1,948 ಮತದಾರರಿಂದ ನೋಟಾ ಚಲಾವಣೆ
ಅಭ್ಯರ್ಥಿಗಳು ಸೂಕ್ತರಲ್ಲ ಎನ್ನುವ ತೀರ್ಮಾನ •19 ಅಭ್ಯರ್ಥಿಗಳು 45,900 ಮತ ಪಡೆದಿರುವುದು ವಿಶೇಷ
Team Udayavani, May 26, 2019, 12:24 PM IST
ಬೀದರ: ಲೋಕಸಭೆಯ ಒಟ್ಟು 8 ವಿಧಾನಸಭೆ ಕ್ಷೇತ್ರಗಳಲ್ಲಿ ಈ ಬಾರಿ ಒಟ್ಟು 1,948 ಮತದಾರರು ನೋಟಾ ಮತ ಚಲಾಯಿಸುವ ಮೂಲಕ ಸ್ಪರ್ಧೆ ನಡೆಸಿದ ಅಭ್ಯರ್ಥಿಗಳು ಸೂಕ್ತ ಅಲ್ಲ ಎಂದು ತೀರ್ಮಾನಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್, ಬಿಜೆಪಿ ಹಾಗೂ ಬಿಎಸ್‌ಪಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಇನ್ನುಳಿದ 19 ಅಭ್ಯರ್ಥಿಗಳು ಕೂಡ 45,900ಕ್ಕೂ ಅಧಿಕ ಮತಗಳನ್ನು ಪಡೆದಿರುವುದು ವಿಶೇಷವಾಗಿದೆ.
ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಅಸ್ತಿತ್ವಕ್ಕೆ ತರಲಾದ ನೋಟಾ ಬಳಕೆಯನ್ನು ಮತದಾರ ತನ್ನಿಷ್ಟಕ್ಕೆ ತಕ್ಕಂತೆ ಬಳಸುತ್ತಿರುವುದು ಕಂಡುಬರುತ್ತಿದೆ. 2014ರ ಚುನಾವಣೆಯಲ್ಲಿ ಒಟ್ಟು 2,817 ನೋಟಾ ಮತಗಳು ಚಲಾವಣೆಗೊಂಡಿದ್ದವು. ಈ ಬಾರಿ 1,948 ಮತಗಳು ಚಲಾವಣೆಗೊಂಡಿದ್ದು, ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ 869 ಮತಗಳು ಕಡಿಮೆಯಾಗಿವೆ. ಬೀದರ್ ಲೋಕಸಭೆಯ ಚಿಂಚೋಳಿ ಕ್ಷೇತ್ರದಲ್ಲಿ 255 ನೋಟಾ ಮತಗಳು ಚಲಾವಣೆ ಆಗಿವೆ. ಆಳಂದ ಕ್ಷೇತ್ರದಲ್ಲಿ 271, ಬಸವಕಲ್ಯಾಣ ಕ್ಷೇತ್ರದಲ್ಲಿ 192, ಹುಮನಾಬಾದ 287, ಬೀದರ ದಕ್ಷಿಣ 204, ಬೀದರ 276, ಭಾಲ್ಕಿ ಕ್ಷೇತ್ರದಲ್ಲಿ 231, ಔರಾದ ಕ್ಷೇತ್ರದಲ್ಲಿ 230 ಮತದಾರರು ಹಕ್ಕು ಚಲಾಯಿಸಿ ನನಗೆ ಯಾರೂ ಬೇಕಿಲ್ಲ. ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳು ಇಷ್ಟವಿಲ್ಲ ಎಂದೆನ್ನಿಸಿ ನೋಟಾ ಬಳಸಿದ್ದಾರೆ.
