ಎಟಿಎಂ ಕೇಂದ್ರಗಳಿಗಿಲ್ಲಅಗತ್ಯ ಭದ್ರತೆ

ಭದ್ರತಾ ಸಿಬ್ಬಂದಿ ನೇಮಕದಲ್ಲಿನಿರ್ಲಕ್ಷ್ಯ ಬ್ಯಾಂಕ್‌ಗಳಿಂದ ಕಾಯ್ದೆಉಲ್ಲಂಘನೆ

Team Udayavani, Oct 21, 2019, 10:55 AM IST

21-October-5

„ಶಶಿಕಾಂತ ಬಂಬುಳಗೆ
ಬೀದರ:
ಎಟಿಎಂ ಕೇಂದ್ರಗಳಲ್ಲಿ ಬೆಚ್ಚಿ ಬೀಳಿಸುವಂಥ ಹಲ್ಲೆ, ದರೋಡೆಯಂಥ ಪ್ರಕರಣಗಳು ಹೆಚ್ಚುತ್ತಿದ್ದರೂ ಗಡಿ ಜಿಲ್ಲೆ ಬೀದರನಲ್ಲಿ ಎಟಿಎಂ ಕೇಂದ್ರಗಳಿಗೆ ಕಾವಲುಗಾರನ ಭದ್ರತೆ (ಗಾರ್ಡ್‌) ಮತ್ತು ಸಮರ್ಪಕ ಸಿಸಿ ಕ್ಯಾಮರಾಗಳ ಅಳವಡಿಕೆ ವಿಷಯದಲ್ಲಿ ಬ್ಯಾಂಕ್‌ ಮತ್ತು ಕ್ಯಾಶ್‌ ಏಜೆನ್ಸಿಗಳು ನಿರಾಸಕ್ತಿ ತೋರುತ್ತಿವೆ.

ಇದರಿಂದ ಎಟಿಎಂ ಗ್ರಾಹಕರಲ್ಲಿ ಅಭದ್ರತೆ ಕಾಡುತ್ತಿದೆ. ಗ್ರಾಹಕರಿಗೆ ತುರ್ತು ಸೇವೆ ಕಲ್ಪಿಸುವ ಉದ್ದೇಶದಿಂದ ಎಟಿಎಂಗಳನ್ನು ಆರಂಭಿಸಿರುವ ಬ್ಯಾಂಕ್‌ ಗಳು, ಗಾರ್ಡ್‌ಗಳ ನೇಮಕದಲ್ಲಿ ನಿರ್ಲಕ್ಷ್ಯತನದಿಂದ ಎಟಿಎಂ ಕೇಂದ್ರಗಳು ಇತ್ತೀಚಿನ ದಿನಗಳಲ್ಲಿ ಅಪರಾಧ ಕೃತ್ಯಗಳ ತಾಣವಾಗುತ್ತಿದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ. ಭದ್ರತೆ ವಿಷಯದಲ್ಲಿ ಪೊಲೀಸ್‌ ಇಲಾಖೆ ಖಡಕ್‌ ಎಚ್ಚರಿಕೆ ನೀಡಿದರೂ ಬ್ಯಾಂಕ್‌ಗಳು ನಿಷ್ಕಾಳಜಿ ತೋರುತ್ತಿವೆ. ಹಾಗಾಗಿ ಹಲವೆಡೆ ಬಾಗಿಲು ಹಾಕದೆ ಸದಾ ತೆರೆದ್ದು, ಆತಂಕದ ಸ್ಥಿತಿ ಇದ್ದರೆ, ಮತ್ತೆ ಕೆಲವೆಡೆ ಗಾರ್ಡ್‌ಗಳಿದ್ದರೂ ಎಟಿಎಂ ಒಳಗಡೆಯೇ ನಿದ್ರೆಗೆ ಜಾರಿರುತ್ತಾರೆ.

