ನಿಯಮಿತ ಧ್ಯಾನ ಪದ್ಧತಿಯಿಂದ ವ್ಯಸನಮುಕ್ತಿ: ಗುರುದೇವಿ

ಯಾವ ಪ್ರಾಣಿಯೂ ಮುಟ್ಟದ ತಂಬಾಕು ಮನುಷ್ಯನ ಆವರಿಸಿಕೊಂಡಿದೆ

Team Udayavani, Jun 3, 2019, 3:50 PM IST

Udayavani Kannada Newspaper

ಭಾಲ್ಕಿ: ವ್ಯಸನ ಮುಕ್ತಿಗೆ ಧ್ಯಾನವೇ ಮದ್ದು. ನಿಯಮಿತ ಧ್ಯಾನ ಪದ್ಧತಿ ಅಳವಡಿಸಿಕೊಳ್ಳುವುದರಿಂದ ವ್ಯಸನಮುಕ್ತರಾಗಲು ಸಾಧ್ಯ ಎಂದು ಬೀದರ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹೋದರಿ ಗುರುದೇವಿತಾಯಿ ಹೇಳಿದರು.

ಪಟ್ಟಣದ ಬಾಲಾಜಿ ಮಂದಿರ ಹತ್ತಿರದ ಹನುಮಾನ ದೇವಾಲಯದ ಆವರಣದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಭಾಲ್ಕಿ ಘಟಕ ಆಯೋಜಿಸಿದ್ದ ತಂಬಾಕು ರಹಿತದಿನ ಮತ್ತು ವ್ಯಸನ ಮುಕ್ತ ಅಭಿಯಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ರಾಜಯೋಗದ ನಿಯಮಿತ ಅಭ್ಯಾಸದಿಂದ ವ್ಯಸನ ಮುಕ್ತರಾಗಬಹುದು ಎಂದು ಹೇಳಿದರು.

ಆರೋಗ್ಯಾಧಿಕಾರಿ ಡಾ| ಸಂತೋಷ ಕಾಳೆ ಮಾತನಾಡಿ, ಮಾನವನಿಗೆ ವ್ಯಸನಗಳು ವಿವಿಧ ರೂಪಗಳಲ್ಲಿ ಆವರಿಸಕೊಳ್ಳುತ್ತವೆ. ಒಂದು ಸಲ ಚಟಕ್ಕೆ ಬಿದ್ದ ವ್ಯಕ್ತಿ ತನ್ನ ಜೀವನ ನಷ್ಟವಾದರೂ ಆ ಚಟದಿಂದ ಹೊರಬರಲು ಬಯಸುವುದಿಲ್ಲ. ವೈದ್ಯ ಪದ್ಧತಿಯಲ್ಲಿ ಚಟಗಳನ್ನು ಬಿಡಿಸುವ ಹಲವಾರು ರೀತಿಗಳಿವೆ. ಆದರೆ ಇದರಿಂದ ಕೆಲವು ಸಲ ಹಾನಿಯಾಗುವ ಸಂಭವ ಉಂಟು. ಹೀಗಾಗಿ ಅಧ್ಯಾತ್ಮ ಮಾರ್ಗದಲ್ಲಿ ನಡೆದು, ರಾಜಯೋಗ ಪದ್ಧತಿ ಅನುಸರಿಸಿದ ಹಲವಾರು ವ್ಯಕ್ತಿಗಳು ವ್ಯಸನ ಮುಕ್ತರಾಗಿರುವ ಬಗ್ಗೆ ಉದಾಹರಣೆಗಳಿವೆ. ಕಾರಣ ರಾಜಯೋಗ ಧ್ಯಾನದಿಂದ ವ್ಯಸನಮುಕ್ತ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಡಾ| ಉದ್ಧವರಾವ್‌ ಕನಸೆ ಮಾತನಾಡಿ, ಯಾವ ಪ್ರಾಣಿಯೂ ಮುಟ್ಟದ ತಂಬಾಕು ಮನುಷ್ಯನನ್ನು ಆವರಿಸಿಕೊಂಡಿದೆ. ತಂಬಾಕು ಬೆಳೆದ ಹೊಲಕ್ಕೆ ಬೇಲಿ ಇರುವುದಿಲ್ಲ. ಕಾರಣ ಯಾವ ಪ್ರಾಣಿ, ಪಕ್ಷಿಗಳು ತಂಬಾಕು ಸೇವಿಸುವುದಿಲ್ಲ. ಆದರೆ ಮನುಷ್ಯ ಒಂದು ಸಲ ತಂಬಾಕಿನ ದಾಸನಾದರೆ ಸಾಯುವವರೆಗೆ ಬಿಡುವುದಿಲ್ಲ. ಇದಕ್ಕೆ ಕಾರಣ ಇದರಲ್ಲಿರುವ ನಿಕೋಟಿನ್‌ ಎನ್ನುವ ವಿಷಪದಾರ್ಥ ಮನುಷ್ಯನ ಗ್ರಂಥಿಯನ್ನು ಆವರಿಸಿಕೊಳ್ಳುತ್ತದೆ ಎಂದು ಹೇಳಿದರು.

