ಮಳೆಯಿಲ್ಲದೇ ಕಾರಂಜಾ ಖಾಲಿಖಾಲಿ
ಕುಡಿವ ನೀರಿಗೆ ಜನರು ತತ್ತರಿಸುವ ಸ್ಥಿತಿ•ಒಂದು ವಾರದಲ್ಲಿ ಮಳೆ ಸುರಿಯದಿದ್ದರೆ ಒಣಗಲಿವೆ ಬೆಳೆಗಳು
Team Udayavani, Aug 30, 2019, 10:42 AM IST
ಸಾಂದರ್ಭಿಕ ಚಿತ್ರ
ದುರ್ಯೋಧನ ಹೂಗಾರ
ಬೀದರ: ಬೀದರ, ಹುಮನಾಬಾದ, ಚಿಟಗುಪ್ಪ, ಹಳ್ಳಿಖೇಡ(ಬಿ), ಭಾಲ್ಕಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕುಡಿವ ನೀರು ಪೂರೈಸುತ್ತಿರುವ ಕಾರಂಜಾ ಜಲಾಶಯದಲ್ಲಿ ನೀರಿನ ಒಳ ಹರಿವು ಇಲ್ಲದೆ ಬರಡಾಗಿದೆ.
ಸದ್ಯ ಜಿಲ್ಲೆಯಲ್ಲಿ ಶೇ.63 ಮಳೆ ಸುರಿದರೂ ಕಾರಂಜಾ ಜಲಾಶಯಕ್ಕೆ 0.143 ಟಿಎಂಸಿ ನೀರು ಮಾತ್ರ ಒಳಹರಿವು ಬಂದಿದೆ. ಒಟ್ಟಾರೆ 1.262 ಟಿಎಂಸಿ ನೀರು ಸಂಗ್ರಹ ಇದೆ. ಆದರೆ, 0.375 ಟಿಎಂಸಿ ನೀರು ಬಳಕೆಗೆ ಯೋಗ್ಯವಾಗಿಲ್ಲ. ಸದ್ಯ 0.887 ಟಿಎಂಸಿ ನೀರು ಮಾತ್ರ ಲಭ್ಯವಿದ್ದು, ಮುಂದಿನ ಚಳಿಗಾಲದಲ್ಲಿ ಭೀಕರ ಬರಗಾಲ ಸ್ಥಿತಿ ನಿರ್ಮಾಣಗೊಂಡು ಕುಡಿಯುವ ನೀರಿಗೆ ಜನರು ತತ್ತರಿಸುವ ಸ್ಥಿತಿ ಬಂದೊದಗಲಿದೆ. ಇನ್ನೂ ಒಂದು ತಿಂಗಳ ಕಾಲ ಮಳೆಗಾಲ ಇದ್ದು, ಉತ್ತಮ ಮಳೆ ಸುರಿದರೆ ಮಾತ್ರ ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಪ್ಪುತ್ತದೆ.
ಬೀದರ, ಭಾಲ್ಕಿ, ಹುಮನಾಬಾದ, ಚಿಟಗುಪ್ಪ, ಹಳ್ಳಿಖೇಡ, ಔರಾದ ಸೇರಿದಂತೆ ವಿವಿಧೆಡೆಗಳಲ್ಲಿ ನೀರಿನ ಆಭಾವ ಹೆಚ್ಚಾಗುತ್ತಿದ್ದು, ಆಯಾ ಭಾಗದಲ್ಲಿನ ತೆರೆದ ಬಾವಿಗಳು ಹಾಗೂ ಕೊಳವೆ ಬಾವಿಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಈ ವರ್ಷ ಸರಾಸರಿ 572 ಮಿ.ಮೀ. ಮಳೆಯ ಪೈಕಿ 362 ಮಿ.ಮೀ ಮಳೆಯಾಗಿದೆ. ಸದ್ಯಕ್ಕೆ ಶೇ. 37 ಮಳೆ ಕೊರತೆ ಜಿಲ್ಲೆಗೆ ಕಾಡುತ್ತಿದೆ. ಶೇ.63 ಮಳೆಯಾಗಿದ್ದರೂ ಕೂಡ ಅಂತರ್ಜಲದಲ್ಲಿ ನೀರಿಲ್ಲ.
ಮುಂದಿನ ಒಂದು ವಾರದಲ್ಲಿ ಮಳೆ ಸುರಿಯದಿದ್ದರೆ ಬೆಳೆಗಳು ಒಣಗುವ ಹಂತ ಶುರುವಾಗುತ್ತದೆ. ಬೆಳೆಗಳಲ್ಲಿ ಕೀಟಬಾಧೆ ಕಂಡು ಬರುತ್ತಿದ್ದು, ರೈತರು ಕಿಟನಾಶಕಗಳು ಬಳಸುತ್ತಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ 170 ಮಿ.ಮೀ ಮಳೆ ಆಗಬೇಕಿದ್ದು, ಸೂಕ್ತ ಮಳೆ ಆದರೆ ಮಾತ್ರ ರೈತರ ಬೆಳೆಗಳು ಉತ್ತಮವಾಗಿ ಬೆಳೆಯುತ್ತವೆ ಎನ್ನುತ್ತಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಿ.ವಿದ್ಯಾನಂದ ಹೇಳುತ್ತಾರೆ.
ಮಳೆಗಾಲ ಮುಗಿಯುತ್ತ ಬಂದರೂ ಸೂಕ್ತ ಪ್ರಮಾಣದಲ್ಲಿ ಮಳೆ ಸುರಿಯದ ಕಾರಣ ರೈತರು ಕೂಡ ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿನ ಕೊಳವೆಬಾವಿಗಳು ಬೋರಲು ಬಿದ್ದಿವೆ.ಸದ್ಯದ ಸ್ಥಿತಿಯಲ್ಲಿ ಬೆಳೆಗಳು ಉತ್ತಮವಾಗಿದ್ದು, ಮಳೆ ಕೊರತೆ ಮುಂದುವರಿದರೆ ಬೆಳೆಗಳ ಸ್ಥಿತಿಕೂಡ ಹಾಳಾಗುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.
ಜಿಲ್ಲೆಯಲ್ಲಿ ಈವರೆಗೆ ಶೆ. 37 ಮಳೆ ಕೊರತೆ ಇದೆ. ಜಿಲ್ಲೆಯ ವಿವಿಧೆಡೆ ಹೆಸರು ಬೆಳೆಗಳ ಕಟಾವು ನಡೆಯುತ್ತಿದೆ. ಅಲ್ಲದೆ, ರೈತರಿಂದ ಬೆಂಬಲ ಬೆಲೆಯಲ್ಲಿ ಹೆಸರು ಖರೀದಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕನಿಷ್ಠ 7,050 ರೂ. ಬೆಲೆ ನಿಗದಿ ಮಾಡುವಂತೆ ಹಾಗೂ ಜಿಲ್ಲೆಯಲ್ಲಿ 30 ಖರೀದಿ ಕೇಂದ್ರಗಳನ್ನು ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ.
•ಸಿ.ವಿದ್ಯಾನಂದ,
ಕೃಷಿ ಇಲಾಖೆ ಜಂಟಿ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.