ಶ್ರಾವಣ ಹಿಂದೂ ಧರ್ಮಿಯರಿಗೆ ಪವಿತ್ರ ಮಾಸ

ಶ್ರಾವಣ ಆಚರಣೆಯಿಂದ 11 ತಿಂಗಳು ಮನಕ್ಕೆ ಹೊಸ ಚೈತನ್ಯ-ಸ್ಫೂರ್ತಿ •ಶ್ರಾವಣ ಸಂಗೀತ ದರ್ಬಾರ್‌

Team Udayavani, Aug 5, 2019, 10:12 AM IST

5-AGUST-3

ಬೀದರ: ಲಾಡಗೇರಿ ಹಿರೇಮಠ ಸಂಸ್ಥಾನದಲ್ಲಿ ಶ್ರಾವಣ ಮಾಸದ ಸಂಗೀತ ದರ್ಬಾರ್‌ ಕಾರ್ಯಕ್ರಮವನ್ನು ಜಿಪಂ ಸದಸ್ಯೆ ಶಕುಂತಲಾ ಬೆಲ್ದಾಳೆ ಉದ್ಘಾಟಿಸಿದರು.

ಬೀದರ: ಶ್ರಾವಣ ಮಾಸ ಹಿಂದೂ ಧರ್ಮಿಯರಿಗೆ ಪವಿತ್ರ ಮಾಸವಾಗಿದೆ ಎಂದು ಜಿಲ್ಲಾ ಪಂಚಾಯತ ಸದಸ್ಯೆ ಶಕುಂತಲಾ ಬೆಲ್ದಾಳೆ ಹೇಳಿದರು.

ನಗರದ ಲಾಡಗೇರಿ ಹಿರೇಮಠ ಸಂಸ್ಥಾನದಲ್ಲಿ ನಡೆದ ಶ್ರಾವಣ ಮಾಸದ ಸಂಗೀತ ದರ್ಬಾರ್‌ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಸ್ಲಾಮ್‌ ಧರ್ಮಿಯರಿಗೆ ರಂಜಾನ್‌ ಪವಿತ್ರ ಮಾಸವಾಗಿರುವಂತೆ ನಮಗೆ ಶ್ರಾವಣ ಮಾಸ ಅಷ್ಟೇ ಪವಿತ್ರವಾಗಿದೆ. ಈ ಮಾಸಾಚಾರಣೆಯಿಂದ 11 ತಿಂಗಳ ಕಾಲ ಮನಕ್ಕೆ ಹೊಸ ಚೈತನ್ಯ, ಸ್ಫೂರ್ತಿ ನೀಡುತ್ತದೆ. ಈ ಮಾಸದಲ್ಲಿ ಧಾರ್ಮಿಕ ಕ್ರಿಯಗಳಾದ ಭಜನೆ, ಕೀರ್ತನೆ ಹಾಗೂ ಪ್ರವಚನಗಳನ್ನು ಆಲಿಸಿ, ಪಾಲಿಸುವುದರಿಂದ ನಮ್ಮ ಜೀವನ ಪಾವನವಾಗುತ್ತದೆ. ಮಂದಿರ, ಮಠಗಳಲ್ಲಿ ನಿತ್ಯ ಭಜನೆ ಹಾಗೂ ಪ್ರವಚನ ಜರರುಗುವುದರಿಂದ ಆಂತರಿಕ ಶುದ್ಧಿ ಜೊತೆಗೆ ಮಾನಸಿಕ ಹಿತ ದೊರೆಯುತ್ತದೆ. ಶಾಂತಿ ಹಾಗೂ ನೆಮ್ಮದಿಯಿಂದ ಬದುಕಲು ನಾವು ನಿತ್ಯ ಗುರುವಿನ ಆರಾಧನೆ, ಯೋಗ, ಜಪ, ತಪ, ಪ್ರಾರ್ಥನೆ ಹಾಗೂ ಸಂಗೀತ ಕಾರ್ಯಕ್ರಮಗಳತ್ತ ಮುಖ ಮಾಡಬೇಕಿದೆ ಎಂದರು.

