ಚುನಾವಣೆಗೆ 326 ಮತಗಟ್ಟೆಗಳ ಗುರುತು
Team Udayavani, Mar 23, 2021, 7:26 PM IST
ಬೀದರ: ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆ ಹಿನ್ನಲೆ ನಗರದ ಜಿಲ್ಲಾ ಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಚುನಾವಣಾ ಮತಯಂತ್ರಗಳ ರ್ಯಾಂಡಾಮಿಜೇಷನ್ ಪ್ರಕ್ರಿಯೆ ನಡೆಯಿತು.
ಈ ವೇಳೆ ಮಾತನಾಡಿದ ಜಿಲ್ಲಾ ಧಿಕಾರಿ ಆರ್. ರಾಮಚಂದ್ರನ್ ಅವರು, ಬಸವಕಲ್ಯಾಣ ಕ್ಷೇತ್ರ ಉಪ ಚುನಾವಣೆಗೆ 326 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಈ ಮತಗಟ್ಟೆಗಳಿಗೆ 457 ಬಿಯು, 457 ಸಿಯು ಮತ್ತು 489 ವಿವಿಪ್ಯಾಟ್ ಯಂತ್ರಗಳನ್ನು ಒದಗಿಸಲಾಗುತ್ತಿದೆ. ಚುನಾವಣಾ ಪ್ರಕ್ರಿಯೆಯು ಸುಗಮವಾಗಿ ನಡೆಯುವ ನಿಟ್ಟಿನಲ್ಲಿ ಬಿಯು ಮತ್ತು ಸಿಯುಗಳನ್ನು ಶೇ.40ರಷ್ಟು ಮತ್ತು ವಿವಿ ಪ್ಯಾಟ್‌ಗಳನ್ನು ಶೇ.50ರಷ್ಟು ಹೆಚ್ಚಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮ ಪಟ್ಟಿ ಮುಂಚಿತವಾಗಿ ಸಲ್ಲಿಸಿ: ಬೀದರ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ದಿನೇದಿನೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸಬೇಕಿದೆ. ರಾಜಕೀಯ ಪಕ್ಷಗಳು ಕಾರ್ಯಕ್ರಮಗಳನ್ನು ಮಾಡುವುದಾದರೆ ಅವುಗಳ ಪಟ್ಟಿಯನ್ನು ಮುಂಚಿತವಾಗಿ ಸಲ್ಲಿಸಬೇಕು. ತೆರೆದ ಪ್ರದೇಶದಲ್ಲಿ ಕಾರ್ಯಕ್ರಮ ನಡೆಸಿದರೆ 500 ಜನರಿಗೆ ಮತ್ತು ಸಭಾಂಗಣದಂತಹ ಮುಚ್ಚಿದ ಪ್ರದೇಶದಲ್ಲಿ ಕಾರ್ಯಕ್ರಮ ನಡೆಸಿದರೆ 200ಕ್ಕಿಂತ ಹೆಚ್ಚಿನ ಜನರನ್ನು ಸೇರಿಸಬಾರದು. ನಿಯಮ ಪಾಲನೆ ಮಾಡದೇ ಕಾರ್ಯಕ್ರಮ ನಡೆಸುವುದು ಕಂಡು ಬಂದಲ್ಲಿ ಮುಂದಿನ ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ದರಪಟ್ಟಿಗೆ ಒಪ್ಪಿಗೆ: ಚುನಾವಣಾ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಬಳಸುವ ಖುರ್ಚಿ, ಬ್ಯಾನರ್, ಪಾಂಪಲೇಟ್ ಸೇರಿದಂತೆ ಇನ್ನೀತರ ಸಾಮಗ್ರಿಗಳಿಗೆ ಸಂಬಂ ಧಿಸಿದ ದರಪಟ್ಟಿಗೆ ಇದೆ ವೇಳೆ ಸಭೆಯಲ್ಲಿ ಹಾಜರಿದ್ದ ರಾಜಕೀಯ ಪಕ್ಷಗಳ ಮುಖಂಡರಿಂದ ಒಪ್ಪಿಗೆ ಪಡೆಯಲಾಯಿತು. ಈ ಸಂದರ್ಭದಲ್ಲಿ ಅಪರ ಜಿಲ್ಲಾ ಧಿಕಾರಿ ರುದ್ರೇಶ ಗಾಳಿ ಮತ್ತು ಇನ್ನಿತರರ ಅ ಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Robbery: ಬೀದರ್ ದರೋಡೆ ಬಿಹಾರಿ ಗ್ಯಾಂಗ್ ಕೃತ್ಯ: ಪೊಲೀಸರು
Air Balloon: ಹೈದರಾಬಾದ್‌ನಲ್ಲಿ ಹಾರಿಸಿದ ‘ಏರ್ ಬಲೂನ್’ ಹುಮನಾಬಾದ್ ನಲ್ಲಿ ಬಿತ್ತು…
ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕ ಸರಕಾರದಿಂದ ಅಸಹಕಾರ: ಎಚ್.ಡಿ.ಕುಮಾರಸ್ವಾಮಿ
Bidar ದರೋಡೆ ಕೇಸ್: ಆರೋಪಿಗಳ ಗುರುತು ಪತ್ತೆ, ಶೀಘ್ರ ಬಂಧನ: ಎಡಿಜಿಪಿ ಹರಿಶೇಖರನ್
Swadesh Darshan scheme: ಕೇಂದ್ರದ ಸ್ವದೇಶ್ ದರ್ಶನ್ ಯೋಜನೆಗೆ ಬೀದರ್, ಉಡುಪಿ ಆಯ್ಕೆ
MUST WATCH
ಹೊಸ ಸೇರ್ಪಡೆ
ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.