ಜನರಿಗೆ ಕಚ್ಚಿದ 25 ಮಂಗ ಸೆರೆ
Team Udayavani, Feb 21, 2018, 12:26 PM IST
ಬಸವಕಲ್ಯಾಣ: ಬೆಟಬಾಲಕುಂದಾ ಗ್ರಾಮದಲ್ಲಿ ಕೆಲ ದಿನಗಳಿಂದ ಮಂಗಗಳು ಗ್ರಾಮಸ್ಥರ ನಿದ್ದೆಗೆಡಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮಂಗಗಳ ಹಿಡಿಯುವ ಕಾರ್ಯಾಚರಣೆ ಕೈಗೊಂಡಿದ್ದು, ಸುಮಾರು 25 ಮಂಗಗಳನ್ನು
ಹಿಡಿಯುವಲ್ಲಿ ಯಶಸ್ವಿಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಕರೆಯ ಮೇರೆಗೆ ಮಹಾರಾಷ್ಟ್ರದ ಮಿರಜ್‌ನಿಂದ ಆಗಮಿಸಿದ ಶಬ್ಬೀರ ಹನೀಫ್ ಶೇಖ್ ನೇತೃತ್ವದ ಇಬ್ಬರು ಪರಿಣಿತರ ತಂಡ ಮಂಗಳವಾರ ಗ್ರಾಮಕ್ಕೆ ಆಗಮಿಸಿ, ಕೆಲವೆ ಗಂಟೆಗಳಲ್ಲಿ 25 ಮಂಗಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಗ್ರಾಮದ ವ್ಯಾಪ್ತಿಯ ಗುಡ್ಡದ ಪ್ರದೇಶದಲ್ಲಿ ವಾಸವಾಗಿರುವ ಮಂಗಳನ್ನು ಹಿಡಿಯಲು ಬಲೆ ಬೀಸಲಾಗಿತ್ತು. ಪಂಜರದಲ್ಲಿ
ಮಂಗಗಳಿಗೆ ಇಷ್ಟವಾದ ತಿಂಡಿ ಇಡಲಾಗಿತ್ತು. ಒಂದೊಂದಾಗಿ ಮಂಗಗಳು ಪಂಜರದಲ್ಲಿ ಸೆರೆಯಾದವು. ದಾಳಿ ನಡೆಸುತ್ತಿದ್ದ ಒಂದು ಮಂಗ ಹಾಗೂ ಇದರ ಟೋಲಿಯಲ್ಲಿ ಇದ್ದ 25 ಮಂಗಗಳು ಬಲೆಗೆ ಬಿದ್ದಿದ್ದು, ಉಳಿದ ಮಂಗಗಳ ಸೆರೆಗಾಗಿ ಕಾರ್ಯಾಚರಣೆ ಮುಂದುವರಿಸಲಾಗಿದೆ.
ಗ್ರಾಮದಲ್ಲಿ ಎರಡು ವಾರಗಳ ಹಿಂದೆ ಮಂಗವೊಂದು ದಾಳಿ ನಡೆಸಿ ಸುಮಾರು 20ಕ್ಕೂ ಹೆಚ್ಚು ಜನರಿಗೆ ಕಡಿದು ಗಾಯಗೊಳಿಸಿತ್ತು. ಅಂದು ಕಾರ್ಯಾಚರಣೆ ನಡೆಸಿದ ಇಲಾಖೆಯ ತಂಡ ದಾಳಿ ನಡೆಸುತ್ತಿದ್ದ ಮಂಗವನ್ನು
ಹಿಡಿದು ಜನರು ನಿಟ್ಟುಸಿರು ಬಿಡುವಂತೆ ಮಾಡಿದರು. ಆದರೆ ಗ್ರಾಮದಲ್ಲಿ ಇದ್ದ ಮಂಗಗಳು ಒಂದು ವಾರದಿಂದ ಇದಕ್ಕಿದ್ದಂತೆ ಮತ್ತೆ ಜನರ ಮೇಲೆ ದಾಳಿ ನಡೆಸಿ ಸುಮಾರು 20ಕ್ಕೂ ಅಧಿಕ ಜನರಿಗೆ ಕಚ್ಚಿದ್ದು, ಜನರಲ್ಲಿ ಮತ್ತೆ ಆತಂಕ ಮೂಡಿಸಿತ್ತು.
