ಲಿಂಗಾನುಪಾತದಿಂದ ಸಮಸ್ಯೆ ಉಲ್ಬಣ
ತಾಯಿಗೆ ಬೆಲೆ ಕೊಡದ ಸಮಾಜ ಇದ್ದೂ ಸತ್ತಂತೆ ಶರಣೆಯರು ವಚನ ಬರೆದಿರುವುದು ಐತಿಹಾಸಿಕ ಪರಂಪರೆ
Team Udayavani, Dec 22, 2019, 11:31 AM IST
ಬೀದರ: ಸಂತಸಕ್ಕಾಗಿ ಈಗ ಕೇವಲ ಗಂಡು ಮಗು ಪಡೆಯುವುದು ಎಷ್ಟು ಸಮಂಜಸ? ಮಾನವ ಸಂತಾನ ಬೆಳೆಯಬೇಕಾದರೆ ತಾಯಿ ಅನಿವಾರ್ಯ. ಈಗ ಲಿಂಗಾನುಪಾತ ವ್ಯತ್ಯಾಸವಾಗಿರುವುದರಿಂದಲೇ ಅನೇಕ ಜಟಿಲ ಸಮಸ್ಯೆ ಉಲ್ಬಣಗೊಳ್ಳುತ್ತಿವೆ ಎಂದು ಚಿತ್ರದುರ್ಗದ ಡಾ| ಶಿವಮೂರ್ತಿ ಮುರಘಾ ಶರಣರು ಕಳವಳ ವ್ಯಕ್ತಪಡಿಸಿದರು.
ನಗರದ ಬಿವಿಬಿ ಕಾಲೇಜು ಮೈದಾನದಲ್ಲಿ ಶನಿವಾರ ಬೆಳಗ್ಗೆ ಶರಣ ಸಂಸ್ಕೃತಿ ಉತ್ಸವ ನಿಮಿತ್ತ ನಡೆದ ಸಹಜ ಶಿವಯೋಗದಲ್ಲಿ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು. ನಮ್ಮ ಭಾವನೆ ತುಂಬಾ ಸಂಕುಚಿತಗೊಂಡು ಅನೇಕ ಹಿಂಸೆಗಳಿಗೆ ನಾವೇ ಎಡೆಮಾಡಿಕೊಡುತ್ತಿದ್ದೇವೆ. ಹೆಣ್ಣು ಹೆಣ್ಣಲ್ಲ, ಹೆಣ್ಣು ರಕ್ಕಸಿಯಲ್ಲ. ಹೆಣ್ಣು ಸಾಕ್ಷಾತ ಕಪಿಲಸಿದ್ದ ಮಲ್ಲಿಕಾರ್ಜುನ ಎಂದು ಹೇಳಿ ತಾಯಿಗೆ ಅತ್ಯುನ್ನತವಾದ ಸ್ಥಾನ ಕೊಟ್ಟಿರುವುದು ಇಡೀ ಜಗತ್ತಿನ ಇತಿಹಾಸದಲ್ಲಿ ವಚನ ಸಾಹಿತ್ಯ ಮಾತ್ರ. ತಾಯಿಗೆ ಬೆಲೆ ಕೊಡದ ಸಮಾಜ ಇದ್ದು ಸತ್ತಂತೆ ಎಂದು ಹೇಳಿದರು.
