ಮೋದಿ ಅಲೆಯಲ್ಲ ಸುನಾಮಿ: ಚಿಂಚನಸೂರ

ಮೈತ್ರಿ ಅಭ್ಯರ್ಥಿ ಕೊಚ್ಚಿಕೊಂಡು ಹೋಗ್ತಾರೆ ಪುತ್ರ ವ್ಯಾಮೋಹಕ್ಕೆ ಹಿರಿಯರ ಕಡೆಗಣಿಸಿದ ಖರ್ಗೆ

Team Udayavani, Apr 20, 2019, 1:02 PM IST

20-April-15

ಹುಮನಾಬಾದ: ಕೋಲಿ ಸಮಾಜ ಮುಖಂಡರೂ ಆದ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ ಸುದ್ದಿಗಾರರೊಂದಿಗೆ ಮಾತನಾಡಿದರು.

ಹುಮನಾಬಾದ: ಕಳೆದ ಲೋಕಸಭೆ ಚುನಾವಣೆಯಲ್ಲಿ ದೇಶದೆಲ್ಲೆಡೆ ನರೇಂದ್ರ ಮೋದಿ ಅಲೆ ಇತ್ತು. ಈ ಬಾರಿ ಅದು
ಸುನಾಮಿಯಾಗಿದ್ದು, ಅದರ ರಭಸಕ್ಕೆ ಮೈತಿ ಅಭ್ಯರ್ಥಿಗಳು ಹೇಳ ಹೆಸರಿಲ್ಲದೇ ಕೊಚ್ಚಿಕೊಂಡು ಹೋಗುತ್ತಾರೆ ಎಂದು
ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ ಭವಿಷ್ಯ ನುಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ
ಅವರು, ಹೆಚ್ಚು ಸ್ಥಾನ ಗೆದ್ದ ಕಾಂಗ್ರೆಸ್‌ ಅತ್ಯಲ್ಪ ಸ್ಥಾನ ಗೆದ್ದ ಜೆಡಿಎಸ್‌ ಜೊತೆಗೆ ಒಲ್ಲದ ಮನಸ್ಸಿಂದ ಮದುವೆಯಾಗಿ ಜೆಡಿಎಸ್‌ಗೆ
ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಟ್ಟಿದೆ. ಮೈತ್ರಿ ಮಧ್ಯ ಈಗಾಗಲೇ ಭಾರೀ ಪ್ರಮಾಣದ ಬಿರುಕುಬಿಟ್ಟಿದೆ. ಲೋಸಭೆ ಚುನಾವಣೆ
ಫಲಿತಾಂಶ ನಂತರ 24ಗಂಟೆ ಒಳಗಾಗಿ ವಿಚ್ಛೇದನ ಆಗುವುದು ಖಚಿತ ಎಂದು ತಿಳಿಸಿದರು.

5ದಶಕಗಳ ಕಾಲ ಅ ಧಿಕಾರದಲ್ಲಿದ್ದ ಖರ್ಗೆ ಕೋಲಿ ಸಮಾಜಕ್ಕೆ ಎಸ್‌ಟಿ ಮಾನ್ಯತೆ ಕೊಡಿಸುವಂತೆ ಮಾಡಿಕೊಂಡ ಮನವಿಗೆ ಬಿಡಿಕಾಸಿ ಬೆಲೆ ನೀಡದೇ ಸಂಪೂರ್ಣ ಕಡೆಗಣಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಕೋಲಿ ಸಮಾಜಕ್ಕೆ ಎಲ್ಲೂ ಪ್ರಾತಿನಿಧ್ಯ ನೀಡಿಲ್ಲ ಎಂದು ದೂರಿದರು. ಆದರೆ ಬಿಜೆಪಿ ಸರ್ಕಾರ ತನ್ನ ಅವ ಧಿಯಲ್ಲಿ ಅನೇಕ ಕಡೆ ಸ್ಥಾನ ನೀಡಿದೆ. ವಿಶೇಷ ಎಂದರೆ
ದೇಶದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿ ಹುದ್ದೆಯನ್ನು ಕೋಲಿ ಸಮಾಜಕ್ಕೆ ಸೇರಿದ ರಾಮನಾಥ ಕೋವಿಂದ ಅವರಿಗೆ ನೀಡಿದೆ
ಎಂದರು.

ಪುತ್ರ ವ್ಯಾಮೋಹ: ಪಕ್ಷಕ್ಕಾಗಿ ನಿರಂತರ ಶ್ರಮಿಸಿದವರನ್ನು ಕಡೆಗಣಿಸಿ, ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ
ಪುತ್ರನ ಮೇಲಿನ ವ್ಯಾಮೋಹದಿಂದಾಗಿ ಹಿರಿಯರನ್ನು ಕಡೆಗಣಿಸಿದ್ದಾರೆ. ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್‌,
ಡಾ|ಎ.ಬಿ.ಮಲಕರೆಡ್ಡಿ ಮತ್ತು ನಾವು ಖರ್ಗೆ ಸೋಲಿಸುವುದನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಖರ್ಗೆ ಅವರಿಗೆ ಕೋಲಿ ಸಮಾಜದ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ಹೇಳಿದರು.

