ, ಡಾ| ಧನರಾಜ ಹುಲಸೂರೆ, ಡಾ|ಯುವರಾಜ ಜಾಧವ, ಡಾ| ಶ್ರೀರಂಗ ಬಿರಾದಾರ, ಡಾ|ಶಶಿಕಾಂತ ಭೂರೆ, ಸಂಜೀವ ಪಂಡರಗೆರೆ, ಶಾಂತವೀರ ಸಿರ್ಗಾಪೂರೆ, ಸಂಜಯ ನಾಯ್ಕ, ಸಾಗರ ನಾಯ್ಕ, ಶಾಂತನು ಕುಲಕರ್ಣಿ, ಕಸಾಪ ಅಧ್ಯಕ್ಷ ಶಶಿಧರ ಕೋಸಂಬೆ, ರತ್ನದೀಪ ಹುಲಸೂರೆ, ಸೂರಜಸಿಂಗ್ ರಾಜಪೂತ್ ಉಪಸ್ಥಿತರಿದ್ದರು. ಪ್ರಾಚಾರ್ಯ ಅಶೋಕ ರಾಜೋಳೆ ಸ್ವಾಗತಿಸಿದರು. ರೋಟರಿ ಕಾರ್ಯದರ್ಶಿ ಉಮಾಕಾಂತ ವಾರದ ನಿರೂಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.