ಪಿನ್‌ಕೋಡ್ ಇಲ್ಲದಿದ್ರೆ ಪತ್ರ ವಿಲೇವಾರಿಗೆ ಪ್ರಾಬ್ಲಂ
ಜಿಲ್ಲೆಯ ಐದೂ ತಾಲೂಕುಗಳಲ್ಲಿವೆ "ಓಬಳಾಪುರ' ಹೆಸರಿನ ಗ್ರಾಮಗಳುಊರಿನ ಹೆಸರನ್ನಷ್ಟೇ ನಮೂದಿಸುವುದರಿಂದ ಗಿರಕಿ ಹೊಡೆಯುತ್ತಿವೆ ಪತ್ರಗಳು
Team Udayavani, Nov 14, 2019, 12:42 PM IST
ಎಚ್.ಬಿ. ನಿರಂಜನ ಮೂರ್ತಿ
ಭರಮಸಾಗರ: ಚಿತ್ರದುರ್ಗ ಜಿಲ್ಲೆಯ ಐದು ತಾಲೂಕುಗಳಲ್ಲಿ “ಓಬಳಾಪುರ’ ಎಂಬ ಒಂದೇ ಹೆಸರಿನ ಊರುಗಳಿದ್ದು, ಪಿನ್‌ಕೋಡ್ ನಮೂದಿಸದೇ ಬರೀ ಊರ ಹೆಸರು ನಮೂದಿಸುವುದರಿಂದ ಪತ್ರ ವಿಲೇವಾರಿಗೆ ಬಹಳಷ್ಟು ಸಮಸ್ಯೆಯಾಗುತ್ತಿದೆ. ಅಂಚೆ ಇಲಾಖೆ ಮೂಲಕ ನಾನಾ ಇಲಾಖೆಗಳಿಗೆ ತಲುಪಬೇಕಾದ ಕಾಗದ ಪತ್ರಗಳು, ಸಾಮಾನ್ಯ ಪತ್ರಗಳು ಸಕಾಲದಲ್ಲಿ ತಲುಪದೆ “ಓಬಳಾಪುರ’ಗಳ ನಡುವೆ ಗಸ್ತು ಹೊಡೆಯುತ್ತಿದ್ದು, ಯಾರಿಗೆ ಸೇರಬೇಕೋ ಅವರಿಗೆ ತಲುಪುವುದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತಿವೆ.
ಹೊಳಲ್ಕೆರೆ ತಾಲೂಕು ಹೊರತುಪಡಿಸಿ ಚಿತ್ರದುರ್ಗ, ಚಳ್ಳಕೆರೆ , ಹೊಸದುರ್ಗ, ಮೊಳಕಾಲ್ಮೂರು, ಹಿರಿಯೂರು ತಾಲೂಕುಗಳಲ್ಲಿ ತಲಾ ಒಂದೊಂದು “ಓಬಳಾಪುರ’ ಗ್ರಾಮಗಳಿವೆ. ಇದರಿಂದ ಪತ್ರ ವ್ಯವಹಾರ ನಡೆಸುವ ಜನರಿಗೆ ಸಮಸ್ಯೆಯಾಗಿದೆ. ಚಿತ್ರದುರ್ಗ ತಾಲೂಕಿನ ಓಬಳಾಪುರ ಗ್ರಾಮಕ್ಕೆ ಪತ್ರ ಬರೆಯಬೇಕಿದ್ದರೆ ಪತ್ರ ತಲುಪಬೇಕಾದ ವಿಳಾಸ ಜತೆ ಕಡ್ಡಾಯವಾಗಿ ಇಲ್ಲಿನ ಪಿನ್ ಸಂಖ್ಯೆ 577541 ನಮೂದಿಸಿದರೆ ಆ ಪತ್ರ ಸಮಸ್ಯೆಯಿಲ್ಲದೆ ನೇರವಾಗಿ ಸೇರಬೇಕಾದವರ ಕೈ ಸೇರುತ್ತದೆ. ಆದರೆ ಪಿನ್‌ಸಂಖ್ಯೆ ದಾಖಲಿಸದೆ ಇರುವ ಪತ್ರಗಳು ವಿಳಾಸ ಕ್ರಮಬದ್ಧವಾಗಿದ್ದರೂ ಪಿನ್ ಸಂಖ್ಯೆ ಇಲ್ಲದೇ ಇರುವುದರಿಂದ ಜಿಲ್ಲೆಯ ಐದೂ ತಾಲೂಕುಗಳ ನಡುವೆ ಗಿರಕಿ ಹೊಡೆಯುವುದು ನಿಶ್ಚಿತ.