ಗ್ರಾಮದಲ್ಲಿ ಮತ್ತೆ ಮಂಗಗಳು ದಾಳಿ ಮಾಡುತ್ತಿದೆ ಎನ್ನುವ ಮಾಹಿತಿ ಸಿಕ್ಕ ನಂತರ ಅರಣ್ಯ ಇಲಾಖೆಯ ಇಲ್ಲಿಯ ಆರ್‌ಎಫ್‌ಒ ಅಲಿಯೋದ್ದಿನ್ ನೇತೃತ್ವದಲ್ಲಿ ಇಲಾಖೆಯ ಸಿಬ್ಬಂದಿ ಕಾರ್ಯಚರಣೆ ನಡೆಸಿ, ದಾಳಿ ನಡೆಸುತಿದ್ದ ಮಂಗವನ್ನು ಗುರುತಿಸಿ ಹಿಡಿಯುವಲ್ಲಿ ಯಶಸ್ವಿಯಾದರು. ಎಲ್ಲಾ ಮಂಗಗಳನ್ನು ಹಿಡಿಯುವ ವರೆಗೆ ತಂಡದವರು ಗ್ರಾಮದಲ್ಲಿಯೇ ಉಳಿದುಕೊಳ್ಳಲಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
60ಜನರಿಗೆ ಗಾಯ: ಬೆಟಬಾಲಕುಂದಾ ಗ್ರಾಮದಲ್ಲಿ ಮಂಗಗಳ ದಾಳಿಯಿಂದ ಗಾಯಗೊಂಡವರ ಸಂಖ್ಯೆ 60ಕ್ಕೆ
ತಲುಪಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಕಳೆದ ಗುರುವಾರದಿಂದ ಇದುವರೆಗೆ ಸುಮಾರು 20 ಜನರಿಗೆ
ಮಂಗಗಳು ಕಚ್ಚಿವೆ. ಒಟ್ಟು ಸುಮಾರು 60 ಜನ ಗಾಯಗೊಂಡಿದ್ದು, ಇವರಲ್ಲಿ ಬಹುತೇಕ ಜನ ಬಸವಕಲ್ಯಾಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ. ಇನ್ನು ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಮಾಗಿಯ ಚಳಿಯಲ್ಲಿ ಮ್ಯಾರಥಾನ್ ಆಕರ್ಷಣೆ; ನಟ ಸೋನು ಸೂದ್ ಚಾಲನೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
MUST WATCH
ಹೊಸ ಸೇರ್ಪಡೆ
Cast Census Report: ಹಲವು ವಿರೋಧಗಳ ನಡುವೆಯೂ ಜಾತಿ ಗಣತಿ ರಹಸ್ಯ ನಾಳೆ ಬಯಲು?
Congress Office: ಬೆಳಗಾವಿ ಸಚಿವರ ಪ್ರತಿಷ್ಠೆಯ ಜಟಾಪಟಿ: ಸಿಎಂ ಸಿದ್ದರಾಮಯ್ಯ ಅಂಗಳಕ್ಕೆ?
Western Ghat: ಆರು ಜಿಲ್ಲೆಗಳಲ್ಲಿ ಭೂಕುಸಿತ ತಡೆಗೆ 400 ಕೋಟಿ ರೂ. ಯೋಜನೆ
Congress Dinner Meeting: ಹೈಕಮಾಂಡ್ ಮಧ್ಯ ಪ್ರವೇಶ ಪರಿಣಾಮ? ಔತಣಕೂಟ ಬಣ ಮೆತ್ತಗೆ?
Rave Party: ನಟಿ ರಾಗಿಣಿ ದ್ವಿವೇದಿ ವಿರುದ್ಧದ ಪ್ರಕರಣ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.