ಚೆಕ್ ಡ್ಯಾಂ ನಿರ್ಮಿಸದೆ ಹಣ ದುರ್ಬಳಕೆ
ಖುದಾವನಪೂರ ಗ್ರಾಮಸ್ಥರಿಂದ ಜಿಪಂ ಸಿಇಒಗೆ ಮನವಿ
Team Udayavani, Jul 27, 2019, 10:21 AM IST
ಭಾಲ್ಕಿ: ಖುದಾವನಪೂರ ಗ್ರಾಮದ ಹೊಲವೊಂದರ ಹತ್ತಿರ ಚೆಕ್ ಡ್ಯಾಂ ನಿರ್ಮಿಸುವ ಹೆಸರಿನಲ್ಲಿ ಜೆಸಿಬಿಯಿಂದ ಗಾರಿ ಕೆದರಿರುವುದನ್ನು ತಾಪಂ ಕಚೇರಿಯ ಅಧಿಕಾರಿಗಳು ವೀಕ್ಷಿಸಿದರು.
ಭಾಲ್ಕಿ: ಇಂಚೂರ ಗ್ರಾಪಂ ವ್ಯಾಪ್ತಿಯ ಖುದಾವನಪೂರ ಗ್ರಾಮದಲ್ಲಿ ಚೆಕ್‌ಡ್ಯಾಂ ನಿರ್ಮಿಸದೇ ಲಕ್ಷಗಟ್ಟಲೇ ಹಣ ಗುಳುಂ ಮಾಡಲಾಗಿದೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಖುದಾವನಪೂರ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಕುರಿತು ಖುದಾವನಪೂರ ಗ್ರಾಮಸ್ಥರಾದ ತಾನಾಜಿ ತುಳಸಿರಾಮ ಹುಪಳೆ, ಕರುಣಾಬಾಯಿ ಮುರಾರಿ, ಅಶೀಶಕುಮಾರ ಬಾಬುರಾವ್ ಮತ್ತು ನಾಗನಾಥ ರಾಚಪ್ಪಾ ಅವರು ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಇಂಚೂರ ಗ್ರಾಪಂ ಅಧಿನದಲ್ಲಿರುವ ಖುದಾವನಪೂರ ಗ್ರಾಮದ ಜ್ಯೋತಿಬಾ ನಾಮದೇವರಾವ್ ಮಾನೆ ಅವರ ಹೊಲದ ಹತ್ತಿರ 2018-19ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಡಿ ಚೆಕ್‌ಡ್ಯಾಂ ಕಾಮಗಾರಿ ನಿರ್ಮಾಣ ಮಾಡಲು ಕ್ರಿಯಾ ಯೋಜನೆ ರೂಪಿಸಿ, ಕಾಮಗಾರಿ ನಡೆಸದೇ ಹಣ ಪಡೆದಿದ್ದಾರೆ. ಮೇ 28ರಂದು ಚೆಕ್‌ಡ್ಯಾಂ ಕಾಮಗಾರಿಗೆ ಕೂಲಿ ಮತ್ತು ಸಾಮಗ್ರಿಯ ಒಟ್ಟು ಮೊತ್ತ ರೂ.22,9,524 ಪಡೆಯಲಾಗಿದೆ. ಆ ಸ್ಥಳದಲ್ಲಿ ಹೋಗಿ ನೋಡಿದರೆ ಚೆಕ್ ಡ್ಯಾಂ ನಿರ್ಮಾಣವೇ ಆಗಿಲ್ಲ. ಬರಿ ಜೆಸಿಬಿಯಿಂದ ಗಾರಿ ಕೆದರಿರುವುದು ಮಾತ್ರ ಕಾಣುತ್ತದೆ. ಕಾರಣ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!
Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್ ಶೆಫರ್ಡ್ ನಾಯಿ ಕೊಂದ!
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
MUST WATCH
ಹೊಸ ಸೇರ್ಪಡೆ
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!
Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.