ಜಮೀನಿನ ಮ್ಯುಟೇಶನ್ ಮಾಡಲು 15 ಲಕ್ಷ ರೂ. ಲಂಚ : ಎಸಿಬಿ ಬಲೆಗೆ ಬಿದ್ದ ತಹಸೀಲ್ದಾರ್
Team Udayavani, Jul 28, 2021, 1:03 PM IST
ಬೀದರ : ಜಮೀನಿನ ಮ್ಯುಟೇಶನ್ ಮಾಡಿಕೊಡಲು ಮಾಲೀಕರಿಂದ 15 ಲಕ್ಷ ರೂ. ಲಂಚ ಪಡೆಯುವಾಗ ಇಲ್ಲಿನ ಗ್ರೇಡ್ 1 ತಹಸೀಲ್ದಾರ್ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಬುಧವಾರ ನಡೆದಿದೆ.
ಗಂಗಾದೇವಿ ಸಿ.ಎಚ್ ಎಂಬುವರೆ ಎಸಿಬಿ ಬಲೆಗೆ ಬಿದ್ದಿರುವ ತಹಸೀಲ್ದಾರ್. ನಗರದ ವಿದ್ಯಾನಗರ ಕಾಲೋನಿಯ ನಿವಾಸಿ ಲಿಲಾಧರ ಅಮೃತಲಾಲ್ ಪಟೇಲ್ ಎಂಬುವರಿಂದ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಗರದ ಹೊರವಲಯದ ಚಿದ್ರಿ ಬಳಿಯ ಸರ್ವೇ ನಂ. 15/1ಎ7 ರ 2 ಎಕರೆ 25 ಗುಂಟೆ ಜಮೀನಿನ ಮ್ಯುಟೇಶನ್ ಮಾಡಿಕೊಡಲು ತಹಸೀಲ್ದಾರ್ ಗಂಗಾದೇವಿ ಅವರು 20 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಮ್ಯುಟೇಶನ್ 2011ರಲ್ಲಿ ಅರ್ಜಿಸಿದ್ದು, ಹಣಕ್ಕಾಗಿ ಕೆಲಸ ಮಾಡಿಕೊಡದೇ ಸತಾಯಿಸಲಾಗುತ್ತಿತ್ತು. ಹಣದ ಬೇಡಿಕೆ ಕುರಿತು ಲಿಲಾಧರ ಅವರು ಎಸಿಬಿಗೆ ದೂರು ನೀಡಿದ್ದರು.
ಮಂಗಳವಾರ ಬೆಳಿಗ್ಗೆ ತಹಸೀಲ್ದಾರ್ ತಮ್ಮ ಆನಂದ ನಗರದ ನಿವಾಸದಲ್ಲಿ 15 ಲಕ್ಷ ರೂ.ಲಂಚ ಪಡೆಯುವಾಗ ಎಸಿಬಿ ಎಸ್.ಪಿ ಮಹೇಶ್ ಮೇಘಣ್ಣನವರ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ವಿಚಾರಣೆಯನ್ನು ಮುಂದುವರೆಸಿಸಿರುವ ಅಧಿಕಾರಿಗಳು ತಹಸೀಲ್ದಾರ್ ಗಂಗಾದೇವಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ದಾಳಿ ವೇಳೆ ಎಸಿಬಿ ಪಿಐಗಳಾದ ವೆಂಕಟೇಶ ಯಡಹಳ್ಳಿ, ಶರಣಬಸಪ್ಪ ಕೊಡ್ಲಾ, ಸಿಬ್ಬಂದಿಗಳಾದ ಶ್ರೀಕಾಂತ, ಅನೀಲ, ಕಿಶೋರ, ಕುಶಾಲ ಮತ್ತು ಸರಸ್ವತಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
Bidar: ಗುತ್ತಿಗೆದಾರ ಸಚಿನ್ ಕೇಸ್; ಮಾಹಿತಿ ಪಡೆದ ಡಿಐಜಿಪಿ ಶಾಂತನು ಸಿನ್ಹಾ
Gou Shala: ಆಗ ಭರ್ತಿಯಾಗಿದ್ದ ಗೋಶಾಲೆ ಈಗ ಖಾಲಿಯಾಗಿರುವುದು ಹೇಗೆ?: ಪ್ರಭು ಚವ್ಹಾಣ
Contractor Sachin Case: ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.