ಪತ್ರಕರ್ತರು ಪತ್ರಿಕಾ ಮೌಲ್ಯ ಉಳಿಸಿ-ಬೆಳೆಸಲಿ: ಮುನಾವರ್
'ಪ್ರಸ್ತುತ ಸಂದರ್ಭದಲ್ಲಿ ಪತ್ರಿಕೋದ್ಯಮದ ಜವಾಬ್ದಾರಿಗಳು' ಕುರಿತು ಕಾರ್ಯಾಗಾರ
Team Udayavani, Jul 24, 2019, 3:47 PM IST
ಬೀದರ: ಪತ್ರಕರ್ತರಾದವರು ಪತ್ರಿಕಾ ಮೌಲ್ಯಗಳನ್ನು ಉಳಿಸಿ ಬೆಳೆಸಬೇಕಿದೆ ಎಂದು ಕರ್ನಾಟಕ ಉರ್ದು ಅಕಾಡೆಮಿಯ ಅಧ್ಯಕ್ಷ ಮುಬಿನ್ ಮುನಾವರ್ ಹೇಳಿದರು.
ನಗರದ ಶಾಹೀನ್ ಪದವಿಪೂರ್ವ ಕಾಲೇಜಿನ ಅಲ್ ಆಜೀಜ್ ಕಾನರೆನ್ಸ್ ಹಾಲ್ನಲ್ಲಿ ಮಂಗಳವಾರ ಕರ್ನಾಟಕ ಉರ್ದು ಅಕಾಡೆಮಿ ವತಿಯಿಂದ ಉರ್ದು ಪತ್ರಿಕೋದ್ಯಮ ಕುರಿತು ನಡೆದ ‘ಪ್ರಸ್ತುತ ಸಂದರ್ಭದಲ್ಲಿ ಪತ್ರಿಕೋದ್ಯಮದ ಜವಾಬ್ದಾರಿಗಳು’ ವಿಷಯದ ಕುರಿತ ಕಲಬುರಗಿ ವಿಭಾಗ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಉರ್ದು ಪತ್ರಿಕೆಗಳನ್ನು ನಡೆಸುವುದು ಅತ್ಯಂತ ಕಷ್ಟದಾಯಕ ಕೆಲಸವಾಗಿದೆ. ಆದರೂ ಸಹ ಸತ್ಯ, ವಸ್ತುನಿಷ್ಠ ಹಾಗೂ ಜನರಿಗೆ ಅಗತ್ಯವಿರುವ ಸುದ್ದಿಗಳನ್ನು ಬಿತ್ತರಿಸಲು ಪ್ರಯತ್ನಿಸಬೇಕು. ವೃತ್ತಿ ಜೀವನದಲ್ಲಿ ಕೇವಲ ನಕಾರಾತ್ಮಕ ವಿಷಯಗಳಿಗೆ ಆದ್ಯತೆ ನೀಡದೇ ಉತ್ತಮ ಕೆಲಸಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕರ್ನಾಟಕ ಉರ್ದು ಅಕಾಡೆಮಿಯು ಉರ್ದು ಭಾಷೆಯ ಏಳ್ಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ. ತಾವು ಅಧಿಕಾರಕ್ಕೆ ಬಂದ 11 ತಿಂಗಳಲ್ಲಿ ಸಾಕಷ್ಟು ಕೆಲಸಗಳು ನಡೆದಿವೆ. ಒಂದೇ ದಿನದಲ್ಲಿ ಅಕಾಡೆಮಿಯಿಂದ 65 ಪುಸ್ತಕಗಳನ್ನು ಮುದ್ರಿಸಲಾಗಿದೆ. ಉರ್ದು ಭಾಷೆಯ ಏಳ್ಗೆಗಾಗಿ ಶ್ರಮಿಸುವವರಿಗೆ ಪ್ರಶಸ್ತಿಗಳನ್ನು ಸಹ ನೀಡಲಾಗುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖದೀರ ಮಾತನಾಡಿ, ಉರ್ದು ಭಾಷೆಯು ಕೇವಲ ಮಾತನಾಡುವುದಕ್ಕೆ ಮಾತ್ರ ಸೀಮಿತವಾಗುತ್ತಿದೆ. ಬರೆಯುವವರು ಮತ್ತು ಓದುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಪತ್ರಕರ್ತರು ಈ ವಿಷಯದತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಬೆಂಗಳೂರಿನ ಕರ್ನಾಟಕ ಮುಸ್ಲಿಂ ಪತ್ರಿಕೆಯ ಸಂಪಾದಕ ಸೈಯ್ಯದ್ ತನ್ವೀರ್ ಅಹ್ಮದ ಮಾತನಾಡಿ, ತಂತ್ರಜ್ಞಾನದ ಬೆಳವಣಿಗೆಯಾದಂತೆಲ್ಲ ಸುದ್ದಿವಾಹಿನಿಗಳ ಚಿತ್ರಣವೂ ಬದಲಾಗುತ್ತಿದೆ. ಇಂದಿನ ದಿನಗಳಲ್ಲಿ ಮೊಬೈಲ್ ಮೂಲಕ ಯೂಟ್ಯೂಬ್ ಚ್ಯಾನಲ್ ನಡೆಸಲು ಸಾಧ್ಯವಿದೆ. ಯುವಜನತೆ ಇದರ ಸದುಪಯೋಗ ಪಡೆಯಬೇಕು ಎಂದರು. ಪತ್ರಕರ್ತರು ಜನತೆಯ ನಂಬಿಕೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕಿದೆ. ಸುದ್ದಿವಾಹಿನಿಗಳು ಹೊಸ ಹಾಗೂ ಜನತೆಗೆ ಉಪಯೋಗಕರವಾದ ಸುದ್ದಿಗಳನ್ನು ಪ್ರಸಾರ ಮಾಡಲು ಯತ್ನಿಸಬೇಕು ಎಂದು ಹೇಳಿದರು.