ಕೈ ಸೇರದ ಎಲ್‌ಐಸಿ ಬಾಂಡ್: ಶಿಕ್ಷಕರೊಬ್ಬರು ಎಲ್‌ಐಸಿಯಲ್ಲಿ ಸಾಲ ಪಡೆದು ಅದನ್ನು ಮರು ಪಾವತಿಸಿದ್ದರು. ಬಳಿಕ ಅವರ ಮೂಲ ಎಲ್‌ಐಸಿ ಬಾಂಡ್ ಅನ್ನು ಅಂಚೆ ಮೂಲಕ ಕಳುಹಿಸಿದ್ದೇವೆಂದು ಎಲ್‌ಐಸಿ ಅಧಿ ಕಾರಿಗಳು ತಿಳಿಸಿದ್ದರು. ಕಳುಹಿಸಿ ಒಂದು ತಿಂಗಳು ಕಳೆದರೂ ಬಾಂಡ್ ಸಿಕ್ಕಿರಲಿಲ್ಲ. ಎಲ್‌ಐಸಿ ಕಚೇರಿಗೆ ತೆರಳಿ ವಿಚಾರಿಸಿದಾಗ ಆ ಬಾಂಡ್ ಚಳ್ಳಕೆರೆ ತಾಲೂಕಿನ ಓಬಳಾಪುರ ತಲುಪಿದ್ದು ಗೊತ್ತಾಯಿತು.
ಮತ್ತೆ ಎಲ್‌ಐಸಿ ಕಚೇರಿ ಮೂಲಕವೇ ಮೂಲ ಬಾಂಡ್ ಅನ್ನು ಪಡೆಯಬೇಕಾಯಿತು. ಚಿತ್ರದುರ್ಗ ತಾಲೂಕಿನ ಓಬಳಾಪುರ ಗ್ರಾಮದ ಪತ್ರಗಳು ಪಿನ್‌ಸಂಖ್ಯೆ ಸಮಸ್ಯೆಯಿಂದ ಹೊಸದುರ್ಗ ತಾಲೂಕಿನ ಓಬಳಾಪುರ ಗ್ರಾಮಕ್ಕೆ ಹೋಗುತ್ತಿವೆ. ಅಲ್ಲಿ ಆ ವಿಳಾಸದ ವ್ಯಕ್ತಿ ಇಲ್ಲದೇ ಇರುವುದರಿಂದ ಪುನಃ ಜಿಲ್ಲಾ ಅಂಚೆ ಕಚೇರಿಯಿಂದ ಚಿತ್ರದುರ್ಗ ತಾಲೂಕಿನ ಓಬಳಾಪುರಕ್ಕೆ ಮರಳಿರುವ ಉದಾಹರಣೆಗಳಿವೆ. ಹೀಗೆ ಪತ್ರಗಳು ಅತ್ತಿಂದ ಇತ್ತ ಹೋಗಿ ತಲುಪುವ ವೇಳೆಗೆ ಕಾಲಹರಣವಾಗಿರುತ್ತದೆ.
ಓಬಳಾಪುರ ಹೆಸರಿನ ಗೊಂದಲದಿಂದ ಪ್ರತಿ ತಿಂಗಳು ಇಂತಹದ್ದೇ 20ಕ್ಕೂ ಹೆಚ್ಚು ಪ್ರಕರಣಗಳು ನಡೆಯುತ್ತಿವೆ. ಆಧಾರ್ ಕಾರ್ಡ್, ಶಾಲಾ ವರ್ಗಾವಣೆ ಪ್ರಮಾಣಪತ್ರ, ಎಲ್‌ಐಸಿ ಬಾಂಡ್, ಬ್ಯಾಂಕ್ ನೋಟಿಸ್‌ಗಳು, ಎಟಿಎಂ ಕಾರ್ಡ್, ಪ್ರಮುಖ ಪರೀಕ್ಷೆಗಳ ಪ್ರವೇಶ ಪತ್ರಗಳು, ಇತರೆ ಮಹತ್ವದ ದಾಖಲೆಗಳು ಕೈಸೇರಬೇಕಾದವರಿಗೆ ಸಕಾಲಕ್ಕೆ ಸೇರುತ್ತಿಲ್ಲ. ಜನರು ಅಂಚೆ ಸೇವೆ ಬಳಸುವ ವೇಳೆ ಪಿನ್ ಸಂಖ್ಯೆ ನಮೂದಿಸುವುದನ್ನು ಮರೆಯುತ್ತಿದ್ದಾರೆ. ಇದರಿಂದ ಇಂತಹ ಆವಾಂತರ ಸೃಷ್ಟಿಯಾಗಿದೆ ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ
Namma Metro; ಡಿಸೆಂಬರ್ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ShivaRajkumar ಮನೆಯ ಮುದ್ದಿನ ಶ್ವಾನ ನೀಮೋ ಇನ್ನಿಲ್ಲ: ಭಾವನಾತ್ಮಕ ಪತ್ರ ಬರೆದ ಗೀತಾ
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.