ಬೀದರ್: ಕೋವಿಡ್ 19 ಸೋಂಕಿಗೆ ನಾಲ್ವರ ಸಾವು, 65 ಪಾಸಿಟಿವ್ ಪ್ರಕರಣಗಳು
Team Udayavani, Aug 10, 2020, 12:51 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೀದರ್: ಜಿಲ್ಲೆಯಲ್ಲಿ ತನ್ನ ಆರ್ಭಟವನ್ನು ಮುಂದುವರೆಸಿರುವ ಕೋವಿಡ್ 19 ಸೋಂಕು ರವಿವಾರ ಮತ್ತೆ ನಾಲ್ವರನ್ನು ಬಲಿ ಪಡೆದುಕೊಂಡಿದೆ.
ಈ ಮೂಲಕ ಕಳೆದ 7 ದಿನಗಳಲ್ಲಿ 18 ಜನರು ಜಿಲ್ಲೆಯಲ್ಲಿ ಈ ಮಹಾಮಾರಿಗೆ ಬಲಿಯಾಗಿದ್ದಾರೆ. ಮತ್ತು ಇದೀಗ ಜಿಲ್ಲೆಯಲ್ಲಿ ಈ ಸೋಂಕಿಗೆ ಮೃತಪಟ್ಟವರ ಸಂಖ್ಯೆ ಶತಕದಂಚಿಗೆ ತಲುಪಿದೆ.
ಮಾತ್ರವಲ್ಲದೇ ಇಂದು ಒಂದೇ ದಿನ ಜಿಲ್ಲೆಯಲ್ಲಿ 65 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
ಬೀದರ ತಾಲೂಕಿನ 69 ಮತ್ತು 75 ವರ್ಷ ವರ್ಷದ ವ್ಯಕ್ತಿಗಳು, ಕಮಲನಗರ ತಾಲೂಕಿನ 80 ವರ್ಷದ ವೃದ್ಧ ಮತ್ತು ಬಸವಕಲ್ಯಾಣ ತಾಲೂಕಿನ 55 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಕೆಮ್ಮು, ಜ್ವರ ಹಾಗೂ ತೀವ್ರ ಉಸಿರಾಟದ ತೊಂದರೆ ಹಿನ್ನಲೆ ಬ್ರಿಮ್ಸ್‌ನ ಕೋವಿಡ್ 19 ಆಸ್ಪತ್ರೆಗೆ ದಾಖಲಾಗಿದ್ದರು ಇಲ್ಲಿ ಇವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಎಲ್ಲರಲ್ಲಿಯೂ ಕೋವಿಡ್ 19 ವೈರಾಣು ಪತ್ತೆಯಾಗಿದ್ದು, ಈ ಪೈಕಿ ಕೆಲವರು ರಕ್ತದೊತ್ತಡ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು.
ಇಂದಿನ ಹೊಸ ಸೋಂಕಿತರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಈಗ 2908ಕ್ಕೆ ತಲುಪಿದೆ. ಇಂದು 44 ಜನರು ಸೇರಿ ಇದುವರೆಗೆ 1894 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇನ್ನೂ 913 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.
ಈವರೆಗೆ ಜಿಲ್ಲೆಯ 54,080 ಜನರ ಗಂಟಲ ಮಾದರಿಯ ತಪಾಸಣೆ ಮಾಡಲಾಗಿದ್ದು, ಈ ಪೈಕಿ 50,026 ಮಂದಿಯ ತಪಾಸಣಾ ವರದಿ ನೆಗೆಟಿವ್ ಬಂದಿದ್ದು, ಇನ್ನೂ 1146 ಜನರ ವರದಿ ಬರುವುದು ಬಾಕಿ ಇದೆ.
ತಾಲೂಕುವಾರು ವಿವರ: ಜಿಲ್ಲೆಯಲ್ಲಿ ರವಿವಾರ 25 ಹೊಸ ವೈರಸ್ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಬೀದರ ನಗರ- ತಾಲೂಕಿನ 10 ಜನರಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1066 ಆಗಿದೆ.
ಭಾಲ್ಕಿ ತಾಲೂಕಿನ 21 ಜನರಲ್ಲಿ ಕೋವಿಡ್ 19 ಸೋಂಕು ಖಚಿತವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 365ಕ್ಕೆ ಏರಿಕೆಯಾಗಿದೆ. ಹುಮನಾಬಾದ- ಚಿಟಗುಪ್ಪ ತಾಲೂಕಿನ 18 ಜನರಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 553ಕ್ಕೆ ಏರಿಕೆಯಾಗಿದೆ.
ಔರಾದ್- ಕಮಲನಗರ ತಾಲೂಕಿನ 13 ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ ಒಟ್ಟು 394 ಆಗಿದೆ. ಬಸವಕಲ್ಯಾಣ- ಹುಲಸೂರು ತಾಲೂಕಿನ 3 ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 511ಕ್ಕೆ ಏರಿಕೆ ಕಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.