ಆರಂಭಗೊಳ್ಳದ ಧಾನ್ಯ ಸ್ವಚ್ಛತೆ-ಪ್ಯಾಕಿಂಗ್ ಘಟಕ
ವಿದ್ಯುತ್ ವ್ಯವಸ್ಥೆಗಾಗಿ 17.99 ಲಕ್ಷ ರೂ. ಕ್ರಿಯಾ ಯೋಜನೆ ಹಾಕಿಕೊಂಡು ಕೆಲಸ ಮಾಡಲಾಗಿದೆ.
Team Udayavani, Feb 10, 2021, 6:09 PM IST
ಹುಮನಾಬಾದ: ಪಟ್ಟಣದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಒಂದು ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡ ಧಾನ್ಯ ಸ್ವತ್ಛತೆ, ವರ್ಗೀಕರಣ ಮತ್ತು ಪ್ಯಾಕಿಂಗ್ ಘಟಕ ಪೂರ್ಣ ಪ್ರಮಾಣದಲ್ಲಿ ಸ್ಥಾಪನೆಗೊಂಡು ಎರಡು ವರ್ಷಗಳು ಕಳೆದರೂ ಕೂಡ ಆರಂಭಗೊಂಡಿಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆಗೆ ವಿವಿಧಡೆಯಿಂದ ಬರುವ ರೈತರು, ತಮ್ಮ ವಿವಿಧ ಬಗೆಯ ದವಸ ಧಾನ್ಯಗಳನ್ನು ಸ್ವಯಂ ಚಾಲಿತ ಸ್ವತ್ಛಗೊಳಿಸುವ ಯಂತ್ರದ ಮೂಲಕ ಧಾನ್ಯದಲ್ಲಿ ಮಿಶ್ರಣಗೊಂಡಿರುವ ಮಣ್ಣು, ಧಾನ್ಯದ ಇತರೆ ಪದಾರ್ಥ ವಿಂಗಡಣೆ ಮಾಡುವ ಜೊತೆಗೆ ಸ್ವಯಂ ಚಾಲಿತ ಪ್ಯಾಕಿಂಗ್ ಮೂಲಕ ರೈತರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಸ್ಥಳೀಯ ಎಪಿಎಂಸಿ ಪ್ರಾಂಗಣದಲ್ಲಿ ಕಳೆದ ಎರಡು ವರ್ಷಗಳ ಹಿಂದೆ (ಕ್ಲೀನಿಂಗ್, ಗ್ರೇಡಿಂಗ್ ಹಾಗೂ ಪ್ಯಾಕಿಂಗ್) ಘಟಕ ಪೂರ್ಣ ರೀತಿಯಲ್ಲಿ ಸ್ಥಾಪನೆ
ಮಾಡಲಾಗಿತ್ತು.
ಮಾರುಕಟ್ಟೆ ಪ್ರಾಂಗಣದಲ್ಲಿ 2015-16ನೇ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಘಟಕದ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಸುಮಾರು 43.16 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಮಾಡಲಾಗಿದೆ. ಅಲ್ಲದೆ, ಸ್ವಯಂ ಚಾಲಿತ ಯಂತ್ರಗಳ ಅಳವಡಿಕೆಗಾಗಿ 38.35 ಹಾಗೂ ವಿದ್ಯುತ್ ವ್ಯವಸ್ಥೆಗಾಗಿ 17.99 ಲಕ್ಷ ರೂ. ಕ್ರಿಯಾ ಯೋಜನೆ ಹಾಕಿಕೊಂಡು ಕೆಲಸ ಮಾಡಲಾಗಿದೆ. ಸದ್ಯ ಈಗಾಗಲೇ ಕಟ್ಟಡ ನಿರ್ಮಾಣ ಹಾಗೂ ವಿದ್ಯುತ್ ವ್ಯವಸ್ಥೆಯ ಸಂಪೂರ್ಣ
ಹಣ ಪಾವತಿ ಮಾಡಲಾಗಿದ್ದು, ಯಂತ್ರಗಳು ಅಳವಡಿಸಿದ ವ್ಯಕ್ತಿಗೆ ಇನ್ನು ಶೇ.40ರಷ್ಟು ಹಣ ಪಾವತಿ ಮಾಡಬೇಕಿದೆ ಎಂದು ಎಪಿಎಂಸಿ ಪ್ರಭಾರ ಕಾರ್ಯದರ್ಶಿ ತುಳಸಿರಾಮ ಲಾಖೆ ಮಾಹಿತಿ ನೀಡಿದ್ದಾರೆ.