ಡಾ|ಜಾಧವ್‌ ಗೆಲುವು ಖಚಿತ: ಸಮುದಾಯಗಳನ್ನು ಜೊತೆಗೆ
ತೆಗೆದುಕೊಂಡು ಹೋಗುವ ವಿದ್ಯಾವಂತ ಅಭ್ಯರ್ಥಿ ಡಾ|ಉಮೇಶ ಜಾಧವ್‌ ಗೆಲುವು ಖಚಿತ. ವಿಶೇಷವಾಗಿ ಕೋಲಿ ಸಮಾಜದ
ಶೇ.95ರಷ್ಟು ಮತಗಳನ್ನು ಬಿಜೆಪಿಗೆ ನೀಡಲು ನಿರ್ಧರಿಸಿದ್ದು, ಅವರ ಗೆಲುವು ಕಟ್ಟಿಟ್ಟ ಬುತ್ತಿ ಎಂದರು. ನರೇಂದ್ರ ಮೋದಿ ಅವರು ಕಲಬುರಗಿಗೆ ಬಂದಾಗ ಲಕ್ಷಾಂತರ ಜನ ಸಮುದಾಯ ಮಧ್ಯ ನನ್ನನ್ನು ಉದ್ದೇಶಿಸಿ, ಬಿಜೆಪಿಗೆ ಕೋಲಿ ಸಮಾಜದ ವ್ಯಕ್ತಿಯೊಬ್ಬರು
ಬಂದಿದ್ದರಿಂದ ಪಕ್ಷದ ಶಕ್ತಿ ವೃದ್ಧಿಯಾಗಿದೆ. ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ ಮತ್ತು ಸಮುದಾಯವನ್ನು ಯಾವತ್ತೂ ಮರೆಯಲ್ಲ. ಆ ಜನರ ಬೇಡಿಕೆಯನ್ನು ಖಂಡಿತ ಈಡೇರಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು ಎಂದು ಹೇಳಿದರು.

ದೇಶದ ಪ್ರಧಾನಿಯಿಂದ ನಮ್ಮ ಸಮಾಜದ ಬಗ್ಗೆ ಕಳಕಳಿಯ ಮಾತು ಬರುವುದೆಂದರೆ ಸಾಮಾನ್ಯ ವಿಷಯವಲ್ಲ. ಈ ನಿಟ್ಟಿನಲ್ಲಿ ಹಾಲಿ ಚುನಾವಣೆಯಲ್ಲಿ ಕೋಲಿ ಸಮಾಜದ ಶೇ.95ರಷ್ಟು ಮತ ಬಿಜೆಪಿ ನೀಡಲು ಒಮ್ಮತದಿಂದ ನಿರ್ಧರಿಸಲಾಗಿದೆ ಎಂದು
ಘೋಷಿಸಿದರು.

ಗಂಗಾಮತ ಟೋಕ್ರಿ ಕೋಲಿ ಸಮಾಜ ಕಾರ್ಯದರ್ಶಿ ದಯಾ
ನಂದ, ಉಪಾಧ್ಯಕ್ಷ ಅಶೋಕ ಹಣಕುಣಿ, ಷಣ್ಮುಖ ಕಾರಪಾಕಪಳ್ಳಿ,
ಸಮಾಜದ ರಾಜ್ಯ ಕಾರ್ಯದರ್ಶಿ ಲಕ್ಷ್ಮಣ ಔಂಟಿ, ಅವಿನಾಶ ಮೋಲ್ದಾಸ್‌, ಸುನೀಲ ಭಾವಿಕಟ್ಟಿ, ಚಂದು ಹಳ್ಳಿಖೇಡಕರ್‌,
ಅರುಣ ಬಾವಗಿ, ಕಾಶೀನಾಥ ನಾಟಿಕಾರ, ರವೀಂದ್ರ ಜಾಲಗಾರ್‌, ಪಿಡ್ಡಪ್ಪ ಜಾಲಗಾರ್‌ ಮೊದಲಾದವರು ಇದ್ದರು.

ಟಾಪ್ ನ್ಯೂಸ್

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ

Hockey

Hockey: ಇಂದಿನಿಂದ ಜೂ. ಏಷ್ಯಾ ಕಪ್‌ ಹಾಕಿ; ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ

Hockey

Hockey: ಇಂದಿನಿಂದ ಜೂ. ಏಷ್ಯಾ ಕಪ್‌ ಹಾಕಿ; ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.