ಆಧ್ಯಾತ್ಮ-ಸಾಹಿತ್ಯ ಸಮಾಜದ ಉಸಿರು
ಆಧ್ಯಾತ್ಮ ಅನುಭವಿಸಬೇಕು, ಸಾಹಿತ್ಯ ಆಸ್ವಾದಿಸಬೇಕು: ಡಾ| ಬಿರಾದಾರ "ಸಾಹಿತ್ಯೋತ್ಸವ' ಕಾರ್ಯಕ್ರಮ
Team Udayavani, Jan 6, 2020, 4:40 PM IST
ಬೀದರ: ಆಧ್ಯಾತ್ಮ ಸೂರ್ಯನಾಡಿಯಾದರೆ, ಸಾಹಿತ್ಯ ಚಂದ್ರನಾಡಿಯಂತೆ. ಆಧ್ಯಾತ್ಮ ಹಾಗೂ ಸಾಹಿತ್ಯ ಸಮಾಜದ ಉಸಿರು ಮತ್ತು ಪ್ರಾಣದಂತೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ| ಶೀಲಾ ಬಿರಾದಾರ ಹೇಳಿದರು.
ನಗರದ ಕಿತ್ತೂರು ಚೆನ್ನಮ್ಮ ವೃತ್ತದ ಮಹಾಲಕ್ಷ್ಮೀ ಸಭಾಂಗಣದಲ್ಲಿ ಕದಂಬ ಕನ್ನಡ
ಸಂಘದಿಂದ ಹಮ್ಮಿಕೊಂಡಿದ್ದ “ಸಾಹಿತ್ಯೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಧ್ಯಾತ್ಮವನ್ನು ಅನುಭವಿಸಬೇಕು, ಸಾಹಿತ್ಯವನ್ನು ಆಸ್ವಾದಿಸಬೇಕು. ಇವೆರಡರ ಸಮನ್ವದ ಶಿಕ್ಷಣ ಇಂದಿನ ಮಕ್ಕಳಿಗೆ ನೀಡಬೇಕಿದೆ ಎಂದು ಹೇಳಿದರು.
“ಅಲ್ಲಮಪ್ರಭು ದೇವರು-ಆಧ್ಯಾತ್ಮ’ ಕುರಿತು ವಿಶೇಷ ಉಪನ್ಯಾಸ ನೀಡಿದ ಕವಿಯಿತ್ರಿ ರೇಣುಕಾ ಎನ್.ಬಿ., ಅಲ್ಲಮ ಪ್ರಭುದೇವರ 1,294 ವಚನಗಳಲ್ಲಿ ವ್ಯಾವಧಿ ìನಿ, ಅಂತರವ ರ್ಧಿನಿ ಹಾಗೂ ಸಂವ ರ್ಧಿನಿ ಅಂದರೆ ಸಾಮಾನ್ಯ ಮನುಷ್ಯನಿಂದ, ಆತ್ಮ ಅವಲೋಕನ ಹಾಗೂ ಆತ್ಮ ವಿಕಾಸ ಮಾಡುವ ತತ್ವವನ್ನು ಕಾಣಬಹುದು ಎಂದು ನುಡಿದರು.
“ವರಕವಿ ಬೇಂದ್ರೆ ಬದುಕು-ಬರಹ’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ರೇಣುಕಾ ಮಹಾರುದ್ರಯ್ಯ ಮಳ್ಳಿ, ದ.ರಾ. ಬೇಂದ್ರೆ ಅವರು ತಮ್ಮ ಸಾಹಿತ್ಯದಲ್ಲಿ ಬದುಕಿನ ಚಿತ್ರಣವನ್ನು ಭಾವ-ರೂಪ-ರಸಗಳ ಮೂಲಕ ಕಟ್ಟಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಕದಂಬ ಕನ್ನಡ ಸಂಘದ ಅಧ್ಯಕ್ಷ ಡಾ| ವೀರಶೆಟ್ಟಿ ಮೈಲೂರಕರ ಮಾತನಾಡಿ, ಸಾಹಿತ್ಯದ ವೈವಿಧ್ಯತೆಯನ್ನು ಗುರುತಿಸುವುದೇ “ಸಾಹಿತ್ಯೋತ್ಸವ’ದ ಉದ್ದೇಶ ಎಂದರು. ಗೌರವಾಧ್ಯಕ್ಷ ಪ್ರೊ|ಸಿದ್ರಾಮಪ್ಪ ಮಾಸಿಮಾಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಗತ್ತಿನ ಇಂದಿನ ಆತಂಕಕಾರಿ ವಾತಾವರಣದಲ್ಲಿ ಸಾಹಿತ್ಯದ ಕಾರ್ಯಕ್ರಮಗಳು ನೆಮ್ಮದಿ ಮೂಡಿಸುತ್ತವೆ ಎಂದರು.
