ಶಿಕ್ಷಣದಿಂದಲೇ ವ್ಯಕ್ತಿಯ ಚಾರಿತ್ರ್ಯ ನಿರ್ಮಾಣ
ವಿದ್ಯಾರ್ಥಿಗಳನ್ನು ಅಂಕ ವೀರರನ್ನಾಗಿಸದೆ ಪ್ರಚಲಿತ ವಿದ್ಯಮಾನದ ಮಾಹಿತಿ ತಿಳಿಸಿ: ಈಶ್ವರ ಖಂಡ್ರೆ
Team Udayavani, Oct 6, 2019, 11:20 AM IST
ಭಾಲ್ಕಿ: ವ್ಯಕ್ತಿಯ ಚಾರಿತ್ರ್ಯ ನಿರ್ಮಾಣ ಅವನು ಪಡೆಯುವ ಶಿಕ್ಷಣವನ್ನು ಅವಲಂಬಿಸಿರುತ್ತದೆ. ಶಿಕ್ಷಣದ ಗುಣಮಟ್ಟ ನಿರ್ಧಾರವಾಗುವುದು ಶಿಕ್ಷಕರ ವ್ಯಕ್ತಿತ್ವ ಹಾಗೂ ಅವರಲ್ಲಿರುವ ಜ್ಞಾನವನ್ನು ಆಧರಿಸಿರುತ್ತದೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಅಷ್ಟೂರೆ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಪ್ರಸ್ತುತ ಸಾಲಿನ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಗೌರವ ಹಾಗೂ ಪೂಜ್ಯ ಭಾವನೆಯಿಂದ ವ್ಯವಹರಿಸುವ ವ್ಯವಸ್ಥೆ ನಿರ್ಮಾಣವಾಗಬೇಕು. ಆಗ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಹೆಸರಲ್ಲಿ ಆಚರಿಸುವ ಶಿಕ್ಷಕರ ದಿನಕ್ಕೆ ಅರ್ಥ ಬರುತ್ತದೆ ಎಂದರು.
ವಿದ್ಯಾರ್ಥಿಗಳನ್ನು ಕೇವಲ ಅಂಕ ವೀರರನ್ನಾಗಿ ಮಾಡದೇ ಅವರಿಗೆ ಪ್ರಾಥಮಿಕ ಹಂತದಿಂದಲೇ ದೇಶ ಹಾಗೂ ಜಗತ್ತಿನಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಮಾನಗಳ ಮಾಹಿತಿಗಳನ್ನು ತಿಳಿಸಿಕೊಡುವ ಕೆಲಸ ಶಿಕ್ಷಕರಿಂದ ಆಗಬೇಕಿದೆ. ತಾಲೂಕು ಶೈಕ್ಷಣಿಕವಾಗಿ ಪ್ರಗತಿ ಕಾಣುತ್ತಿದ್ದರೂ ಸಹ ತೃಪ್ತಿದಾಯಕವಾಗಿಲ್ಲ. ಹಾಗಾಗಿ ಶಿಕ್ಷಕರು ತಮ್ಮ ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ ಅರಿತು ಮಕ್ಕಳ ಉಜ್ವಲ ಭವಿಷ್ಯಕ್ಕೆ ನಾಂದಿಯಾಗಬೇಕು. ಪಟ್ಟಣದಲ್ಲಿ ಗುರುಭವನ ನಿರ್ಮಾಣ ಸೇರಿದಂತೆ ಶಿಕ್ಷಕರಿಗಿರುವ ಕುಂದು ಕೊರತೆಗಳನ್ನು ಹಂತ ಹಂತವಾಗಿ ಬಗೆ ಹರಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಕ್ಷೇತ್ರಶಿಕ್ಷಣಾ ಧಿಕಾರಿ ಸಿದ್ದವೀರಯ್ನಾ ರುದನೂರ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಕರ ಕಾರ್ಯಕ್ರಮಗಳು, ಸನ್ಮಾನ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳಿಗೆ ವ್ಯರ್ಥವಾಗಬಾರದು. ಶಿಕ್ಷಕರಲ್ಲಿ ಜ್ಞಾನ ಹೆಚ್ಚಿಸುವಂಥ ವಿಷಯಗಳ ಕುರಿತು ಚರ್ಚೆ ನಡೆಯುವ ಕೇಂದ್ರಗಳಾಗಬೇಕು. ಘನವೆತ್ತ ಹುದ್ದೆಯಾದ ಶಿಕ್ಷಕ ಹುದ್ದೆಯ ಶ್ರೇಷ್ಠತೆಯನ್ನು ಅರಿತುಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಡಾ| ಬಸವಲಿಂಗ ಪಟ್ಟದ್ದೇವರು ಮಾತನಾಡಿದರು. ಆಣದೂರಿನ ಭಂತೇಜಿ ಸಂಘ ರಖೀತ ಸಾನ್ನಿಧ್ಯ ವಹಿಸಿದ್ದರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ಮೀರಾಬಾಯಿ ಜನಾರ್ಧನ ಕಣಜೆ, ಉಪಾಧ್ಯಕ್ಷ ಮಾರುತಿರಾವ ಮಗರ್, ತಹಶೀಲ್ದಾರ್ ಅಣ್ಣಾರಾವ್ ಪಾಟೀಲ, ಉಪನಿರ್ದೇಶಕ ಅಮೃತರಾವ್ ಬಸಗುಂಡೆ, ತಾಪಂ ಸದಸ್ಯ ಶಿವರಾಜ ಪಾಟೀಲ, ಶಿವಾಜಿರಾವ್ ಪಾಟೀಲ, ಶಿಕ್ಷಕರ ಸಂಘದ ನಾನಾ ವಿಭಾಗದ ಸದಸ್ಯರುಗಳಾದ ಮಲ್ಲಿಕಾರ್ಜುನ ಹಲ್ಮಂಡಗೆ, ಸೂರ್ಯಕಾಂತ ಸುಂಟೆ, ರತ್ನದೀಪ ಹುಲಸೂರೆ, ಬಾಲಾಜಿ ಕಾಂಬಳೆ, ದತ್ತು ಕಾಟ್ಕರ್, ಶಿವಕುಮಾರ ಸಾಲಿ, ಡಾ| ಕಾಶೀನಾಥ ಚಲುವಾ, ಗಣಪತಿ ಬೋಚರೆ, ಬಾಜಿರಾವ್ ಮೇತ್ರೆ, ಮಲ್ಲಿಕಾರ್ಜುನ ಪಾಟೀಲ, ಭೀಮಣ್ಣ ಕೊಂಕಣೆ, ವಸಂತ ಹುಣಸನಾಳೆ, ಭಗವಾನ ವಲಂಡೆ, ನಿರಂಜಪ್ಪ ಪಾತ್ರೆ, ಹಣಮಂತ ಕಾರಾಮುಂಗೆ, ಗಿಪ್ಸನ್ ಕೋಟೆ, ಜಯರಾಜ ದಾಬಶೆಟ್ಟಿ, ರಾಜಕುಮಾರ ಕಾಂಬಳೆ, ಸಂಜೀವಕುಮಾರ ಜ್ಯಾಂತೆ, ಶಿವರಾಜ ಸ್ವಾಮಿ ಇದ್ದರು.
ಇದೇವೇಳೆ ಮರಣಹೊಂದಿದ ಶಿಕ್ಷಕರ ಕುಟುಂಟಬದವರನ್ನು, ನಿವೃತ್ತ ಶಿಕ್ಷಕರು ಮತ್ತು ಉತ್ತಮ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಸೂರ್ಯಕಾಂತ ಪಾಟೀಲ ಸ್ವಾಗತಿಸಿದರು. ನಾಗಭೂಷಣ ಮಾಮಡಿ ನಿರೂಪಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೊಳಕರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
Malpe ಬೀಚ್ ಸ್ವಚ್ಛತೆ: 3 ದಿನದಲ್ಲಿ 26 ಲೋಡ್ ಕಸ ಸಂಗ್ರಹ
MUST WATCH
ಹೊಸ ಸೇರ್ಪಡೆ
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.