80 ವರ್ಷದವರಿಗೆ ಶೇ.20 ಹೆಚ್ಚುವರಿ ಪಿಂಚಣಿಗೆ ಆದೇಶ
ವಿವಿಧ ಸಮಸ್ಯೆಗಳನ್ನು ತೋಡಿಕೊಂಡ ಪಿಂಚಣಿದಾರರು
Team Udayavani, Aug 28, 2019, 5:13 PM IST
ಬೀದರ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ನಿವೃತ್ತ ಸರ್ಕಾರಿ ನೌಕರರ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಮಾತನಾಡಿದರು.
ಬೀದರ: 80 ವರ್ಷದ ಪಿಂಚಣಿದಾರರಿಗೆ ಶೇ.20ರಷ್ಟು ಹೆಚ್ಚುವರಿ ಪಿಂಚಣಿ ನೀಡಲು ಬ್ಯಾಂಕ್ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ನಿವೃತ್ತ ಸರ್ಕಾರಿ ನೌಕರರ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಳೇ ಸುತ್ತೋಲೆ ಪ್ರಕಾರ ಹುಟ್ಟಿದ ದಿನಾಂಕ, ಮತದಾರರ ಗುರುತಿನ ಚೀಟಿ ನೀಡಬೇಕು. ಒಂದೇ ಬಾರಿ ಎಲ್ಲಾ ದಾಖಲೆಗಳನ್ನು ಪಡೆದುಕೊಂಡು ವಯೋಮಿತಿ ಆಧಾರದ ಮೇಲೆ ಪ್ರತಿ ವರ್ಷ ನಿಗದಿಯಂತೆ ಪಿಂಚಣಿ ನೀಡಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಪಿಂಚಣಿದಾರ ಪ್ರಭುಲಿಂಗ ಸ್ವಾಮಿ ಮಾತನಾಡಿ, ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಪಿಂಚಣಿ ಪಡೆಯುತ್ತಿದ್ದು, ಲೈಫ್ ಸರ್ಟಿಫಿಕೇಟ್ ನವೆಂಬರ್‌ನಲ್ಲಿ ನೀಡಬೇಕಿತ್ತು. ನೆನಪಿನ ಶಕ್ತಿ ಕಡಿಮೆಯಾಗಿರುವ ಪ್ರಯುಕ್ತ ಈ ಪ್ರಮಾಣ ಪತ್ರವನ್ನು ನೀಡಿಲ್ಲ. ಅದಕ್ಕೆ ನನ್ನ ಪಿಂಚಣಿ ಸ್ಥಗಿತಗೊಂಡಿದೆ ಎಂದು ತಮ್ಮ ಸಮಸ್ಯೆ ಹೇಳಿಕೊಂಡರು.
ಈಗಾಗಲೇ ಪಿಂಚಣಿ ಪಡೆಯುತ್ತಿದ್ದೇನೆ. ಆದರೆ 2015ರ ಅಕ್ಟೋಬರ್ 9ರಿಂದ 2016ರ ಮೇ 24ರ ವರೆಗೆ ಕಡ್ಡಾಯ ನಿರೀಕ್ಷಣಾ ಅವಧಿ ಸಕ್ರಮಗೊಂಡಿಲ್ಲ ಎಂದು ಶಿವರಾಜ ಸ್ವಾಮಿ ತಿಳಿಸಿದರು.
