ತೊಗರಿ ಬೆಳೆ ಬಂಪರ್‌ ನಿರೀಕ್ಷೆಯಲ್ಲಿ ರೈತರು

ಅನ್ನದಾತರ ಮೊಗದಲ್ಲಿ ಮಂದಹಾಸಜಿಲ್ಲೆಯಲ್ಲಿ 82 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ

Team Udayavani, Dec 23, 2019, 11:57 AM IST

23-December-5

ಶಶಿಕಾಂತ ಬಂಬುಳಗೆ
ಬೀದರ:
ಸತತ ಬರಗಾಲದಿಂದ ಬಸವಳಿದ ಗಡಿ ಜಿಲ್ಲೆ ಬೀದರನ ರೈತರಿಗೆ ಈ ವರ್ಷ ತೊಗರಿ ಬೆಳೆ ಕೈಹಿಡಿಯಲಿದೆ. ಉತ್ತಮ ಮಳೆ ಮತ್ತು ಕೀಟ ಬಾಧೆ ಇಲ್ಲವಾದ್ದರಿಂದ ತೊಗರಿ ಬೆಳೆ ಬಂಪರ್‌ ಇಳುವರಿ ಸಿಗಬಹುದು ಎಂಬ ನಿರೀಕ್ಷೆ ಹೊಂದಿದ್ದು, ಮೊಗದಲ್ಲಿ ಮಂದಹಾಸ ಮೂಡಿಸಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿ ಅತಿವೃಷ್ಟಿ ಅನಾಹುತ ಸೃಷ್ಟಿಸಿ ಕೃಷಿಗೆ ಪೆಟ್ಟು ಕೊಟ್ಟಿದೆ. ಆದರೆ, ಬೀದರನಲ್ಲಿ ಮಾತ್ರ ಈ ವರ್ಷ ಕೃಷಿಗೆ ಪ್ರಕೃತಿ ಸಾಥ್‌ ನೀಡಿದೆ. ಹಾಗಾಗಿ ತೊಗರಿ ಹುಲುಸಾಗಿ ಬೆಳೆದು ನಳನಳಿಸುತ್ತಿದ್ದು, ಈ ಬಾರಿ ಉತ್ತಮ ಇಳುವರಿ ಜತೆಗೆ ವೈಜ್ಞಾನಿಕ ದರವೂ ಸಿಗಲಿ ಎಂಬುದು ಅನ್ನದಾತರ ಅಶಯ.

ಬಿತ್ತನೆ ಪ್ರದೇಶ ಇಳಿಮುಖ: ಎರಡೂ¾ರು ವರ್ಷಗಳ ಹಿಂದೆ ತೊಗರಿ ದರ ನಿರೀಕ್ಷೆಗೂ ಮೀರಿ ಗಗನಮುಖೀಯಾಗಿ, ಕೆಜಿ ತೊಗರಿಗೆ 100 ರೂ. ಗಡಿ ದಾಟಿತ್ತು. ಇದರಿಂದ ಖುಷಿಯಲ್ಲಿದ್ದ ರೈತರು, ಮರು ವರ್ಷವೂ ಹೆಚ್ಚಿನ ಪ್ರದೇಶದಲ್ಲಿ ತೊಗರಿಯನ್ನೇ ಬಿತ್ತನೆ ಮಾಡಿದ್ದರು. ಆದರೆ, ದರ ಕುಸಿತದಿಂದಾಗಿ ಸರ್ಕಾರದ ಬೆಂಬಲ ಬೆಲೆಗೆ ಅಂಗಲಾಚಬೇಕಾಯಿತು. ಹೀಗಾಗಿ ಕೆಲ ವರ್ಷಗಳಿಂದ ತೊಗರಿ ಬೆಳೆ ಬಿತ್ತನೆ ಪ್ರದೇಶ ಕಡಿಮೆಯಾಗುತ್ತ ಬರುತ್ತಿದೆ. 82 ಸಾವಿರ ಹೆಕ್ಟೇರ್‌ ಕ್ಷೇತ್ರ: ಬೀದರ ಜಿಲ್ಲೆಯಲ್ಲಿ ಸುಮಾರು 25 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಜಿಆರ್‌ಜಿ- 811, ಮಾರುತಿ, ಜಿಆರ್‌ಪಿ- 152 ಮತ್ತು ಬಿಎಸ್‌ಎಂಆರ್‌- 736 ತೊಗರಿ ತಳಿ ಬಿತ್ತನೆಗೆ ಬಳಸಲಾಗುತ್ತಿದ್ದು, ಅದರಲ್ಲಿ ಜಿಆರ್‌ಜಿ- 811 ತಳಿ ಹೆಚ್ಚಾಗಿದೆ. ಈಗಾಗಲೇ ತೊಗರಿ ಕಾಳು ಗಟ್ಟಿಯಾಗಿದ್ದು, ಜನವರಿ ಕೊನೆ ವಾರದಿಂದ ಕಟಾವಿಗೆ ಬರಲಿದೆ.

