ಮೊಹರಂ-ಪೀರ್‌ಗಳ ಮೆರವಣಿಗೆ
Team Udayavani, Sep 15, 2019, 3:04 PM IST
ಬೀದರ: ಚಿಕ್ಕಪೇಟ್‌ನಲ್ಲಿ ಮೊಹರಂ ನಿಮಿತ್ತ ಪೀರ್‌ಗಳ ಮೆರವಣಿಗೆ ನಡೆಯಿತು.
ಬೀದರ: ಚಿಕ್ಕಪೇಟ್‌ನಲ್ಲಿ ಶುಕ್ರವಾರ ಮೊಹರಂ ಹಬ್ಬ ನಿಮಿತ್ತ ಪೀರ್‌ಗಳ ಮೆರವಣಿಗೆ ನಡೆಯಿತು. ಗ್ರಾಮದ ಎಲ್ಲ ಸಮುದಾಯದ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲದೆ, ಶುಕ್ರವಾರ ರಾತ್ರಿ ಹಬ್ಬ ನಿಮಿತ್ತ ಏರ್ಪಡಿಸಿದ್ದ ಸಂಗೀತ ಸ್ಪರ್ಧೆಯಲ್ಲಿ ವಿಜೇತರಿಗೆ ಬೆಳ್ಳಿ ಕಡಗ ನೀಡಿ ಸನ್ಮಾನಿಸಲಾಯಿತು.
ಈ ವೇಳೆ ಗ್ರಾಮ ಪಂಚಾಯತ ಸದಸ್ಯ ವೈಜನಾಥ ಕಾಂಬಳೆ ಮಾತನಾಡಿ, 25 ವರ್ಷಗಳಿಂದ ಎಲ್ಲ ಸಮುದಾಯದ ಜನರು ಸೇರಿ ಮೊಹರಂ ಆಚರಣೆ ಮಾಡಲಾಗುತ್ತಿದೆ. ಈ ಕಾರ್ಯಕ್ಕೆ ಎಲ್ಲರ ಸಹಕಾರ ದೊರೆಯುತ್ತಿದ್ದು, ಮುಂದೆಯೂ ಕೂಡ ಎಲ್ಲರ ಸಹಕಾರದಿಂದ ಹಬ್ಬ ಆಚರಣೆ ಮಾಡಲಾಗುವುದು ಎಂದರು. ಗ್ರಾಮ ಪಂಚಾಯತ ಸದಸ್ಯ ಸಿದ್ರಾಮ್ ರಾಂಪೂರೆ ಮಾತನಾಡಿದರು.
ರಾತ್ರಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ವಿವಿಧ ಹಾಡುಗಾರರು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನರಸಪ್ಪಾ ಇರಕ್ಕಪಳ್ಳಿ ಅವರಿಗೆ 30 ಗ್ರಾಂ ಬೆಳ್ಳಿ ಕಡಗ ನೀಡಿ ಗೌರವಿಸಲಾಯಿತು. ಎರಡನೇ ಸ್ಥಾನ ಪಡೆದ ಸೂಜೀತ್ ಚಾಂಬೋಳ್ ಅವರಿಗೆ 20 ಗ್ರಾಂ ಬೆಳ್ಳಿ ಕಡಗ ನೀಡಿ ಸನ್ಮಾನಿಸಲಾಯಿತು.
ಗ್ರಾಮದ ಹಿರಿಯ ಮುಖಂಡರಾದ ಶಾಂತಪ್ಪಾ ಕಾಂಬಳೆ, ಪೊಲೀಸ್ ಪಾಟೀಲ ಜಗನ್ನಾಥರಾವ್, ಹಣಮಂತರಾವ್ ಪಾಟೀಲ, ಅಜೀಜ್ ಮಿಯ್ನಾ, ಮುಲ್ತಾನಿ ದೊಡ್ಡಿ, ಚಂದ್ರಪ್ಪಾ ಕಾಂಬಳೆ, ಜಾಫರ್ ಮಿಯ್ನಾ, ಎಂ.ಪಿ.ಮುದಾಳೆ, ಶಂಕರ ಪೊಲೀಸ್ ಪಾಟೀಲ, ಶರಣಪ್ಪಾ ಕಾಂಬಳೆ, ಲಕ್ಷ್ಮಣ ಕಾಂಬಳೆ, ಲೋಕೆಶ ಸತ್ಪಾಲ್, ಪವನ ಚಾಂಬೋಳ್, ವೀರಶೆಟ್ಟಿ ಸಿಕ್ಕರಖಾನಿ, ಲವಕುಶ, ಇಸ್ಮಾಯಿಲ್, ಶೀವಕುಮಾರ ಕಾಂಬಳೆ, ಶಿವಕುಮಾರ ಮುದಾಳೆ, ತುಕಾರಾಮ್ ಧನರಾಜ ಕಾಶೀನಾಥ ಕಾಂಬಳೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
ಮಂಗಳೂರಿಗೆ ವಾಟರ್ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.