ಸುಗ್ಗಿ ಹಬ್ಬ ಎಳ್ಳಮಾವಾಸ್ಯೆ ಸಂಭ್ರಮ
ಭೂತಾಯಿ ಪೂಜಿಸಿ ಚರಗ ಚಲ್ಲಿದ ರೈತರು ಸೌಹಾರ್ದ ಸಂಕೇತವಾಗಿ ಆಚರಣೆ
Team Udayavani, Dec 26, 2019, 12:54 PM IST
ಬೀದರ: ತಲೆ ಮೇಲೆ ಭಕ್ಷ್ಯ ಭೋಜನದ ಬುಟ್ಟಿ ಹೊತ್ತು ಹೊಲದತ್ತ ಹೆಜ್ಜೆ ಹಾಕಿದ ರೈತ ಕುಟುಂಬಗಳು. “ಓಲಗ್ಯಾ ಓಲಗ್ಯಾ ಚಲ್ಲಂ ಪೋಲಗ್ಯಾ’ ಎಂದು ಕೂಗುತ್ತ ಭೂರಮೆಗೆ ಚರಗ ಚೆಲ್ಲಿ ಭೂತಾಯಿಗೆ ಪ್ರಾರ್ಥಿಸಿದ ಅನ್ನದಾತರು.. ಬಂಧು- ಬಳಗ, ಸ್ನೇಹಿತರಿಗೆ ದಾಸೋಹ ಸೇವೆ ಮಾಡಿದ ನೇಗಿಲ ಯೋಗಿಗಳು!
ಇದು ಜಿಲ್ಲಾದ್ಯಂತ ಬುಧವಾರ ಎಳ್ಳಮಾವಾಸ್ಯೆ ಹಿನ್ನೆಲೆಯಲ್ಲಿ ಕಂಡು ಬಂದ ದೃಶ್ಯ. ಅನ್ನದಾತರು ಆಚರಿಸುವ ವಿಶಿಷ್ಟ ಹಬ್ಬ ಇದಾಗಿದ್ದು, ಜಾತಿ, ಮತ ಎಂಬ ಭೇದ- ಭಾವ ಇಲ್ಲದೆ ಹಬ್ಬವನ್ನು ಸೌಹಾರ್ದತೆಯ ಸಂಕೇತವಾಗಿ ಆಚರಿಸಲಾಯಿತು. ಎಲ್ಲೆಡೆ ಸುಗ್ಗಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಗುರುವಾರ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಕಡೆಗಳಲ್ಲಿ ಬುಧವಾರವೇ ಹಬ್ಬವನ್ನು ಸಡಗರದಿಂದ ನಡೆಸಲಾಯಿತು.
ಎಳ್ಳಮಾವಾಸ್ಯೆ ಹಬ್ಬ ಭೂತಾಯಿಯ ಆರಾಧನೆ ಪ್ರತೀಕವಾಗಿದೆ. ಪ್ರತಿ ಹಬ್ಬಗಳನ್ನು ಮನೆಯಲ್ಲಿ ಸಿಹಿ ಭಕ್ಷ್ಯಗಳನ್ನು ಸಿದ್ಧಪಡಿಸಿ ಸವಿದು ಆಚರಿಸಿದರೆ, ಎಳ್ಳ ಅಮಾವಾಸ್ಯೆ ದಿನದಂದು ಮಾತ್ರ ಹೊಲದಲ್ಲಿ ಆಚರಿಸುವುದು ವಿಶೇಷ. ಎಳ್ಳ ಅಮವಾಸ್ಯೆ ಹಬ್ಬ ಗ್ರಾಮೀಣ ಭಾಗದ ಸೊಗಡನ್ನು ಇಂದಿಗೂ ಜೀವಂತವಾಗಿಡುತ್ತಿದೆ.