12ನೇ ಶತಮಾನದ ಅನುಭವ ಮಂಟಪದಲ್ಲಿ ಸೂಳೆ ಸಂಕವ್ವೆ, ಹಡಪದ ಲಿಂಗಮ್ಮ, ಕಸಗೂಡಿಸುವ ಸತ್ಯಕ್ಕ ತಾನೂ ಬದುಕಿ ಇಡೀ ಸಮಾಜಕ್ಕೆ ಆದರ್ಶ ಪ್ರಾಯವಾಗಿರುವುದಲ್ಲದೇ 36 ಶರಣೆಯರು ವಚನ ಬರೆದಿರುವುದು ಒಂದು ಐತಿಹಾಸಿಕ ಪರಂಪರೆ. ಇವರೆಲ್ಲರೂ ಜೀವ ಕಾರುಣ್ಯದ ಮಹಾ ಶರಣರು. ಇಂದಿನ ಸಮಾಜದಲ್ಲಿ ಅನೇಕ ಮಕ್ಕಳು ಬೀದಿ ಪಾಲಾಗಿ ತಿಪ್ಪೆಗುಂಡಿಯಲ್ಲಿ ಬೀಳುತ್ತಿರುವುದು ಅತ್ಯಂತ ನೋವಿನ ಸಂಗತಿ. ನಮ್ಮ ಮಠ ನೂರಾರು ನಿರ್ಗತಿಕ, ದಲಿತ ಮಕ್ಕಳಿಗೆ ಸಾಂತ್ವನ ನೀಡುವುದಲ್ಲದೇ ಆಶ್ರಯ ತಾಣವಾಗಿದೆ ಎಂದು ಹೇಳಿದರು.
ವ್ಯಕ್ತಿಯೂ ತಮ್ಮ ಜೀವನದ ಕ್ಷಣಗಳನ್ನು ಆಸ್ವಾಧಿಸಿಕೊಂಡು ಮಾನವ ಸಂತಸಕ್ಕೆ ಕಾರಣಿಭೂತರಾಗಲೂ ದಿನಾಲೂ ಶಿವಯೋಗ ಮಾಡಬೇಕು ಎಂದು ಹೇಳಿದರು.
ಸಾಯಗಾಂವನ ಶ್ರೀ ಶಿವಾನಂದ ದೇವರು, ಇಂಜಿನಿಯರರಾದ ಹಾವಶೆಟ್ಟಿ ಪಾಟೀಲ, ಡಾ| ಎಸ್.ಆರ್. ಮಠಪತಿ, ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಜೈಶ್ರೀ ಸಕಾಲೆ, ಸಾಹಿತಿ ಮೇನಕಾ ಪಾಟೀಲ, ಜಿಪಂ ಸದಸ್ಯೆ ಶಕುಂತಲಾ ಬೆಲ್ದಾಳೆ, ಶಕುಂತಲಾ ವಾಲಿ, ಮಹಾನಂದಾ ಹಿರೇಮಠ, ಸಿದ್ರಾಮ ಸೀತಾ, ಗುತ್ತಿಗೆದಾರ ಭೀಮರಾವ್ ಮರಕಲ್, ವಿಜಯಲಕ್ಷ್ಮೀ ಕೌಠಗೆ, ಕಸ್ತೂರಿ ಪಟಪಳ್ಳಿ, ನೀಲಮ್ಮ ರೋಗನ್, ಡಾ| ವಿಜಶ್ರೀ ಬಶೆಟ್ಟಿ, ಸಿ.ಎಸ್. ಗಣಾಚಾರಿ, ಡಾ| ಜಗದೀಶ ಜಾಬಾ, ಭಾರತಿ ಪಾಟೀಲ ಇದ್ದರು.
ತೋಟಪ್ಪ ಉತ್ತಂಗಿ, ನವಲಿಂಗ ಪಾಟೀಲ ವಚನ ಗಾಯನ ನಡೆಸಿಕೊಟ್ಟರು. ಮಹಿಳಾ ಬಸವ ಕೇಂದ್ರದ ಗೌರವಾಧ್ಯಕ್ಷೆ ಕರುಣಾ ಶೆಟಕಾರ ಸ್ವಾಗತಿಸಿದರು. ಶಿಲ್ಪಾ ಮಜಗೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ 143: ದೇಹ-ಆತ್ಮ ಬೇರೆ: ಶ್ರುತಿ ಪ್ರಾಮಾಣ್ಯ
ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ
Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ
ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ
ESI ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸಂಕಷ್ಟ:ಸಂಸದ ಬ್ರಿಜೇಶ್ ಚೌಟ ಭೇಟಿ;ಅಧಿಕಾರಿಗಳಿಗೆ ತಾಕೀತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 143: ದೇಹ-ಆತ್ಮ ಬೇರೆ: ಶ್ರುತಿ ಪ್ರಾಮಾಣ್ಯ
ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ
Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್ ಆಸ್ಪತ್ರೆ
Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ
ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.