ಬೆಂಗಳೂರಿನ ಬಿಬಿಸಿ ಉರ್ದು ನಿವೃತ್ತ ವರದಿಗಾರ ಮಕ್ಬುಲ್ ಅಹ್ಮದ್ ಸಿರಾಜ್ ಮಾತನಾಡಿ, ಪತ್ರಿಕೆಗಳ ಏಳ್ಗೆಗಾಗಿ ಪತ್ರಕರ್ತರು ಪುರಾತನ ಸಂಪ್ರದಾಯಗಳನ್ನು ಬಿಟ್ಟು ಇಂದಿನ ಕಾಲಮಾನಕ್ಕೆ ಅನುಗುಣವಾಗಿ ತಮ್ಮಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಪತ್ರಕರ್ತರಿಗೆ ಉತ್ತಮ ತರಬೇತಿಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಜ್ಞಾನಕ್ಕಿಂತ ಶಕ್ತಿಶಾಲಿ ಅಸ್ತ್ರ ಇನ್ನೊಂದು ಇರುವುದಿಲ್ಲ. ಹಾಗಾಗಿ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಹೊಸತನ್ನು ತಿಳಿಯಲು ಯತ್ನಿಸಬೇಕು. ತಾವು ಮಾಡುವ ಸುದ್ದಿಗಳು ಸತ್ಯ ಮತ್ತು ನಿಷ್ಪಕ್ಷಪಾತತೆಯಿಂದ ಕೂಡಿರುವಂತೆ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಜನರು ಅನಿವಾರ್ಯವಾಗಿ ಬೇರೆ ಪತ್ರಿಕೆಗಳ ಮೊರೆ ಹೋಗಬೇಕಾಗುತ್ತದೆ ಎಂದು ಸಲಹೆ ನೀಡಿದರು.
ವಾಹಿನಿಯೊಂದರ ನಿರೂಪಕ ಸೈಯ್ಯದ್ ಅಹ್ಮದ್ ಗಿಲಾನಿ, ವಿಜಯಪುರದ ಡೇಲಿ ಸಲಾರ್ ಪತ್ರಿಕೆಯ ಹಿರಿಯ ವರದಿಗಾರ ರಫಿ ಭಂಡಾರಿ ಮಾತನಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಗವಿಸಿದ್ದಪ್ಪ ಹೊಸಮನಿ, ಅಖೀಲ ಭಾರತ ಪತ್ರಿಕಾ ಮಂಡಳಿಯ ಸದಸ್ಯ ಎಂ.ಎ.ಮಾಜೀದ್, ಶಾಹೀದ್ ಖಾಜಿ, ಹಿರಿಯ ಪತ್ರಕರ್ತರಾದ ಖಾಜಿ ಅಲಿಯೋದ್ದಿನ್, ವಿವಿಧ ಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕರ್ನಾಟಕ ಉರ್ದು ಅಕಾಡೆಮಿಯ ಸದಸ್ಯ ಮಹ್ಮದ್ ಸಾಜೀದ್ ಪಾಶಾ ಸ್ವಾಗತಿಸಿ ನಿರೂಪಿಸಿದರು. ಇದೇ ವೇಳೆ ಉರ್ದು ಭಾಷೆಯ ಏಳ್ಗೆಗೆ ಶ್ರಮಿಸಿದವರು ಹಾಗೂ ಪತ್ರಕರ್ತರಿಗೆ ಅಕಾಡೆಮಿಯಿಂದ ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.