ಭೂತಾಯಿ ಪೂಜಿಸಿ ಚರಗಾ ಚೆಲ್ಲಿದರು: ಮನೆಯಲ್ಲಿ ತಯಾರಿಸಿದ ಅಡುಗೆಯನ್ನು ಬೆಳಗ್ಗೆ ಬುಟ್ಟಿಯಲ್ಲಿ ತುಂಬಿಕೊಂಡು ರೈತರು ಹೊಲಗಳಿಗೆ ಬಂದು, ಅಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸುವ ಗುಡಿಸಿಲಿಗೆ ಮತ್ತು ಪಾಂಡವರಿಗೆ ಪೂಜೆ ಸಲ್ಲಿಸಿದರು. ನಂತರ ಜೋಳದ ಹೊಲದಲ್ಲಿ ಸಮೃದ್ಧವಾಗಿ ಬೆಳೆದ ಪೈರುಗಳ ಮಧ್ಯೆ ನಿಂತು ಚರಗಾ ಚೆಲ್ಲುವ ಮೂಲಕ ಭೂತಾಯಿಗೆ ನಮಿಸುತ್ತ ಒಳ್ಳೆಯ ಬೆಳೆ ಕೊಡಮ್ಮಾ ಎಂದು ಕಾಯಕ ಜೀವಿಗಳು ಪ್ರಾರ್ಥಿಸಿದರು.
ಇತರ ಹಬ್ಬಗಳಿಗಿಂತ ಎಳ್ಳ ಅಮಾವಾಸ್ಯೆ ವಿಶೇಷವಾಗಿರುವಂತೆ ಮಾಡುವ ಭಕ್ಷ್ಯ ಭೋಜನಗಳಲ್ಲೂ ಸಹ ಭಿನ್ನ. ಈ ಹಬ್ಬಕ್ಕಾಗಿ ವಿವಿಧ ಕಾಳು ಮತ್ತು ತರಕಾರಿಗಳಿಂದ ತಯಾರಿಸಿದ ಭಜ್ಜಿ ವಿಶೇಷ. ಜತೆಗೆ ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಬಗೆ ಬಗೆಯ ಅನ್ನ, ಅಂಬಲಿ ಮತ್ತು ಹುಗ್ಗಿ ಸೇರಿದಂತೆ ವಿವಿಧ ಭಕ್ಷ್ಯ ಅಲ್ಲಿರುತ್ತದೆ. ಬಂಧು- ಬಾಂಧವರು ಹಸಿರು ಪರಿಸರದ ಮಧ್ಯ ಕುಳಿತು ಊಟ ಸವಿದರು.
ಜೋಕಾಲಿ, ಪತಂಗ ಹಾರಾಟ: ಎಳ್ಳ ಅಮಾವಾಸ್ಯೆ ಹಬ್ಬ ಕೇವಲ ವಿಭಿನ್ನ ಊಟ ಮಾಡಲು ಮಾತ್ರ ಸೀಮಿತವಲ್ಲ. ಹೊಲದಲ್ಲಿ ಬೃಹತ್ ಮರಗಳಿಗೆ ಜೋಕಾಲಿ ಹಾಕಿ ಆಡುವುದು ಮತ್ತು ಕೆಲವೆಡೆ ಪತಂಗ ಹಾರಿಸುವುದು ಈ ಹಬ್ಬದ ಮತ್ತೂಂದು ವಿಶೇಷ. ಮಕ್ಕಳು ಸೇರಿದಂತೆ ಮಹಿಳೆಯರು ಮತ್ತು ಹಿರಿಯರು ಜೋಕಾಲಿ ಆಡುವ ಮೂಲಕ ಸಂತಸ ಪಟ್ಟರು.
ಉದ್ಯಾನವನಗಳಲ್ಲಿ ಜನಸ್ತೋಮ
ಇಂದಿನ ಯಾಂತ್ರಿಕಮಯ ಜೀವನದಲ್ಲಿ ಒತ್ತಡಗಳ ಮಧ್ಯೆ ಕಾಲ ಕಳೆಯುವ ನಗರ ವಾಸಿಗರು ಎಳ್ಳ ಅಮಾವಾಸ್ಯೆ ಹಬ್ಬದಂದು ತಮ್ಮ ತಮ್ಮ ಊರುಗಳಿಗೆ ಅಥವಾ ಸಂಬಂ ಧಿಕರ ಜಮೀನುಗಳಿಗೆ ತೆರಳುತ್ತಾರೆ. ಇನ್ನೂ ಕೆಲವರು ನಗರದ ಪ್ರಸಿದ್ಧ ದೇವಸ್ಥಾನ ಮತ್ತು ಉದ್ಯಾನವನ, ವಿಹಾರಧಾಮಕ್ಕೆ ಹೋಗಿ ಊಟ ಮಾಡಿ ಹಬ್ಬ ಆಚರಿಸಿದರು. ಇಂಥ ಹಬ್ಬಗಳು ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
ಮಂಗಳೂರಿಗೆ ವಾಟರ್ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.