ಎಕರೆಗೆ ನಾಲ್ಕೈದು ಕ್ವಿಂಟಲ್‌ ಇಳುವರಿ: ತೊಗರಿ ಹೂವಾಡುವ ವೇಳೆ ಮಳೆ ಮತ್ತು ಮಂಜಿನಿಂದಾಗಿ ಬೆಳೆಯಲ್ಲಿ ಎಲೆ ಚುಕ್ಕೆ ರೋಗ ಕಾಣಿಸಿಕೊಂಡಿತ್ತು. ಇದರಿಂದ ಹೂ-ಎಲೆ ಉದುರಿ ರೈತರಲ್ಲಿ ಕೊಂಚ ಆತಂಕ ತಂದಿತ್ತು. ಆದರೆ, ಮತ್ತೆ ಹೂವಾಡಿ, ಕಾಯಿ ಕಟ್ಟಿಕೊಂಡಿವೆ. ಸದ್ಯದ ವಾತಾವರಣ ರಾಶಿಯ ಅವವರೆಗೂ ಹೀಗೆ ಮುಂದುವರಿದಲ್ಲಿ ಎಕರೆಗೆ 4 ರಿಂದ 5 ಕ್ವಿಂಟಲ್‌ ತೊಗರಿ ಇಳುವರಿ ಸಿಗಬಹುದೆಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ ತೊಗರಿ ಜತೆಗೆ ಸೋಯಾಬಿನ್‌, ಕಡಲೆ, ಜೋಳ ಸೇರಿ ಬಹುತೇಕ ಬೆಳೆ ಚೆನ್ನಾಗಿದ್ದು, ಇಳುವರಿಯೂ ಹೆಚ್ಚಳವಾಗಲಿದೆ. ಹೀಗಾಗಿ ತೊಗರಿ ಮಾರುಕಟ್ಟೆಗೆ ಬರುವ ಮುನ್ನ ಖರೀದಿ ಕೇಂದ್ರ ಪ್ರಾರಂಭಿಸಬೇಕು ಮತ್ತು ಅಗತ್ಯ ಪ್ರಮಾಣದಲ್ಲಿ ಖರೀದಿ ಆಗಬೇಕು. ಜತೆಗೆ ತೊಗರಿ ಪೂರೈಸಿದ ರೈತರಿಗೆ ತಕ್ಷಣ ಹಣ ಪಾವತಿಸಿ ಅಲೆದಾಡುವುದನ್ನು ತಪ್ಪಿಸಬೇಕು ಎಂಬುದು ಅನ್ನದಾತರ ಅಳಲು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ.

ಬೀದರ ಜಿಲ್ಲೆಯಲ್ಲಿ ಈ ವರ್ಷ ತೊಗರಿ ಬೆಳೆ ಹುಲುಸಾಗಿ ಬೆಳೆದಿದೆ. ಈಗಾಗಲೇ ಶೇ. 50ರಷ್ಟು ಕಾಳು ಕಟ್ಟಿಕೊಂಡಿದ್ದು, ಉತ್ತಮ ಇಳುವರಿ ಸಾಧ್ಯತೆ ಇದೆ. ಪಲ್ಸ್‌ ಮ್ಯಾಜಿಕ್‌ ಔಷಧ ಬೆಳೆಗೆ ಸಿಂಪಡಣೆ ಮಾಡಿದಲ್ಲಿ ಕಾಳು ಗಟ್ಟಿಯಾಗಲು ಅನುಕೂಲವಾಗಲಿದೆ ಮತ್ತು ಹೂವು ಉದುರುವುದು ತಪ್ಪಲಿದೆ. ರೈತರು ಈ ಕ್ರಮ ಅನುಸರಿಸಿದ್ದಲ್ಲಿ ತೊಗರಿಯಲ್ಲಿ ಶೇ. 15-20ರಷ್ಟು ಇಳುವರಿ ಜಾಸ್ತಿಯಾಗಲಿದೆ.
ಸುನೀಲಕುಮಾರ ಎನ್‌.ಎಂ,
ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಬೀದರ

ಸಕಾಲಕ್ಕೆ ಮಳೆ ಮತ್ತು ಹೆಚ್ಚಿನ ಕೀಟ ಬಾಧೆ ಕಂಡು ಬಾರದ ಕಾರಣ ಈ ವರ್ಷ ತೊಗರಿ ಬೆಳೆ ಉತ್ತಮವಾಗಿದೆ. ವಾತಾವರಣ ಹೀಗೆ ಸಾಥ್‌ ನೀಡಿದರೆ ಬಂಪರ್‌ ಇಳುವರಿ ಸಿಗುವ ನಿರೀಕ್ಷೆ ಇದೆ. ಉತ್ತಮ ಬೆಳೆ ಇದ್ದಾಗ ದರ ಇರಲ್ಲ ಮತ್ತು ದರ ಇದ್ದಾಗ ಇಳುವರಿ ಕುಸಿದಿರುತ್ತದೆ. ಹಾಗಾಗಿ ತೊಗರಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ, ಸಕಾಲಕ್ಕೆ ಪಾವತಿಸುವ ಮೂಲಕ ರೈತರ ಕೈಹಿಡಿಯಬೇಕಿದೆ.
ಚನ್ನಬಸಪ್ಪ ಬಿರಾಡ.
ಜನವಾಡ

ಟಾಪ್ ನ್ಯೂಸ್

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

Udupi: ಗೀತಾರ್ಥ ಚಿಂತನೆ-141: “ಇಗೋ’ ಬೂಸ್ಟ್‌ ಮಾಡುವ ಆಧುನಿಕ ಶಿಕ್ಷಣ ಕ್ರಮ

Udupi: ಗೀತಾರ್ಥ ಚಿಂತನೆ-141: “ಇಗೋ’ ಬೂಸ್ಟ್‌ ಮಾಡುವ ಆಧುನಿಕ ಶಿಕ್ಷಣ ಕ್ರಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

court

Mangaluru; ಪ್ರತ್ಯೇಕ ಚೆಕ್‌ಬೌನ್ಸ್‌ ಪ್ರಕರಣ: ಇಬ್ಬರು ಖುಲಾಸೆ

police crime

ಕೊಳತ್ತಮಜಲಿನಲ್ಲಿ ಹೊಡೆದಾಟ; ಎರಡು ಪ್ರತ್ಯೇಕ ಪ್ರಕರಣ ದಾಖಲು

police

Bantwal: ಹಾಡಹಗಲೇ ಮನೆಯಿಂದ ನಗದು ಕಳವು

1-mm

State Olympics ಮಂಗಳೂರು, ಉಡುಪಿಯಲ್ಲಿ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

1-k-u

Karavali Utsav: ಶ್ವಾನ ಪ್ರದರ್ಶನ, ಚಲನಚಿತ್ರೋತ್ಸವ, ಯುವಮನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

court

Mangaluru; ಪ್ರತ್ಯೇಕ ಚೆಕ್‌ಬೌನ್ಸ್‌ ಪ್ರಕರಣ: ಇಬ್ಬರು ಖುಲಾಸೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

death

Mangaluru: ದ್ವಿಚಕ್ರ ವಾಹನ ಢಿಕ್ಕಿ: ಟೆಂಪೋ ಚಾಲಕ ಸಾ*ವು

arrested

Kasaragod: ಪತ್ನಿಯ ಹಂತಕನಿಗೆ 10 ವರ್ಷ ಕಠಿನ ಸಜೆ

saavu

Puttur: ಎಸೆಸೆಲ್ಸಿ ವಿದ್ಯಾರ್ಥಿನಿ ಆತ್ಮಹ*ತ್ಯೆ ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.