ಡಾ| ಸುಪ್ರಿಯಾ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ವೇಳೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಭ್ಯಾಸಿಗಳಿಂದ ವ್ಯಸನಮುಕ್ತ ಜೀವನ ಜಾಗೃತಿ ಕುರಿತ ನೃತ್ಯ ಮತ್ತು ನಾಟಕ ಪ್ರದರ್ಶಿಸಲಾಯಿತು. ನ್ಯಾಯವಾದಿ ಬಾಬುರಾವ್‌ ಗಾಮಾ, ಸಿದ್ರಾಮಪ್ಪ ವಂಕೆ, ಸುಭಾಷ ಕಾರಾಮುಂಗೆ, ಸಹೋದರ ಸಿದ್ರಾಮ, ಮಲ್ಲಿಕಾರ್ಜುನ ನುಚ್ಚಾ, ದಿಲೀಪ ಘಂಟೆ ಉಪಸ್ಥಿತರಿದ್ದರು. ಸಹೋದರಿ ರಾಧಾ ನಿರೂಪಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು

ವ್ಯಸನ ಮುಕ್ತಿಗೆ ಧ್ಯಾನವೇ ಮದ್ದು. ನಿಯಮಿತ ಧ್ಯಾನ ಪದ್ಧತಿ ಅಳವಡಿಸಿಕೊಳ್ಳುವುದರಿಂದ ವ್ಯಸನಮುಕ್ತರಾಗಲು ಸಾಧ್ಯ ಎಂದು ಬೀದರ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹೋದರಿ ಗುರುದೇವಿತಾಯಿ ಹೇಳಿದರು.

ಪಟ್ಟಣದ ಬಾಲಾಜಿ ಮಂದಿರ ಹತ್ತಿರದ ಹನುಮಾನ ದೇವಾಲಯದ ಆವರಣದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಭಾಲ್ಕಿ ಘಟಕ ಆಯೋಜಿಸಿದ್ದ ತಂಬಾಕು ರಹಿತದಿನ ಮತ್ತು ವ್ಯಸನ ಮುಕ್ತ ಅಭಿಯಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ರಾಜಯೋಗದ ನಿಯಮಿತ ಅಭ್ಯಾಸದಿಂದ ವ್ಯಸನ ಮುಕ್ತರಾಗಬಹುದು ಎಂದು ಹೇಳಿದರು.

