2.23 ಗಂಟೆಯಲ್ಲಿ 20 ಕಿಮೀ ನಡೆದ ಅರ್ಪಿತಾ
ಬೆಂಗಳೂರು ರಾಜೀವಗಾಂಧಿ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹರ್ಷಶ್ರೀಗೆ ಎರಡನೇ ಸ್ಥಾನ
Team Udayavani, Oct 25, 2019, 3:49 PM IST
ಬೀದರ: ನಗರದ ಜಿಎನ್‌ಡಿ ಕಾಲೇಜು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂತರ್ ಕಾಲೇಜು ಅಥ್ಲೆಟಿಕ್ ಮೀಟ್‌ನಲ್ಲಿ ಇದೇ ಮೊದಲ ಬಾರಿ ನಡೆದ ಮಹಿಳೆಯರ 20 ಕಿಮೀ ನಡಿಗೆ ಸ್ಪರ್ಧೆಯಲ್ಲಿ ಮೂಡಬಿದ್ರೆ ಆಳ್ವಾ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನ ಅರ್ಪಿತಾ ಎಚ್.ಎಸ್. ಪ್ರಥಮ ಸ್ಥಾನ ಪಡೆದಿದ್ದಾರೆ.
ಅರ್ಪಿತಾ ಅವರು 2 ಗಂಟೆ 23 ನಿಮಿಷ 19.94 ಸೆಕೆಂಡ್‌ನಲ್ಲಿ ಈ ಅಂತರ ಕ್ರಮಿಸಿದರು. (2 ಗಂಟೆ 46 ನಿಮಿಷ, 23.66 ಸೆಕೆಂಡ್) ಪಡೆದರು. ಬೆಂಗಳೂರಿನ ಈಸ್ಟ್ ವೆಸ್ಟ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನ ಶೀತಲಗೌಡ ಮೂರನೇ ಸ್ಥಾನ ಪಡೆದರು.
20 ಕಿಮೀ ಪುರುಷರ ವಿಭಾಗದ ನಡಿಗೆಯಲ್ಲಿ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ನಚಿಕೇತ ಎಂ. ಮೊದಲ ಸ್ಥಾನ ಪಡೆದರು. 1 ಗಂಟೆ 51 ನಿಮಿಷ 52.02 ಸೆಕೆಂಡ್‌ಗಳಲ್ಲಿ ಈ ಅಂತರ ಕ್ರಮಿಸಿದರು. ಮೂಡಬಿದ್ರೆ ಆಳ್ವಾ ಇನ್ಟ್ಟಿ ಟ್ಯೂಟ್ ಆಫ್ ಇಂಜಿನಿಯರಿಂಗ್‌ನ ಮೌನೇಶ ದ್ವಿತೀಯ ಮತ್ತು ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಲಕ್ಷ್ಮೀಶ ಸಿಎಸ್ ತೃತೀಯ ಸ್ಥಾನ ಪಡೆದರು.
ಪುರುಷರ ವಿಭಾಗದ ಡಿಸ್ಕಸ್ ಥ್ರೋನಲ್ಲಿ ಮೂಡಬಿದ್ರೆ ಆಳ್ವಾ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನ ಧೀರಜ್ (37.02 ಮೀಟರ್) ಪ್ರಥಮ, ಬೆಂಗಳೂರಿನ ಆಚಾರ್ಯ ಇನ್ಟ್ ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮಣಿಕಂಠ ಪಿ.ಎಂ. (34.85) ದ್ವಿತೀಯ ಮತ್ತು ಮೂಡಬಿದ್ರೆ ಆಳ್ವಾ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನ ರತ್ನಾಕರ
ಮೂರನೇ ಸ್ಥಾನ ಪಡೆದರು (34.03 ಮೀ). ಮಹಿಳೆಯರ ಉದ್ದ ಜಿಗಿತದಲ್ಲಿ ಮೈಸೂರು ನ್ಯಾಶನಲ್ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನ ಪ್ರಣಿತಾ ಪ್ರದೀಪ (5.03 ಮೀಟರ್) ಪ್ರಥಮ, ಮಂಗಳೂರಿನ ಸಹ್ಯಾದ್ರಿ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅನ್ವಿತಾಶೆಟ್ಟಿ ದ್ವಿತೀಯ (4.60 ಮೀಟರ್) ಮತ್ತು ತುಮಕೂರಿನ ಸಿದ್ದಗಂಗಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ
ತನುಶ್ರೀ ಎ.ಜಿ. ಮೂರನೇ ಸ್ಥಾನ (4.08 ಮೀ.) ಪಡೆದರು.