ಯಾರಿಗೆ ಎಷ್ಟುಮತ?: ಲೋಕಸಭೆ ಚುನಾವಣೆಯಲ್ಲಿ ಒಟ್ಟು 22 ಅಭ್ಯರ್ಥಿಗಳು ಸ್ಪರ್ಧೆ ನಡೆಸಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಬಹುಜನ ಸಮಾಜ ಪಾರ್ಟಿ ಹೊತರುಪಡಿಸಿ ಇನ್ನುಳಿದ 19 ಅಭ್ಯರ್ಥಿಳ ಪೈಕಿ ಪಕ್ಷೇತರ ಅಭ್ಯರ್ಥಿ ರವಿಕಾಂತ ಕೆ. ಹೂಗಾರ ಅತಿ ಹೆಚ್ಚು 5,748 ಮತಗಳನ್ನು ಪಡೆದಿದ್ದಾರೆ. ಪಕ್ಷೇತ್ರ ಅಭ್ಯರ್ಥಿ ಶಿವರಾಜ ತಿಮ್ಮಣ್ಣಾ ಬೊಕ್ಕೆ 4,980, ಮೌಲಾಸಾಬ ತಡಕಲ್ 4,634 ಮತಗಳು, ಅಖೀಲ ಭಾರತೀಯ ಮುಸ್ಲಿಂ ಲೀಗ್(ಸೆಕ್ಯೂಲರ್)ನ ಅಬ್ದುಸ್ ಸತ್ತಾರ ಮುಜಾಹಿದ್ 4,624 ಮತಗಳು, ಅಂಬೇಡ್ಕರೈಟ್ ಪಾರ್ಟಿ ಆಫ್ ಇಂಡಿಯಾದ ದಯಾನಂದ ಗೋಡಬೊಲೆ 3,635 ಮತಗಳು, ಶರದ ಗಂದಗೆ 3,440 ಮತಗಳು, ಭಾರತೀಯ ಜನಕ್ರಾಂತಿ ದಲ(ಡೆಮೋಕ್ರೆಟಿಕ್)ನ ಸಂತೋಷ ರಾಠೊಡ್ 3,344 ಮತಗಳು, ಉತ್ತಮ ಪ್ರಜಾಕೀಯ ಪಾರ್ಟಿಯ ಅಂಬರೀಶ ಕೆಂಚಾ 1,853, ಭಾರತ ಪ್ರಭಾತ ಪಾರ್ಟಿಯ ಮೊಹ್ಮದ್ ಅಬ್ದುಲ್ ವಕೀಲ್ 970, ಪ್ರಜಾ ಸತ್ತಾ ಪಾರ್ಟಿಯ ಮೊಹ್ಮದ ಯೂಸುಫ್ 742, ಬಹುಜನ ಮಹಾ ಪಾರ್ಟಿಯ ಎಂ.ಡಿ.ಮಿರಾಜೊದ್ದಿನ್ 1,000, ನ್ಯಾಷನಲ್ ಡೆವಲಪ್‌ಮೆಂಟ್ ಪಾರ್ಟಿ(ಸೆಕ್ಯೂಲರ್) ಅಡ್ವಕೆಟ್ ಮೌಲವಿ ಜಮೀರುದ್ದಿನ್ 1,138, ಪೂರ್ವಾಂಚಲ್ ಜನತಾ ಪಾರ್ಟಿ(ಸೆಕ್ಯೂಲರ್)ಯ ರಾಜಕುಮಾರ 1,241, ಭಾರತೀಯ ಬಹುಜನ ಕ್ರಾಂತಿ ದಲ ಪಕ್ಷದ ರಾಜಮಬೀ ದಸ್ತಗೀರ, 1,208, ಕ್ರಾಂತಿಕಾರಿ ಜೈ ಹಿಂದ್ ಸೇನಾದ ಸುಗ್ರಿವ ಭರತ ಕಚವೆ 1,707, ಮೌಲಪ್ಪ ಎ.ಮಾಳಗೆ, 2,027, ಶ್ರೀಮಂತ ಅರ್ಜುನ ಯೆವಟೆ ಪಾಟೀಲ 1,322, ಮುಫ್ತಿ ಶೇಖ್ ಅಬ್ದುಲ್ ಗಫಾರ್ 1,259, ಸೈಬಣ್ಣ ಜಮಾದಾರ 1,051 ಮತಗಳನ್ನು ಪಡಿದಿದ್ದಾರೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಪಕ್ಷ ಶೇ.10.46ರಷ್ಟು ಕಡಿಮೆ ಮತಗಳನ್ನು ಪಡೆದಿದೆ. ಅಂಚೆ ಮತಗಳು ಸೇರಿದಂತೆ ಕಾಂಗ್ರೆಸ್ ಪಕ್ಷ 4,68,637, ಬಿಜೆಪಿ 5,85,471 ಹಾಗೂ ಬಿಎಸ್‌ಪಿ 15,188 ಮತಗಳನ್ನು ಪಡೆದುಕೊಂಡಿವೆ. ಕಾಂಗ್ರೆಸ್ ಪಕ್ಷ ಶೇ.41.95 ಮತಗಳನ್ನು ಪಡೆದರೆ, ಬಿಜೆಪಿ 52.41ರಷ್ಟು ಮತಗಳನ್ನು ಪಡೆದುಕೊಂಡಿದೆ. ಅಲ್ಲದೆ, ಬಿಎಸ್‌ಪಿ ಶೇ.1.36ರಷ್ಟು ಮತ ಪಡೆದಿದೆ. ಇನ್ನುಳಿದ 19 ಅಭ್ಯರ್ಥಿಗಳು ಶೇ.1ಕ್ಕೂ ಕಡಿಮೆ ಮತಗಳನ್ನು ಪಡೆದಿದ್ದಾರೆ.
•ದುರ್ಯೋಧನ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.