ದುಸ್ಥಿತಿಯಲ್ಲಿ ಶುದ್ಧೀಕರಣ ಘಟಕ
ಹೂಳು ತುಂಬಿಕೊಂಡಿದೆ • ಶೀಘ್ರ ಕ್ರಮಕ್ಕೆ ಸ್ಥಳೀಯರ ಒತ್ತಾಯ
Team Udayavani, Jul 25, 2019, 12:28 PM IST
ಬೀಳಗಿ: ಪಟ್ಟಣದ ಹೊರವಲಯದಲ್ಲಿ ನಿರ್ಮಿ ಸಲಾಗಿರುವ ಕೋಟ್ಯಂತರ ವೆಚ್ಚದ ಒಳಚರಂಡಿ ಯೋಜನೆಯ ಮಲೀನ ನೀರು ಶುದ್ಧೀಕರಣ ಘಟಕದ ಪ್ರದೇಶ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ದುಃಸ್ಥಿತಿಗೆ ತಲುಪಿದೆ.
ಕೊಳವೆ ಮಾರ್ಗ ಕಳಪೆ: 17.30 ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿ ಒಳಚರಂಡಿ ಕಾಮಗಾರಿ ಮಾಡಲಾಗಿದೆ. ಒಳಚರಂಡಿ ಕಾಮಗಾರಿ ಒಟ್ಟು ಕೊಳವೆ ಮಾರ್ಗ 25,344 ಮೀಟರ್‌ಗಳಾಗಿದೆ. ಒಟ್ಟು 1,189 ಆಳಗುಂಡಿಗಳಿದ್ದು, 11 ಸಾವಿರ ಮೀಟರ್ ಉದ್ದದ ಕೊಳವೆ ಮಾರ್ಗಗಳಿದ್ದು, 2,356 ಮನೆಗಳಿಗೆ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೆ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿದೆ.
ಕೇವಲ ಒಂದೇ ವರ್ಷದೊಳಗೆ ಒಳಚರಂಡಿ ಯೋಜನೆಯ ಮಲೀನ ನೀರು ಶುದ್ಧೀಕರಣ ಘಟಕದ ಪ್ರದೇಶದಲ್ಲಿ ಮುಳ್ಳುಕಂಟಿ ಬೆಳೆದು ನಿಂತಿವೆ. ಶುದ್ಧೀಕರಣ ಘಟಕ ನಿರ್ವಹಣೆಗೆ ತೆರಳಲು ರಸ್ತೆಯೇ ಇಲ್ಲದಂತಾಗಿದೆ. ಅಲ್ಲದೆ, ಶುದ್ಧೀಕರಣ ಘಟಕದ ಬಳಿ ಒಳಚರಂಡಿ ಮಲೀನ ನೀರು ಸರಬರಾಜಾಗುವ ಕೊಳವೆ ಮಾರ್ಗ ಹಲವೆಡೆ ಒಡೆದಿರುವ ಪರಿಣಾಮ, ಕೊಳವೆ ಮಾರ್ಗ ಸೋರಿಕೆಯಾಗುತ್ತಿದೆ. ಮೂರು ದಶಲಕ್ಷ ಲೀಟರ್ ಸಾಮರ್ಥ್ಯದ ಮಲೀನ ಶುದ್ಧೀಕರಣ ಘಟಕದ ಸ್ಥಿತಿ ಕೇಳುವರಿಲ್ಲದಂತಾಗಿದೆ. ಮಲೀನ ನೀರು ಶುದ್ಧೀಕರಣ ಘಟಕ ನಿರ್ವಹಣೆಯಿಲ್ಲದೆ ಹೂಳು ತುಂಬಿಕೊಂಡಿದ್ದು, ಹಸಿರು ಪಾಚಿ (ಆಪು) ಬೆಳೆದು ನಿಂತಿದೆ.
17.30 ಕೋಟಿ ಕಾಮಗಾರಿ: ತಾಲೂಕು ಕೇಂದ್ರವಾಗಿರುವ ಬೀಳಗಿ ನಗರದ ಜನಸಂಖ್ಯೆ 20 ಸಾವಿರ ಗಡಿ ದಾಟಿದೆ. 2028ರ ಮಧ್ಯಮ ವರ್ಷಕ್ಕೆ 27 ಸಾವಿರ ಹಾಗೂ 2043 ರ ಅಂತಿಮ ವರ್ಷಕ್ಕೆ 37 ಸಾವಿರ ಜನಸಂಖ್ಯೆ ಹೊಂದಬಹುದೆನ್ನುವ ದೂರದೃಷ್ಟಿಯಿಂದ ಪಟ್ಟಣಕ್ಕೆ ಒಳಚರಂಡಿ ಯೋಜನೆ ಅಗತ್ಯತೆಯಿದೆ. ಸಾರ್ವಜನಿಕರಿಂದ ಕಳಪೆ ಕಾಮಗಾರಿಯ ಆರೋಪ ಎದುರಿಸುತ್ತಲೆ ಒಳಚರಂಡಿ ಕಾಮಗಾರಿ ಕೂಡ ಮುಗಿದು ಹೋಗಿದೆ. ಆದರೆ, ಇದೀಗ ಮಲೀನ ನೀರು ಶುದ್ಧೀಕರಣ ಘಟಕದ ಬಳಿ ಕೊಳವೆ ಮಾರ್ಗ ಸೋರಿಕೆಯಾಗುತ್ತಿರುವುದನ್ನು ಗಮನಿಸಿದರೆ, ಸಾರ್ವಜನಿಕರು ಈ ಹಿಂದೆ ಮಾಡಿರುವ ಕಳಪೆ ಕಾಮಗಾರಿ ಆರೋಪಕ್ಕೆ ಪುಷ್ಠಿ ನೀಡುತ್ತದೆ.
ಕೂಡಲೆ ಕ್ರಮಕ್ಕೆ ಮುಂದಾಗಿ: ಒಳಚರಂಡಿ ಯೋಜನೆ ಮುಗಿದು ವರ್ಷ ಕೂಡ ಪೂರ್ಣಗೊಂಡಿಲ್ಲ. ಆಗಲೇ ಮಲೀನ ನೀರು ಸರಬರಾಜು ಕೊಳವೆ ಮಾರ್ಗ ಸೋರಿಕೆಯಾಗುತ್ತಿದೆ. ಶುದ್ಧೀಕರಣ ಘಟಕದ ಪ್ರದೇಶ ಮುಳ್ಳುಕಂಟಿ ಬೆಳೆದಿದೆ. ಕೊಳವೆ ಮಾರ್ಗ ರಿಪೇರಿ ಮಾಡಬೇಕು. ಘಟಕದ ಪ್ರದೇಶ ಸ್ವಚ್ಛಗೊಳಿಸಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kulageri Cross: ಹೂಳು ತುಂಬಿದ ಕಾಲುವೆ…ಪೋಲಾಗುತ್ತಿದೆ ಮಲಪ್ರಭಾ ಎಡದಂಡೆ ಕಾಲುವೆ ನೀರು…
New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.