ಖೂಬಾ ಮರು ಆಯ್ಕೆ: ಕಾರ್ಯಕರ್ತರ ಸಂಭ್ರಮ
Team Udayavani, May 24, 2019, 1:20 PM IST
ಬೀದರ: ಭಾರಿ ಅಂತರದಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರನ್ನು ಪಕ್ಷದ ಕಾರ್ಯಕರ್ತರು ಹೆಗಲೆ ಮೇಲೆ ಎತ್ತಿಕೊಂಡು ಕುಣಿದು ಕುಪ್ಪಳಿಸಿದರು. ಅಲ್ಲದೆ, ಸಿಹಿ ತಿನ್ನಿಸಿ, ಗುಲಾಲ್ ಹಾರಿಸಿ, ಪಟ್ಟಾಕಿ ಸಿಡಿಸಿ ಸಂಭ್ರಮಿಸಿದರು.
ಮತ ಎಣಿಕೆಯಲ್ಲಿ ಎಲ್ಲ ಸುತ್ತುಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿರುವುದನ್ನು ಗಮನಿಸಿದ ಮುಖಂಡರಿಗೆ ಗೆಲವಿನ ಸೂಚನೆ ದೊರೆತ್ತಿತ್ತು. ಅಲ್ಲದೆ, ಮತ ಕೇಂದ್ರ ಹೊರಗಡೆ ನಿಂತ ಕಾರ್ಯಕರ್ತರು ಪಕ್ಷದ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು.
ಬೆಳಗ್ಗೆ 8:00ಕ್ಕೆ ಮತ ಎಣಿಕೆ ಆರಂಭವಾಗಿತ್ತು. ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷದ ಕಾರ್ಯಕರ್ತರು, ಚುನಾವಣಾ ಎಜೆಂಟ್ರು ಮತ ಎಣಿಕೆ ಕೇಂದ್ರದ ಕಡೆ ಆಗಮಿಸಿದ್ದರು. ಆದರೆ, ಮಧ್ಯಾಹ್ನದ ವರೆಗೆ ಮತ ಕೇಂದದ ಕಡೆದ ಯಾವ ಪಕ್ಷದ ಕಾರ್ಯಕರ್ತರು ಅಥವಾ ಅಭಿಮಾನಗಳು ಕಂಡು ಬರಲಿಲ್ಲ. ಬಹುತೇಕ ಜನರು ತಮ್ಮ ಮನೆಗಳಲ್ಲಿ ಟಿವಿ ಹಾಗೂ ಮೊಬೈಲ್ ಮೂಲಕ ಫಲಿತಾಂಶ ನೊಡುತ್ತಿರುವುದು ಸಾಮಾನ್ಯವಾಗಿತ್ತು.
ಲೋಕಸಭೆ ಚುನಾವಣೆ ಒಟ್ಟು 20 ಸುತ್ತಿನ ಮತ ಎಣಿಕೆ ಪೈಕಿ 18ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ, ಲಕ್ಷ ಮತದಾನ ಅಂತರದಿಂದ ಮುನ್ನಡೆ ಖಚಿತವಾಗುತ್ತಿದ್ದಂತೆ, ನಗರ ಹಾಗೂ ಗ್ರಾಮೀಣ ಪ್ರದೇಶದ ಕಾರ್ಯಕರ್ತರು ಮತ್ತು ಬಿಜೆಪಿ ಮುಖಂಡರು ಪಕ್ಷದ ಧ್ವಜ ಹಿಡಿದುಕೊಂಡು ಆಗಮಿಸಿ ಬಣ್ಣ ಹಚ್ಚಿ, ಪಟಾಕಿ ಸಿಡಿಸಿ, ಸಂಭ್ರಮಿಸಿದರು.
ಸಂಜೆ ಹೊತ್ತಿಗೆ ಸಹಸ್ರಾರರು ಸಂಖ್ಯೆಯಲ್ಲಿ ಮಹಾವಿದ್ಯಾಲಯದ ಎದುರು ಜಮಾಯಿಸಿದ ಕಾರ್ಯಕರ್ತರು ಚೌಕಿದಾರ ಚೋರ್ ನಹಿ ಶೇರ್ ಹೈ, ಹರ್ ಹರ್ ಮೋದಿ ಘರ್ ಘರ್ ಮೋದಿ, ಮೋದಿ ಅವರಿಗೆ ಜೈವಾಗಲಿ ಎಂಬ ಘೋಷಣೆಗಳು ಕೇಳಿ ಬಂದವು. ಗೆಲುವು ಖಚಿತವಾಗುತ್ತಿದ್ದಂತೆ ಹೋರಗಡೆ ಬರುತ್ತಿದ್ದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ಕಾರ್ಯಕರ್ತರು ಮತ್ತು ಮುಖಂಡರು ಅಪ್ಪಿಕೊಳ್ಳುವ ಮೂಲಕ ಶುಭಕೋರಿದರು. ನಂತರ ತೆರೆದ ವಾಹನದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ಅನೇಕ ಮುಖಂಡರು ಹಾಗೂ ಅಭಿಮಾನಿಗಳು ಭಾಗವಹಿಸಿದರು.
