ಸಾಹಿತ್ಯ ಸಮ್ಮೇಳನಕ್ಕೆ ತಯಾರಿ
ಪುರಭವನದಲ್ಲಿ ನಡೆಯಲಿದೆ ಕನ್ನಡನುಡಿ ಜಾತ್ರೆ
Team Udayavani, Jun 28, 2019, 11:02 AM IST
ಭಾಲ್ಕಿ: ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಪುರಸಭೆ ಆವರಣ ಕಾಂಕ್ರಿಟ್ ಮುಂತಾದ ವಸ್ತುಗಳಿಂದ ಅಸ್ವಚ್ಛತೆಯಿಂದ ಕೂಡಿದೆ.
ಜಯರಾಜ ದಾಬಶೆಟ್ಟಿ
ಭಾಲ್ಕಿ: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶುಕ್ರವಾರ ನಡೆಯಲಿರುವ ಸಾಹಿತ್ಯ ಸಮ್ಮೇಳನದ ವೇದಿಕೆ ಸಿದ್ಧ ಮಾಡುವಲ್ಲಿ ಪರಿಷತ್ ಪದಾಧಿಕಾರಿಗಳು ವಿಫಲರಾಗಿದ್ದಾರೆ. ಪಟ್ಟಣದ ಪುರಭವನದ ಆವರಣದಲ್ಲಿ 5ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಬೇಕು ಎಂದು ಕೆಲವು ದಿವಸಗಳ ಹಿಂದೆ ವೇದಿಕೆ ಸಿದ್ಧಮಾಡಲಾಗಿತ್ತು. ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಪುರಭವನ ಆವರಣ ಸ್ವಚ್ಛಗೊಳಿಸಿ ನುಡಿ ಜಾತ್ರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಎಲ್ಲರೂ ಒಕ್ಕೂರಲಿನಿಂದ ನಿರ್ಣಯಿಸಿದ್ದರು. ಆದರೆ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಒಗ್ಗಟ್ಟಿನ ಕೊರತೆಯಿಂದಾಗಿ ಪುರಭವನದ ಅವರಣದ ವೇದಿಕೆ ಸಿದ್ಧತೆ ಮಾಡುವಲ್ಲಿ ಹಿನ್ನಡೆಯಾಗಿದ್ದು, ಇದರಿಂದ ತಾಲೂಕಿನ ಸಾಹಿತ್ಯಾಸಕ್ತರು ನಿರುತ್ಸಾಹಕ್ಕೆ ಒಳಗಾಗುವಂತಾಗಿದೆ.
ಪಟ್ಟಣದ ಪುರಭವನದ ಸುತ್ತಲೂ ಪ್ರತಿಷ್ಠಿತ ಗುತ್ತಿಗೆದಾರರೊಬ್ಬರು ಕಾಂಕ್ರಿಟ್, ಸಿಮೆಂಟ್ ಮುಂತಾದ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಅವುಗಳನ್ನು ತೆರವುಗೊಳಿಸಿ ವೇದಿಕೆ ಸಿದ್ಧ ಮಾಡಬೇಕಾಗಿತ್ತು. ಆದರೆ ಸಾವಿರಾರು ಸಾಹಿತ್ಯಾಸಕ್ತರು ಸೇರುವ ಸ್ಥಳದಲ್ಲಿ ಬರೀ ಕಾಂಕ್ರಿಟ್ ಸೇರಿದಂತೆ ತ್ಯಾಜ್ಯ ಪದಾರ್ಥವೇ ತುಂಬಿಕೊಂಡಿದೆ. ಇದನ್ನು ತೆರವುಗೊಳಿಸಿ ನುಡಿ ಜಾತ್ರೆ ಸಂಭ್ರಮದಿಂದ ಆಚರಿಸಬೇಕು ಎನ್ನುವ ಮಾತು ಮರಿಚೀಕೆಯಾಗಿದೆ. ಈ ಹಿಂದಿನ ಕಸಾಪ ಅಧ್ಯಕ್ಷ ವಸಂತ ಹುಣಸನಾಳೆ ಅವರ ಅಧ್ಯಕ್ಷತೆಯಲ್ಲಿ ಎರಡು ತಾಲೂಕು ಸಮ್ಮೇಳನಗಳು ನಡೆದವು. ಎರಡೂ ಸಮ್ಮೇಳನಗಳಲ್ಲಿಯೂ ಎಲ್ಲರೂ ಒಗ್ಗಟ್ಟಿನಿಂದ ದುಡಿದಿದ್ದರು. ಆದರೆ ಈಗ ವೇದಿಕೆ ಸಿದ್ಧ ಮಾಡುವಲ್ಲಿಯೇ ವಿಫಲರಾದ ಕಾರಣ ಶುಕ್ರವಾರ ನಡೆಯುವ ಸಾಹಿತ್ಯ ಸಮ್ಮೇಳನ ಎಷ್ಟರ ಮಟ್ಟಿಗೆ ಯಶಸ್ವಿಯಾಗುವುದು ಎನ್ನುವುದು ಸಾಹಿತ್ಯಾಸಕ್ತರ ಚಿಂತನೆಯಾಗಿದೆ.
ಟೌನಹಾಲ್ ಆವರಣದಲ್ಲಿರುವ ಕಾಂಕ್ರಿಟ್ ಸೇರಿದಂತೆ ಮುಂತಾದ ತ್ಯಾಜ್ಯ ಪದಾರ್ಥಗಳು ಕೆಲವೇ ಕ್ಷಣದಲ್ಲಿ ತೆರವುಗೊಳಿಸುತ್ತೇವೆ. ಇದನ್ನೆಲ್ಲ ತೆರವುಗೊಳಿಸಿ ಸುಂದರ ವಾತಾವರಣ ನಿರ್ಮಾಣ ಮಾಡುತ್ತೇವೆ ಎನ್ನುತ್ತಾರೆ ಕಸಾಪ ಕಾರ್ಯದರ್ಶಿ ರಮೇಶ ಚಿದ್ರಿ. ಆದರೆ ಇದುವರೆಗೆ ಈ ಕಾರ್ಯ ನಡೆಯದಿರುವುದು ಸಾಹಿತ್ಯಾಭಿಮಾನಿಗಳಿಗೆ ಬೇಸರ ತರಿಸಿದೆ.
ಕನ್ನಡ ನುಡಿ ಹಬ್ಬ ಒಳ್ಳೆಯ ವಾತಾವರಣದಲ್ಲಿ ಚೆನ್ನಾಗಿ ನಡೆಯಬೇಕು. ಆದರೆ ಸಾವಿರಾರು ಸಾಹಿತ್ಯಾಸಕ್ತರು ಸೇರುವ ನುಡಿಜಾತ್ರೆ ವೇದಿಕೆ ಆವರಣ ಅಸ್ವಚ್ಛತೆಯಿಂದ ಕೂಡಿರುವುದು ನಮಗೆ ಬೇಸರ ತಂದಿದೆ ಎನ್ನುತ್ತಾರೆ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಯುವ ಅಧ್ಯಕ್ಷ ಸಂತೋಷ ಹಡಪದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.