ಗಂಗಾಶೆಟ್ಟಿ ಪಾಟೀಲ ನಿರೂಪಿಸಿದರು. ಪ್ರೊ| ರಾಜಶೇಖರ ಮಂಗಲಗಿ ಸ್ವಾಗತಿಸಿದರು. ಶಿವನಾಥ ಸ್ವಾಮಿ ವಂದಿಸಿದರು. ಶ್ರೀಕಾಂತ ಬಿರಾದಾರ ವಚನ ಗಾಯನ ನಡೆಸಿಕೊಟ್ಟರು. ಬಸವ ಸ್ವರಚಿತ ಕವನ ವಾಚಿಸಿದರು. ಹಿರಿಯ ಸಾಹಿತಿ ಎಂ.ಜಿ.ಗಂಗನಪಳ್ಳಿ, ಬಸಯ್ಯ ಸ್ವಾಮಿ, ಕೆ.ಗುರುಮೂರ್ತಿ, ಸಿದ್ರಾಮಪ್ಪ ಸಪಾಟೆ, ಶಿವಕುಮಾರ ಕಟ್ಟೆ, ಓಂಪ್ರಕಾಶ ದಡ್ಡೆ, ಬಸವರಾಜ ಮೂಲಗೆ, ಸಿ.ಎನ್. ಪಾಟೀಲ, ಶ್ಯಾಮ ನೆಲವಾಡೆ, ಬಸವಂತರಾವ್ ಮಾಲಿಪಾಟೀಲ, ಸೂರ್ಯಕಾಂತ ಐನಾಪುರೆ, ಶೈಲಜಾ ಬೆಳಕೇರಿ, ಸಂಗಶೆಟ್ಟಿ ಗಾದಗೆ, ಅಶೋಕ ಮಾನಶೆಟ್ಟಿ, ಧನಶೆಟ್ಟಿ, ಭಮಶೆಟ್ಟಿ, ಶಾಂತಲಾ ಮೈಲೂರಕರ್, ಪ್ರಭು ಪಾಟೀಲ, ನೀಲಕಂಠ ಬಿರಾದರ, ಉಮಾಕಾಂತ ಮೀಸೆ, ಮಾಣಿಕ ನೇಳಗೆ, ಈಶ್ವರಯ್ಯ ಕೂಡಂಬಲ್, ನರೇಂದ್ರ, ಸ್ವರೂಪರಾಣಿ ನಾಗೂರೆ ಬುಕ್ಕನಗೌಡ ಪಾಟೀಲ ಇದ್ದರು. ಆರಂಭದಲ್ಲಿ ಇತ್ತಿಚಿಗೆ ಅಗಲಿದ ಶ್ರೀ ಪೇಜಾವರ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PAK Vs SA: ಸೆಂಚುರಿಯನ್ ಟೆಸ್ಟ್ ಪಾಕಿಸ್ಥಾನ 211ಕ್ಕೆ ಆಲೌಟ್
Test cricket: ಮ್ಯಾಚ್ ರೆಫರಿಯಾಗಿ ನೂರು ಟೆಸ್ಟ್ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್
Pro Kabaddi League: ಯುಪಿ ಯೋಧಾಸ್,ಪಾಟ್ನಾ ಪೈರೇಟ್ಸ್ ಸೆಮಿಫೈನಲಿಗೆ
IND Vs AUS ಬಾಕ್ಸಿಂಗ್ ಡೇ ಟೆಸ್ಟ್: ಆಸ್ಟ್ರೇಲಿಯ ರನ್ ಓಟಕ್ಕೆ ಬುಮ್ರಾ ಬ್ರೇಕ್
Padubidri: ಕಾರು ಢಿಕ್ಕಿ; ಪಾದಚಾರಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.