ಬಿಜೆಪಿ ಗೆಲುವು ಸಾಧಿಸಲಿದೆ ಎಂದು ತಿಳಿದ ಪಕ್ಷದ ಮುಖಂಡರು ನಗರದ ಬಸವೇಶ್ವರ ವೃತ್, ಡಾ| ಬಿ.ಆರ್.ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಭಗತ್ ಸಿಂಗ್ ವೃತ್ತ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಗೆಲವಿನ ಸಂದೇಶ ಸಾರಿದರು.
ವಿವಿಧಡೆ ವಿಜಯೋತ್ಸವ: ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದಾರೆ ಎಂಬ ಸುದ್ದಿ ಹೊರಬರುತ್ತಿದ್ದಂತೆ ಜಿಲ್ಲಾದ್ಯಂತ ವಿಜಯೋತ್ಸವ ಆಚರಿಸಲಾಗಿದೆ. ಹುಮನಾಬಾದ, ಭಾಲ್ಕಿ, ಬಸವಕಲ್ಯಾಣ, ಔರಾದ, ಬೀದರ ಸೇರಿದಂತೆ ವಿವಿಧ ಗ್ರಾಮಗಳಲಿ ಕೂಡ ವಿಜಯೋತ್ಸ ಆಚರಿಸಲಾಗಿದೆ.
ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯದ ಎದರುಗಡೆ ಇರುವ ಅಂಗಡಿಗಳ ವ್ಯಾಪಾರ ವಹಿವಾಟು ಜೋರಾಗಿತ್ತು. ಫಲಿತಾಂಶ ಹಿನ್ನೆಲೆಯಲ್ಲಿ ನಗರಕ್ಕೆ ವಿವಿಧಡೆಯಿಂದ ಆಗಮಿಸಿದ್ದ ಕಾರ್ಯಕರ್ತರು ಮತ್ತು ವಿವಿಧ ಪಕ್ಷಗಳ ಅಭಿಮಾನಿಗಳು ಫಲಿತಾಂಶ ಮುಗಿಯುವವರೆಗೂ ತಂಪು ಪಾನೀಯ, ಮಜ್ಜಿಗೆ, ತೆಂಗಿನ ನೀರು, ಹಾಗೂ ಹೋಟೆಲ್ನಲ್ಲಿ ತಿಂಡಿ ತಿನ್ನುವ ಮೂಲಕ ದಿನ ಕಳೆದರು.
ಗಮನ ಸೆಳೆದ ಮಾಹಿತಿ ಬೋರ್ಡ್: ಲೋಕಸಭೆ ಚುಣಾವಣೆ ಬೂತ್ ಮಟ್ಟದ ಹಿಡಿದು ಮಾಹಿತಿ ನೀಡುವ ಇಲೆಕ್ಟ್ರಾನಿಕ್ ಬೋರ್ಡ್ ಪ್ರಥಮ ಬಾರಿಗೆ ಅಳವಡಿಸುರುವುದು ಎಲ್ಲರ ಗಮನ ಸೆಳೆಯುವಂತೆ ಮಾಡಿತು. ಮತ ಎಣಿಕೆ ಕೇಂದ್ರ ಹೊರಗಡೆ ಅಳವಡಿಸಿದ್ದ ಸ್ಕ್ರೀನ್ ಬೈಕ್ ಸವಾರರು ಹಾಗೂ ಕಾರಿನಲ್ಲಿ ಸಂಚರಿಸುವ ಜನರು ತಮ್ಮ ವಾಹನ ನಿಲ್ಲಿಸಿ ಕುತೂಹಲದಿಂದ ಫಲಿತಾಂಶ ನೋಡಿ ಮುಂದೆ ಸಾಗುತ್ತಿರುವುದು ಕಂಡು ಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.