ಆರೋಗ್ಯಾಧಿಕಾರಿ ಡಾ| ಸಂತೋಷ ಕಾಳೆ ಮಾತನಾಡಿ, ಮಾನವನಿಗೆ ವ್ಯಸನಗಳು ವಿವಿಧ ರೂಪಗಳಲ್ಲಿ ಆವರಿಸಕೊಳ್ಳುತ್ತವೆ. ಒಂದು ಸಲ ಚಟಕ್ಕೆ ಬಿದ್ದ ವ್ಯಕ್ತಿ ತನ್ನ ಜೀವನ ನಷ್ಟವಾದರೂ ಆ ಚಟದಿಂದ ಹೊರಬರಲು ಬಯಸುವುದಿಲ್ಲ. ವೈದ್ಯ ಪದ್ಧತಿಯಲ್ಲಿ ಚಟಗಳನ್ನು ಬಿಡಿಸುವ ಹಲವಾರು ರೀತಿಗಳಿವೆ. ಆದರೆ ಇದರಿಂದ ಕೆಲವು ಸಲ ಹಾನಿಯಾಗುವ ಸಂಭವ ಉಂಟು. ಹೀಗಾಗಿ ಅಧ್ಯಾತ್ಮ ಮಾರ್ಗದಲ್ಲಿ ನಡೆದು, ರಾಜಯೋಗ ಪದ್ಧತಿ ಅನುಸರಿಸಿದ ಹಲವಾರು ವ್ಯಕ್ತಿಗಳು ವ್ಯಸನ ಮುಕ್ತರಾಗಿರುವ ಬಗ್ಗೆ ಉದಾಹರಣೆಗಳಿವೆ. ಕಾರಣ ರಾಜಯೋಗ ಧ್ಯಾನದಿಂದ ವ್ಯಸನಮುಕ್ತ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಡಾ| ಉದ್ಧವರಾವ್‌ ಕನಸೆ ಮಾತನಾಡಿ, ಯಾವ ಪ್ರಾಣಿಯೂ ಮುಟ್ಟದ ತಂಬಾಕು ಮನುಷ್ಯನನ್ನು ಆವರಿಸಿಕೊಂಡಿದೆ. ತಂಬಾಕು ಬೆಳೆದ ಹೊಲಕ್ಕೆ ಬೇಲಿ ಇರುವುದಿಲ್ಲ. ಕಾರಣ ಯಾವ ಪ್ರಾಣಿ, ಪಕ್ಷಿಗಳು ತಂಬಾಕು ಸೇವಿಸುವುದಿಲ್ಲ. ಆದರೆ ಮನುಷ್ಯ ಒಂದು ಸಲ ತಂಬಾಕಿನ ದಾಸನಾದರೆ ಸಾಯುವವರೆಗೆ ಬಿಡುವುದಿಲ್ಲ. ಇದಕ್ಕೆ ಕಾರಣ ಇದರಲ್ಲಿರುವ ನಿಕೋಟಿನ್‌ ಎನ್ನುವ ವಿಷಪದಾರ್ಥ ಮನುಷ್ಯನ ಗ್ರಂಥಿಯನ್ನು ಆವರಿಸಿಕೊಳ್ಳುತ್ತದೆ ಎಂದು ಹೇಳಿದರು.

ಡಾ| ಸುಪ್ರಿಯಾ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ವೇಳೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಭ್ಯಾಸಿಗಳಿಂದ ವ್ಯಸನಮುಕ್ತ ಜೀವನ ಜಾಗೃತಿ ಕುರಿತ ನೃತ್ಯ ಮತ್ತು ನಾಟಕ ಪ್ರದರ್ಶಿಸಲಾಯಿತು. ನ್ಯಾಯವಾದಿ ಬಾಬುರಾವ್‌ ಗಾಮಾ, ಸಿದ್ರಾಮಪ್ಪ ವಂಕೆ, ಸುಭಾಷ ಕಾರಾಮುಂಗೆ, ಸಹೋದರ ಸಿದ್ರಾಮ, ಮಲ್ಲಿಕಾರ್ಜುನ ನುಚ್ಚಾ, ದಿಲೀಪ ಘಂಟೆ ಉಪಸ್ಥಿತರಿದ್ದರು. ಸಹೋದರಿ ರಾಧಾ ನಿರೂಪಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು

ಟಾಪ್ ನ್ಯೂಸ್

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

vidhana-soudha

2025ರ ಸಾರ್ವತ್ರಿಕ ರಜೆ ಪಟ್ಟಿಗೆ ಸಂಪುಟ ಅಸ್ತು;19 ಸಾರ್ವತ್ರಿಕ,20 ಪರಿಮಿತ ರಜೆಗೆ ಅನುಮೋದನೆ

Vijayendra (2)

50 crores ಆಮಿಷ ಸುಳ್ಳಿನ ಕಂತೆ; ಸೂಕ್ತ ಸಾಕ್ಷಿ ನೀಡಿ ಇಲ್ಲವೇ ED ತನಿಖೆಗೊಪ್ಪಿಸಿ: ಬಿಜೆಪಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

1-amudaa

MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ‌ 9 ಗಂಟೆ ವಿಚಾರಣೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.