ಮತ್ತೆ 62 ಮಂದಿಗೆ ಸೋಂಕು
Team Udayavani, Jul 26, 2020, 9:49 AM IST
ಬೀದರ: ಗಡಿ ನಾಡು ಬೀದರನಲ್ಲಿ ಕೋವಿಡ್-19 ಸೋಂಕಿನ ಆರ್ಭಟ ಮುಂದುವರಿದಿದ್ದು, ಶನಿವಾರ 62 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಈಗ 1777ಕ್ಕೆ ಏರಿಕೆ ಕಂಡಿದೆ.
ಬೀದರ ತಾಲೂಕು 22, ಬಸವಕಲ್ಯಾಣ 11, ಭಾಲ್ಕಿ 7, ಔರಾದ-ಕಮಲನಗರದಲ್ಲಿ 8 ಮತ್ತು ಹುಮನಾಬಾದ್-ಚಿಟಗುಪ್ಪಾ 14 ಸೇರಿ ಒಟ್ಟು 62 ಪಾಸಿಟಿವ್ ಬೆಳಕಿಗೆ ಬಂದಿವೆ. ಇಂದಿನ 62 ಪಾಸಿಟಿವ್ ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1777ಕ್ಕೆ ಏರಿದೆ. ಈವರೆಗೆ 69 ಜನರು ಮೃತಪಟ್ಟಿದ್ದಾರೆ. ಶನಿವಾರ 25 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 1204ಕ್ಕೇರಿದೆ. ಸದ್ಯಕ್ಕೆ 500 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೀದರ ನಗರದ ಕೆಎಚ್ಬಿ ಕಾಲೋನಿ, ಗುರುನಾನಕ್ ಕಾಲೋನಿ, ಆಯಾಸಪುರ, ಕೃಷಿ ಕಾಲೋನಿ, ಶಿವನಗರ ದಕ್ಷಿಣ, ಹೌಸಿಂಗ್ ಬೋರ್ಡ್ ಕಾಲೋನಿ, ಶಿವನಗರ ಉತ್ತರ, ತಳವಾಡ, ನೌಬಾದ್. ಭಾಲ್ಕಿ ತಾಲೂಕಿನ ಕುಡ್ಲಿ, ಹಿರೇಮಠ ಗಲ್ಲಿ, ಬಾಜೋಳಗಾ, ಮೆಹಕರ್, ಔರಾದ್ ತಾಲೂಕಿನ ಬಳತ್, ತೋರಣಾ ಹಾಗೂ ಕಮಲನಗರ ತಾಲೂಕಿನ ಠಾಣಾ ಕುಶನೂರು, ಡೋಣಗಾಂವ್, ಕಮಲನಗರ ಪಟ್ಟಣದಲ್ಲಿ ಪಾಸಿಟಿವ್ ಬಂದಿದೆ.
ಹುಮನಾಬಾದ್ ಪಟ್ಟಣ, ತಾಲೂಕಿನ ಹುಡಗಿ, ತಾಲೂಕು ಆಸ್ಪತ್ರೆಯ ಕ್ವಾಟರ್, ಹಳ್ಳಿಖೇಡ, ಶಿವಪುರ ಗಲ್ಲಿ, ಧುಮ್ಮನಸೂರು ಗ್ರಾಪಂ ಸಮೀಪ, ಕನಕಟ್ಟಾ. ಬಸವಕಲ್ಯಾಣ ತಾಲೂಕಿನ ಬೇಲೂರ, ಮಲ್ಲಿಕಾರ್ಜುನ ವಾಡಿ, ಬೆಟಬಾಲಕುಂದಾ, ಮಂಠಾಳ, ಗೊರಟಾ, ಘೋಟಾಳ, ಜೈ ಶಂಕರ ಕಾಲೋನಿ, ಬಸವಕಲ್ಯಾಣ ನಗರ, ಖಂಡಾಳ ಗ್ರಾಮದಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ
ಗುತ್ತಿಗೆದಾರ ಸಚಿನ್ ಕೇಸ್: ಪ್ರಕರಣ ಮುಚ್ಚಿಹಾಕಲು ಸರ್ಕಾರದ ಯತ್ನ: ಸಹೋದರಿ ಆರೋಪ
Bidar: ಸಚಿನ್ ಆತ್ಮಹತ್ಯೆ ಪ್ರಕರಣ; ನಿಗೂಢ ಸಾವಿನ ತನಿಖೆ, ಮೃತ ಕುಟುಂಬಕ್ಕೆ ಪರಿಹಾರ:ಆಗ್ರಹ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.