ಮಕ್ಕಳ ರೋಗ ತಜ್ಞ ಡಾ| ಸಿ.ಆನಂದರಾವ್‌ ಮಾತನಾಡಿ, 100 ವರ್ಷಗಳ ಹಿಂದೆ ಸಕ್ಕರೆ ಕಾಯಿಲೆಯಾಗಲಿ ಅಥವಾ ರಕ್ತದೊತ್ತಡದ ಪರಿಚಯವೇ ಇರಲಿಲ್ಲ. ಆದರೆ ಇಂದು ಜನ ಸಾಮಾನ್ಯರಿಗಿಂತ ವೈದ್ಯ ಸಮೂಹಕ್ಕೆ ಹಾಗೂ ಅವರ ಕುಟುಂಬ ವರ್ಗಕ್ಕೆ ಹಲವು ರೋಗಗಳು ಕಾಡುತ್ತಿವೆ. ಸ್ವಾರ್ಥದ ಹಣಬಲವು ವೈದ್ಯ ಲೋಕವನ್ನೇ ಕಂಗಾಲಾಗಿಸಿದ್ದು, ಬಡವರ, ಹಾಗೂ ದುರ್ಬಲರ ಪ್ರಾಮಾಣಿಕ ಸೇವೆ ಮಾಡಿದಲ್ಲಿ ಪುಣ್ಯಪ್ರಾಪ್ತಿ ಸಾಧ್ಯವಿದೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಶೋಕಕುಮಾರ ಕರಂಜಿ ಮಾತನಾಡಿ, ಶ್ರಾವಣ ಮಾಸದಲ್ಲಿ ಆಚರಿಸಲಾಗುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಸಿಗುವ ಪುಣ್ಯ ಇಡೀ ವರ್ಷಪೂರ್ತಿ ಖರ್ಚು ಮಾಡಬಹುದು. ಶ್ರವಾಣ ಮಾಸದಲ್ಲಿ ತಪ್ಪದೆ ಪ್ರತಿಯೊಬ್ಬರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ದೇವರ ಸ್ಮರಣೆಯಿಂದ ನೆಮ್ಮದಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಶ್ರೀಮಠದ ಅಧಿಪತಿ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮಿಜಿ ಅಧ್ಯಕ್ಷತೆ ವಹಿಸಿದ್ದರು. ಕಾಮಶೆಟ್ಟಿ ಚಿಕಬಸೆ, ಕಾಶೀನಾಥ, ಡಾ| ಲೋಕೇಶ ಹಿರೇಮಠ, ಶಾಮರಾವ್‌ ಹಲಮಡಗೆ, ಸಚ್ಚಿದಾನಂದ ಚಿದ್ರೆ, ಕಂಟೆಪ್ಪ ಪಾಟೀಲ, ಶಿವಕುಮಾರ ಸ್ವಾಮಿ, ಶರಣಪ್ಪ ಚಿಮಕೊಡೆ, ಬಂಡೆಪ್ಪ ಗಿರಿ, ನಾಗಶೆಟ್ಟಿ ಧರಂಪೂರ, ಚಂದ್ರಕಾಂತ ಅಷ್ಟುರೆ, ಗಜೇಂದ್ರ ಗಿರಿ, ನಾಗಶೆಟ್ಟಿ ಪಾಟೀಲ ವಾಲದೊಡ್ಡಿ, ಮಲ್ಲಿಕಾರ್ಜುನ್‌ ಬಸಂತಪುರೆ, ಎಸ್‌.ಬಿ. ಕುಚಬಾಳ, ಲಕ್ಷ್ಮಣರಾವ್‌ ಕಾಂಚೆ, ಸುಭಾಷ ಬಸಂತಪುರೆ, ಶ್ರೀಕಾಂತ ಸ್ವಾಮಿ ಸೋಲಪೂರ, ಭಾರತಿ ಕೊಡಂಬಲ ಇದ್ದರು.

ಟಾಪ್ ನ್ಯೂಸ್

ಶ್ವೇತಭವನ ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

1-shaba

Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ

Mang-Airport

Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್‌ ವಾರಸುದಾರರಿಗೆ ಹಸ್ತಾಂತರ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mang-Airport

Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್‌ ವಾರಸುದಾರರಿಗೆ ಹಸ್ತಾಂತರ

1-tanker

Mangaluru; ಟ್ಯಾಂಕರ್‌ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

1-sham

Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್‌ ಮೂಲದವರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಶ್ವೇತಭವನ ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

1-shaba

Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ

Mang-Airport

Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್‌ ವಾರಸುದಾರರಿಗೆ ಹಸ್ತಾಂತರ

1-tanker

Mangaluru; ಟ್ಯಾಂಕರ್‌ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.