ಪುರುಷರ 400 ಮೀ. ಓಟದಲ್ಲಿ ಕೋಲಾರದ ಡಾ|
ಟಿ. ತಿಮ್ಮಯ್ಯ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ಡಿ.ದಿನೇಶ ಬಾಬು ಪ್ರಥಮ (51.34 ಸೆಕೆಂಡ್), ಮಂಗಳೂರಿನ ಸಹ್ಯಾದ್ರಿ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೋಹಿತ್ ಎಂ. (53.70 ಸೆಕೆಂಡ್) ದ್ವಿತೀಯ ಮತ್ತು ಮಂಗಳೂರಿನ ಶ್ರೀನಿವಾಸ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ಚೇತನ್ ಆರ್
(54.24 ಸೆ) ತೃತೀಯ ಸ್ಥಾನ ಪಡೆದರು.
ಮಹಿಳೆಯರ 1500 ಮೀಟರ್ ಓಟದಲ್ಲಿ ಧಾರವಾಡದ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನ ಶ್ರೀನಿಧಿ ಪ್ರಥಮ, ಬೆಂಗಳೂರಿನ ದಯಾನಂದ ಸಾಗರ ಅಕಾಡೆಮಿ ಆಫ್ ಟೆಕ್ನಾಲಜಿಯ ಸೌಭಾಗ್ಯಶ್ರೀ ದ್ವಿತೀಯ ಮತ್ತು ಕಾರ್ಕಳ ಎನ್ ಎಂಎಎಂ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ತೃಷಾ ಡಿಸೋಜಾ ತೃತೀಯ ಸ್ಥಾನಪಡೆದರು.
ಮಹಿಳೆಯರ 100 ಮೀಟರ್ ಹರ್ಡಲ್ಸ್ ನಲ್ಲಿ ಬೆಂಗಳೂರಿನ ಸರಕಾರಿ ಎಸ್‌ಕೆಎಸ್‌ಜೆಟಿಐ ನ ಮೇಧಾ ಕಾಮತ (17.72 ಸೆಕೆಂಡ್) ಪ್ರಥಮ, ಮಂಗಳೂರು ಸಹ್ಯಾದ್ರಿ ಕಾಲೇಜಿನ ಅನ್ವಿತಾ ಶೆಟ್ಟಿ (18.71) ದ್ವಿತೀಯ ಮತ್ತು ಮಂಗಳೂರು ಕೆನರಾ ಇಂಜಿನಿಯರಿಂಗ್ ಕಾಲೇಜಿನ ಲಹರಿ ಕೆ. (21.11
ಸೆ.) ಮೂರನೇ ಸ್ಥಾನ ಪಡೆದರು.
ಡಿಸ್ಕಸ್ ಥ್ರೋ (ಮಹಿಳಾ) ನಲ್ಲಿ ತುಮಕೂರು ಸಿದ್ದಗಂಗಾ ಕಾಲೇಜಿನ ನಿವೇದಿಲಾ ಸಾವಂತ ಪ್ರಥಮ (34.87 ಮೀಟರ್) ಸ್ಥಾನ ಪಡೆದರು. ಮುಡುಬಿದ್ರೆ ಆಳ್ವಾ ಕಾಲೇಜಿನ ಐಶ್ವರ್ಯ (34.20 ಮೀಟರ್) ದ್ವಿತೀಯ, ಸಹ್ಯಾದ್ರಿ ಕಾಲೇಜಿನ ಸುಷ್ಮಿತಾ (23.81) ತೃತೀಯ ಸ್ಥಾನ ಪಡೆದರು. ಮಹಿಳೆಯರ 400 ಮೀಟರ್ ಓಟದಲ್ಲಿ ಬೆಂಗಳೂರಿನ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ವೆನಿಸ್ಸಾ ಪ್ರಥಮ, ಮಂಗಳೂರು ಸಹ್ಯಾದ್ರಿ ಕಾಲೇಜಿನ ದೇವಿಕಾ ದ್ವಿತೀಯ, ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಮಿಲಿಟ್ಟಾ ಸ್ನೇಹಾ ತೃತೀಯ ಸ್ಥಾನ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.