ಪಂಢರಿನಾಥ ಪೊಲೀಸ್ ಪಾಟೀಲ್ ಮಾತನಾಡಿ, ಅಂಗವಿಕಲ ಭತ್ಯೆ ಪಿಂಚಣಿಯಲ್ಲಿ ಸೇರಿಸಿ ಮಂಜೂರು ಮಾಡಬೇಕು ಎಂದು ಕೋರಿದರು. ಶಿವಲಿಂಗಪ್ಪಾ ಬಿರಾದಾರ ಅವರು, ಪಿಪಿಒ ಆದೇಶದಲ್ಲಿ ಹುಟ್ಟಿದ ದಿನಾಂಕ, ನಿವೃತ್ತಿ ದಿನಾಂಕ ಮತ್ತು ಪಿಪಿಒ ಸಂಖ್ಯೆ ತಪ್ಪಾಗಿರುತ್ತದೆ. 1993ರ ಜುಲೈ 1ಕ್ಕೂ ಮುಂಚೆ ನಿವೃತ್ತಿ ಹೊಂದಿದ್ದು, 85 ವರ್ಷದ ಸೌಲಭ್ಯ ನೀಡಿರುವುದಿಲ್ಲ ಎಂಬ ಅಹವಾಲು ಸಲ್ಲಿಸಿದರು.
ಜಿಲ್ಲಾ ಖಜಾನೆ ಅಧಿಕಾರಿ ಅಶೋಕ ವಡಗಾವೆ ಮಾತನಾಡಿ, ಪಿಂಚಣಿ ಪುಸ್ತಕ ಕಳೆದು ಹೋಗಿದೆ ಕೊಡಿ ಎಂದು ಕೆಲವರು ಖಜಾನೆಗೆ ಬಂದು ಕೇಳುತ್ತಾರೆ. ಆದರೆ ಈ ಪುಸ್ತಕದ ಎರಡು ಪ್ರತಿಗಳು ಖಜಾನೆ ಮತ್ತು ಬ್ಯಾಂಕಿನಲ್ಲಿ ಮಾತ್ರ ಇರುತ್ತವೆ. ಆದ್ದರಿಂದ ತಾವೇ ಪಿಂಚಣಿದಾರರು ಎಂದು ದೃಢೀಕರಿಸಿ ಅದರ ನಕಲು ಪ್ರತಿಯನ್ನು ಒಳಗೊಂಡ ಪ್ರಸ್ತಾವನೆಯನ್ನು ಖಜಾನೆ ಇಲಾಖೆಗೆ ನೀಡಿದರೆ ಅದನ್ನು ಎಜಿ ಅವರಿಗೆ ಕಳುಹಿಸಿ ಮುಂದಿನ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಪಿಪಿಎಫ್ ಪಿಂಚಣಿ ಹೆಚ್ಚಿಸಬೇಕು. ತಾತ್ಕಾಲಿಕ ಪಿಂಚಣಿ ನೀಡಬೇಕು. ಪರಿಷ್ಕೃತ ಪಿಂಚಣಿ ಬಾಕಿ ಮಂಜೂರು ಮಾಡಬೇಕು. ಸ್ವಯಂ ಚಾಲಿತ ವೇತನ ಮಂಜೂರು ಮಾಡಬೇಕು. 6ನೇ ವೇತನ ಆಯೋಗದಲ್ಲಿ ಆದ ತಾರತಮ್ಯ ಸರಿಪಡಿಸಬೇಕು. ಪಿಂಚಣಿಯಲ್ಲಿ ಕಡಿತಗೊಳಿಸಿರುವುದು ಹೀಗೆ ನಾನಾ ರೀತಿಯ ಅಹವಾಲುಗಳು ಸಲ್ಲಿಕೆಯಾದವು.
ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ ಇಲಾಖೆಯ ಸಹಾಯಕ ನಿರ್ದೇಶಕರಾದ ಆನಂದ ಅಸನೂರಕರ್, ಲೀಡ್ ಬ್ಯಾಂಕ್ ಮ್ಯಾನೇಜರ್ ಬಿ.ಎಂ.ಕಮತಗಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಶಿವಕುಮಾರ ಸ್ವಾಮಿ, ನಿವೃತ್ತ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಎಸ್.ಬಿ. ಕುಚಬಾಳ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
Mangaluru: ಎರಡು ಸೈಬರ್ ವಂಚನೆ ಪ್ರಕರಣ: ಸೆನ್ ಪೊಲೀಸರಿಂದ ಇಬ್ಬರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.