ಎಟಿಎಂ ಕೇಂದ್ರಗಳಿಗೆ ಭದ್ರತೆ ಹಿನ್ನೆಲೆಯಲ್ಲಿ ಸರ್ಕಾರ ಕರ್ನಾಟಕ ಸಾರ್ವಜನಿಕ ಸುರಕ್ಷತೆ (ಕ್ರಮಗಳು) ಜಾರಿ ಅ ಧಿನಿಯಮ ಜಾರಿಗೊಳಿಸಿದ್ದು, ಕಡ್ಡಾಯವಾಗಿ ಕೇಂದ್ರಗಳಿಗೆ ಗಾರ್ಡ್‌ಗಳನ್ನು ನೇಮಿಸಬೇಕು ಮತ್ತು ಅಧಿಕ ಪಿಕ್ಸಲ್‌ವುಳ್ಳ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಸೂಚಿಸಿದೆ. ಆದರೆ, ಬ್ಯಾಂಕ್‌ಗಳು ಈ ನಿಲಯಗಳನ್ನು ಕಡೆಗಣಿಸುತ್ತಿವೆ. ಬೀದರನ 70 ಸೇರಿದಂತೆ ಜಿಲ್ಲೆಯಲ್ಲಿ ಅಂದಾಜು 250 ಎಟಿಎಂ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ ಅರ್ಧದಷ್ಟು ಬ್ಯಾಂಕ್‌ಗಳು ತಮ್ಮ ಕೇಂದ್ರಗಳಿಗೆ ಮತ್ತು ಅದರ ಗ್ರಾಹಕರಾಗಿರುವ ಜನರ ರಕ್ಷಣೆಗಾಗಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಗೋಜಿಗೆ ಹೋಗಿಲ್ಲ. ಇದು ಅಪರಾಧ ಪ್ರಕರಣಗಳು ಹೆಚ್ಚಲು ಕಾರಣವಾಗಿದೆ.

ಬೆಂಗಳೂರಿನ ಎಟಿಎಂ ಕೇಂದ್ರವೊಂದರಲ್ಲಿ ಈ ಹಿಂದೆ ಮಹಿಳೆ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಘಟನೆ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿತ್ತು. ಅದರಂತೆ ಬೀದರನಲ್ಲಿಯೂ ಎಟಿಎಂ ಕೇಂದ್ರಗಳಲ್ಲಿ ಅಪರಾಧ ಘಟನೆಗಳು ಸಾಕಷ್ಟಾಗಿವೆ. ನಗರದ ಬಸ್‌ ನಿಲ್ದಾಣದ ಎಟಿಎಂ, ರೈಲ್ವೆ ನಿಲ್ದಾಣ ಸಮೀಪದ ಎಟಿಎಂನಲ್ಲಿ ದರೋಡೆ ಪ್ರಕರಣಗಳು, ಅಷ್ಟೇ ಅಲ್ಲ ಎಟಿಎಂನಿಂದ ಹಣ ಡ್ರಾ ಮಾಡಿಕೊಂಡು ಬಂದ ವ್ಯಕ್ತಿಯಿಂದ ಹಣ ದೋಚಿದ ಹಲವು ಪ್ರಕರಣಗಳು ವರದಿಯಾಗಿವೆ.

ಇದೆಲ್ಲದಕ್ಕೂ ಗಾರ್ಡ್‌ಗಳ ಕೊರತೆಯೇ ಪ್ರಮುಖ ಕಾರಣವಾಗಿದ್ದರೂ ಬ್ಯಾಂಕ್‌ಗಳು ಸುರಕ್ಷತೆ ವಿಷಯದಲ್ಲಿ ಮೌನ ವಹಿಸಿವೆ. ನಗರದಲ್ಲಿವೆ 70 ಎಟಿಎಂಗಳು: ನಗರ ವ್ಯಾಪ್ತಿಯೊಂದರಲ್ಲೇ 20 ಬ್ಯಾಂಕ್‌ಗಳ ಸುಮಾರು 70ಕ್ಕೂ ಹೆಚ್ಚು ಎಟಿಎಂಗಳು ಇವೆ. ಕೆಲವು ಎಟಿಎಂಗಳು ನಗರದ ಜನಸಂದಣಿ ಇರುವ ಹƒದಯ ಭಾಗದಲ್ಲಿದ್ದರೆ ಇನ್ನೂ ಕೆಲವು ಕೇಂದ್ರಗಳು ಹೆಚ್ಚು ಜನಸಂಚಾರವಿಲ್ಲದ ಪ್ರದೇಶಗಳಲ್ಲಿವೆ. ಅಂತಹ ಕಡೆಗಳಲ್ಲಿಯೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಲ್ಲ. ಇತ್ತಿಚೆಗೆ ಎಟಿಎಂ ಕೇಂದ್ರಗಳಲ್ಲಿ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಿ ಹಣ ವಂಚನೆಯಂಥ ಘಟನೆಗಳಿಗೆ ಕಡಿವಾಣ ಹಾಕಲಾಗಿದೆ. ಅದೇ ರೀತಿ ಭದ್ರತೆ ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಈಗಲಾದರೂ ಬ್ಯಾಂಕ್‌ಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಕೇಂದ್ರಗಳಿಗೆ ಗಾರ್ಡ್‌ಗಳನ್ನು ನೇಮಕ ಮಾಡಿಕೊಳ್ಳಬೇಕಾಗಿದೆ.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.