ಬೀದರ್ ಜಿಲ್ಲೆಯಲ್ಲಿ ಸೋಂಕಿಗೆ ಮತ್ತೆ 3 ಬಲಿ ; 57ಕ್ಕೇರಿದ ಸಾವಿನ ಸಂಖ್ಯೆ
1004 ಜನರ ಪರೀಕ್ಷಾ ವರದಿ ಬಾಕಿ
Team Udayavani, Jul 19, 2020, 8:01 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೀದರ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನ ಮರಣ ಮೃದಂಗ ಮುಂದುವರೆದಿದೆ.
ರವಿವಾರ ಮತ್ತೆ ಮೂವರು ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 57ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಪಾಸಿಟಿವ್ ಸಂಖ್ಯೆಯೂ ಹೆಚ್ಚುತ್ತಿದ್ದು, 45 ಜನ ಹೊಸಬರಲ್ಲಿ ವೈರಾಣು ಪತ್ತೆಯಾಗಿದೆ.
ಸೋಂಕಿನಿಂದ ಸಾವನ್ನಪ್ಪಿರುವ ಮೂವರಲ್ಲಿ ಬೀದರ ನಗರದ ಮಾಂಗರವಾಡಿ ಗಲ್ಲಿ ಮತ್ತು ಓಲ್ಡ್ ಸಿಟಿಯ ಮನಿಯಾರ್ ತಾಲೀಂ ಬಡಾವಣೆಯ ತಲಾ ಒಬ್ಬರು ಹಾಗೂ ಬೀದರ ತಾಲೂಕಿನ ಜಮೀಸ್ತಾನಪುರ ಗ್ರಾಮದ ಒಬ್ಬರು ಸೇರಿದ್ದಾರೆ.
60 ವರ್ಷದ ವ್ಯಕ್ತಿ (ಪಿ-ಬಿಡಿಆರ್ 1370) ಉಸಿರಾಟದ ತೊಂದರೆ, 70 ವರ್ಷದ ಮಹಿಳೆ (ಪಿ-ಬಿಡಿಆರ್ 1371) ಉಸಿರಾಟ ಮತ್ತು ಶಕ್ತಿ ಹೀನತೆ ಹಾಗೂ ೫೨ ವರ್ಷದ ವ್ಯಕ್ತಿ (ಪಿ -ಬಿಡಿಆರ್ 1321) ಉಸಿರಾಟದ ತೊಂದರೆ ಹಿನ್ನಲೆ ಬ್ರಿಮ್ಸ್‌ಗೆ ದಾಖಲಾಗಿದ್ದು, ಚಿಕಿತ್ಸೆ ಫಲಿಸದೇ ಸಾವನನ್ನಪ್ಪಿದ್ದಾರೆ, ಬಿಪಿ, ಶುಗರ್‌ನಿಂದ ಬಳಲುತ್ತಿದ್ದ ಇವರಲ್ಲಿ ಸೋಂಕು ದೃಢಪಟ್ಟಿದೆ.
ರವಿವಾರ ಪತ್ತೆಯಾಗಿರುವ 45 ಹೊಸ ಕೇಸ್‌ಗಳಲ್ಲಿ ಬೀದರ ನಗರ ಹಾಗೂ ತಾಲೂಕಿನ 21 ಜನ ಸೇರಿದ್ದರೆ ಬಸವಕಲ್ಯಾಣ ತಾಲೂಕು 7, ಹುಮನಾಬಾದ ತಾಲೂಕು 13 ಮತ್ತು ಭಾಲ್ಕಿ ತಾಲೂಕು 3 ಮತ್ತು ಕಮಲನಗರ ತಾಲೂಕಿನಲ್ಲಿ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.
ಬೀದರ ನಗರ 3, ಹಾರೂರಗೇರಿ 1, ಬಸವನಗರ 1, ಜನವಾಡಾ 1, ಚೌಬಾರಾ 1, ಬ್ರಿಮ್ಸ್ ಆಸ್ಪತ್ರೆ 2, ಪತ್ತೆದರ್ವಾಜಾ ಶಿವಪುರ ಕಾಲೊನಿ 1, ಮಂಗಲಪೇಟ 1, ವಿದ್ಯಾನಗರ ಕಾಲೊನಿ 5, ರಾಂಪೂರೆ ಕಾಲೊನಿ 1, ದೀನ್ ದಯಾಳ್ ನಗರ 1, ಪನ್ಸಾಲ್ ತಾಲೀಂ 1, ಮನಿಯಾರ್ ತಾಲೀಂ 1 ಹಾಗೂ ನಾವದಗೇರಿ 1 ಪ್ರಕರಣಗಳಿವೆ.
ಹುಮನಾಬಾದ್ ಪಟ್ಟಣದ ನೂರ್ ಖಾ ಅಖಾಡಾದ 11, ಪಿಡಬ್ಲ್ಯೂಡಿ ಕ್ವಾರ್ಟರ್ಸ್ 1, ಪೊಲೀಸ್ ಕ್ವಾಟರ್ಸ್ 1 ಸೇರಿ 13, ಬಸವಕಲ್ಯಾಣ ತಾಲೂಕಿನ ನಾರಾಯಣಪುರ 1, ಶಾಪುರ ಗಲ್ಲಿ 1, ರಾಜೋ 1, ಬಸವಕಲ್ಯಾಣ ನಗರದ 3, ಕಾಳಿ ಗಲ್ಲಿಯ 1 ಸೇರಿ ಒಟ್ಟು 7, ಭಾಲ್ಕಿ ತಾಲೂಕಿನ ರುದನೂರು 1, ಕುಗ್ಲಿ 1, ನಾವದಗಿ 1 ಸೇರಿ 3, ಕಮಲನಗರ ತಾಲೂಕಿನ ಸಂಗಮ ಗ್ರಾಮದಲ್ಲಿ 1 ಕೇಸ್ ಪತ್ತೆಯಾಗಿವೆ.
ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ 1378ಕ್ಕೆ ಏರಿಕೆಯಾಗಿದೆ. ರವಿವಾರ 21 ಜನ ಸೇರಿ 740 ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 579 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 45963 ಜನರು ಪರೀಕ್ಷೆಗೆ ಒಳಪಟ್ಟಿದ್ದು, 43581 ಮಂದಿಯದ್ದು ನೆಗೆಟಿವ್ ಬಂದಿವೆ. ಜಿಲ್ಲೆಯ ಇನ್ನೂ 1004 ಜನರ ವರದಿ ಬರಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.