ಮಾಣಿಕಪ್ರಭುಗಳ ಜಾತ್ರಾ ಮಹೋತ್ಸವ ಸಂಪನ್ನ
Team Udayavani, Dec 21, 2021, 1:47 PM IST
ಹುಮನಾಬಾದ: ತಾಲೂಕಿನ ಮಾಣಿಕ ನಗರದ ಮಾಣಿಕಪ್ರಭುಗಳ 204ನೇ ಜಯಂತಿ, ದತ್ತ ಜಯಂತಿಹಾಗೂ ಮಾಣಿಕಪ್ರಭುಗಳ ಜಾತ್ರಾಮಹೋತ್ಸವ ಸಂಗೀತ ದರ್ಬಾರ್‌ಹಾಗೂ ಶೋಭಾಯಾತ್ರೆ ಮೂಲಕ ಸೋಮವಾರ ಅಂತ್ಯಗೊಂಡಿತು.
ರವಿವಾರ ರಾತ್ರಿ ಪ್ರಭು ಸಂಸ್ಥಾನದಲ್ಲಿ ಡಾ| ಜ್ಞಾನರಾಜ ಮಾಣಿಕಪ್ರಭುಗಳುರಾಜಸಿಂಹಾಸನದ ಮೇಲೆ ಆಸೀನರಾಗಿವಿವಿಧ ಧಾರ್ಮಿಕ ಕಾರ್ಯಗಳನ್ನುಪೂರ್ಣಗೊಳಿಸಿದರು. ನಂತರಪ್ರಭು ಸಂಸ್ಥಾನದ ಕಾರ್ಯದರ್ಶಿಆನಂದರಾಜ ಪ್ರಭುಗಳು ಒಂದುವರ್ಷಗಳ ಕಾಲ ನಡೆದ ವಿವಿಧ ಕಾರ್ಯಗಳ ಕುರಿತು ವಿವರಿಸಿದರು.
ಸಂಸ್ಥಾನದ ಅಡಿಯಲ್ಲಿ ನಡೆಯುತ್ತಿರುವದಿ| ಮಾಣಿಕ ಪಬ್ಲಿಕ್ ಶಾಲೆಆರಂಭಗೊಂಡು 50ನೇ ವರ್ಷಾಚರಣೆ ಫೆ.1ರಂದು ಅದ್ದೂರಿಯಾಗಿನಡೆಯಲ್ಲಿದೆ. ಪ್ರಭು ಸಂಸ್ಥಾನಸಂಗೀತದಿಂದ ಗುರುತಿಸಿಕೊಂಡಿದ್ದು,ದೇಶದ ಖ್ಯಾತ ಸಂಗೀತ ಕಲಾವಿದರುಪ್ರಭುಗಳ ಸಂಜೀವಿನಿ ಸಮಾಧಿ ಎದುರಿಗೆ ಸೇವೆ ಸಲ್ಲಿಸಿದ್ದಾರೆ. ಪ್ರತಿವರ್ಷ ಅನೇಕ ಸಂಗೀತ ಕಲಾವಿದರುಇಲ್ಲಿಗೆ ಭೇಟಿ ನೀಡಿ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಇದೇ ವೇಳೆ ಪರಂಪರೆಯಂತೆ ಸಂಸ್ಥಾನಕ್ಕೆ ವಿಶೇಷ ಸೇವೆ ಸಲ್ಲಿಸಿದಭಕ್ತರಿಗೆ ಮಾಣಿಕ ಗೌರವ ಪುರಸ್ಕಾರನೀಡಿ ಸನ್ಮಾನಿಸಲಾಯಿತು. ಈ ಪೈಕಿ ಮಾಣಿಕರಾವ ಆಗ್ರಹಾರಕರ್, ರಾಮಬಿದಾವಂತ ಹಾಗೂ ಡಾ| ಸುನೀಲಬಿದಾವಂತ ದುಬಲಗುಂಡಿ, ಮಧುಕರಮಹರಾಜಬಸವಕಲ್ಯಾಣ,ಕೇಶವರಾವನಿಟ್ಟೂರಕರ್ ಅವರಿಗೆ ಮಾಣಿಕ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಮಹಾರಾಷ್ಟ್ರ ಪುಣೆಯ ವಿಜಯ ಕೊಪ್ಪರಕರ್, ಪಂಡಿತ ಜಯಂತ,ಪಂಡಿತ ಶ್ರೀಪಾದ ಹೆಗೆಡೆ, ಪಂಡಿತಅಜಯ ಸುಗಾಂವಕರ್ ಗಾಯನ ಸೇವೆಸಲ್ಲಿಸಿದರು. ಪಂಡಿತ ಜಾಧವ ಸತಾರಾಶಹನಾಯಿ ವಾದನ ಸೇವೆ ಸಲ್ಲಿಸಿದರು.ತೆಲಂಗಾಣ ಜಹಿರಾಬಾದ್‌ನ ಕು|ಇಶೀತಾ ಮತ್ತು ಈಶಾನಿ ಕುಲಕರ್ಣಿ ಭರತನಾಟ್ಯ ಪ್ರದರ್ಶನ ಸೇವೆ ಸಲ್ಲಿಸಿದ್ದು, ಇನ್ನೂ ಅನೇಕ ಕಲಾವಿದರು ಸಂಗೀತ ದರ್ಬಾರ್‌ನಲ್ಲಿ ಸಂಗೀತ ಸೇವೆ ಸಲ್ಲಿಸಿ ಪ್ರಭುಗಳಿಗೆ ನಮನ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.