22 ಕುಶಲಕರ್ಮಿಗಳ ಆಯ್ಕೆ
Team Udayavani, Sep 11, 2017, 12:40 PM IST
ಬೀದರ: ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಸಹಯೋಗದಲ್ಲಿ ಶನಿವಾರ ಹೈದ್ರಾಬಾದಿನ ಟಾಟಾ ಅಡ್ವಾನ್ಸ್ ಕಂಪನಿಯಿಂದ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ 24 ಕುಶಲಕರ್ಮಿಗಳು ಆಯ್ಕೆಯಾಗಿದ್ದಾರೆ.
ತೆಲಂಗಾಣ, ಮಹಾರಾಷ್ಟ್ರ ಮತ್ತು ಕರ್ನಾಟಕದ ಹಲವು ಜಿಲ್ಲೆಗಳ ಫಿಟ್ಟರ್‌ನಲ್ಲಿ ಅಪ್ರಂಟಿಶಿಪ್ ಪಾಸಾದ ಸುಮಾರು 74
ಕುಶಲಕರ್ಮಿಗಳಲ್ಲಿ 18 ಜನರಿಗೆ ನೌಕರಿ ಹಾಗೂ 4 ಕುಶಲಕರ್ಮಿಗಳಿಗೆ ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಯಿತು.
ಕಂಪನಿ ಉಪ ವ್ಯವಸ್ಥಾಪಕ ಮುನೀಂದ್ರ ಮಾತನಾಡಿ, ಕಂಪನಿ ಶಿಸ್ತು ಬದ್ಧ ಹಾಗೂ ಅಚ್ಚುಕಟ್ಟು ತನಕ್ಕೆ ಬೆಲೆ ನೀಡುತ್ತದೆ. ಚಿಕ್ಕ-ಚಿಕ್ಕ ವಸ್ತುಗಳ ಉತ್ಪಾದಕತೆಯಲ್ಲಿ ಗುಣಾತ್ಮಕ ಕಾಪಾಡುವುದು ಕುಶಲಕರ್ಮಿಗಳ ಕರ್ತವ್ಯ. ನಮ್ಮಲ್ಲಿ ಕ್ರಿಯಾತ್ಮಕ ಕೆಲಸಕ್ಕೆ ಉತ್ತೇಜನ ನೀಡಲಾಗುವುದು. ನಾವು ಅಂಕಗಳಿಗೆ ಆದ್ಯತೆ ನೀಡದೆ, ಪ್ರಾಯೋಗಿಕ ಕೌಶಲ ಪರಿಣತಿಗೆ ಆದ್ಯತೆ ನೀಡುತ್ತೇವೆ ಎಂದು ಹೇಳಿದರು.
ಕಾರ್ಖಾನೆ ಅಧಿಕಾರಿ ಫಿರೋಜ್ ಮಾತನಾಡಿ, ಕೆಲ ಮಕ್ಕಳಲ್ಲಿ ತುಂಬ ಒಳ್ಳೆಯ ಕೌಶಲ ಬಹಳಷ್ಟಟ್ಟಿದೆ. ಆದರೆ ಬೀದರಲ್ಲಿ
ಕೈಗಾರಿಕೆಗಳಿರದ ಕಾರಣ ಬಹುಶಃ ತಾಂತ್ರಿಕ ಮಾರ್ಗದರ್ಶನದ ಕೊರತೆ ಎದ್ದು ಕಾಣುತ್ತಿದೆ. ನಾವು ಸುಮಾರು ಕಡೆ ಕ್ಯಾಂಪಸ್ ಆಯೋಜನೆ ಮಾಡಿದಾಗ ಅನೇಕ ಮಾನಸಿಕ ಒತ್ತಡ ಸರ್ವೇ ಸಾಮಾನ್ಯ. ಆದರೆ ಇಲ್ಲಿಯ ಕ್ಯಾಂಪಸ್‌ನಲ್ಲಿ ಒತ್ತಡ ರಹಿತವಾದ ಸಂದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು ಎಂದು ಹೇಳಿದರು.
ನೌಕರಿಗೆ ಆಯ್ಕೆಯಾದವರಿಗೆ 14,000 ರೂ. ಸಂಬಳ ಜತೆಗೆ ಕಡಿಮೆ ದರದಲ್ಲಿ ಊಟ ಹಾಗೂ ವೈದ್ಯಕೀಯ ಚಿಕಿತ್ಸೆ ವ್ಯವಸ್ಥೆ ಒದಗಿಸಲಾಗುವುದು ಹೇಳಿದರು. ಕ್ಯಾಂಪಸ್ ಸಂದರ್ಶನ ಸಮಾರೋಪಲ್ಲಿ ಸಂಸ್ಥೆ ಪ್ರಾಚಾರ್ಯ ಶಿವಶಂಕರ ಟೋಕರೆ ಮಾತನಾಡಿ, ಈವರೆಗೆ ಜಿಲ್ಲೆಯ ಮಕ್ಕಳು ಬೇರೆ-ಬೇರೆ ಜಿಲ್ಲೆಗಳಿಗೆ, ರಾಜ್ಯಕ್ಕೆ ಹೋಗಿ ಸಂದರ್ಶನ ಕೊಡುವ
ಕಾಲವೊಂದಿತ್ತು.
ಆದರೆ ಈಗ ಅನೇಕ ಕಡೆಗಳಿಂದ ಬೀದರ ಐಟಿಐಗೆ ಸಂದರ್ಶನಕ್ಕೆ ಬಂದು ನೌಕರಿ ಪಡೆಯುತ್ತಿರುವುದು ಒಂದು ಅಭಿಮಾನ ಸಂಗತಿಯಾಗಿದೆ ಎಂದು ಹೇಳಿದರು. ರಮೇಶ ಪೂಜಾರಿ, ಎನ್‌ಎಸ್‌ಎಸ್ ಅಧಿಕಾರಿ ಯೂಸುಫ್‌ಮಿಯ್ಯ ಜೋಜನಾ, ಬಸವರಾಜ ಐಸಪುರೆ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.