ಸದ್ಯ ಈವರೆಗೂ ಘಟಕದಲ್ಲಿ ಅಳವಡಿಸಿದ ಯಂತ್ರದ ಪ್ರಾಯೋಗಿಕ ಪರೀಕ್ಷೆ ನಡೆದಿಲ್ಲ ಎಂಬುವುದು ತಿಳಿದು ಬಂದಿದೆ. ತಾಲೂಕಿನ ಬಹುತೇಕ ರೈತರು ಹುಮನಾಬಾದ ಎಪಿಎಂಸಿ ಪ್ರಾಂಗಣದಲ್ಲಿನ ಅಂಗಡಿಗಳಿಗೆ ತಮ್ಮ ಹೊಲದಲ್ಲಿ ಬೆಳೆದ ದವಸ ಧಾನ್ಯ ತೆಗೆದುಕೊಂಡು ಮಾರುಕಟ್ಟೆಗೆ ಬರುತ್ತಾರೆ.
ಚೀಲದಲ್ಲಿ ತುಂಬಿಕೊಂಡು ಬಂದ ಧಾನ್ಯಗಳನ್ನು ವ್ಯಾಪಾರಸ್ಥರು ರಸ್ತೆಯಲ್ಲಿ ಹಾಕಿ ಕೆಲಸಗಾರರಿಂದ ಕಸಕಡ್ಡಿ, ಮಣ್ಣು ವಿಂಗಡಣೆ ಮಾಡುತ್ತಿದ್ದಾರೆ. ಸದ್ಯ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಧಾನ್ಯ ವರ್ಗೀಕರಣ ಮತ್ತು ಪ್ಯಾಕಿಂಗ್ ಘಟಕ ಪ್ರಾರಂಭವಾದರೆ ರೈತರಿಗೆ ಹಾಗೂ ಎಪಿಎಂಸಿ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ ಎಂದು ವ್ಯಾಪರಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಂದಿನ ಒಂದು ವಾರದಲ್ಲಿ ರಾಯಚೂರಿನಿಂದ ಯಂತ್ರ ನೂರಿತ ತಜ್ಞರು, ತಾಂತ್ರಿಕ ವರ್ಗದವರು ಬರುತ್ತಿದ್ದು, ಕ್ಲೀನಿಂಗ್, ಗ್ರೇಡಿಂಗ್ ಹಾಗೂ ಪ್ಯಾಕಿಂಗ್ ಯಂತ್ರವನ್ನು ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಲಾಗುತ್ತಿದೆ. ಘಟಕದ ಕಾರ್ಯ ಹಾಗೂ ನಿರ್ವಹಣೆಗಾಗಿ ಈಗಾಗಲೇ ಮೂರು ಬಾರಿ ಟೆಂಡರ್ ಕರೆಯಲಾಗಿದೆ. ಟೆಂಡರ್‌ನಲ್ಲಿ ಯಾರು ಭಾಗವಹಿಸದ ಕಾರಣ ನನೆಗುದಿಗೆ ಬಿದ್ದಿದೆ. ಇನ್ನೊಂದು ಬಾರಿ ಟೆಂಡರ್ ಕರೆಯುವ ಕೆಲಸ ನಡೆದಿದೆ.
ತುಳಸಿರಾಮ ಲಾಖೆ,
ಪ್ರಭಾರ ಎಪಿಎಂಸಿ ಕಾರ್ಯದರ್ಶಿ
*ದುರ್ಯೋಧನ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Contractor Sachin Case: ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ
ಗುತ್ತಿಗೆದಾರ ಸಚಿನ್ ಕೇಸ್: ಪ್ರಕರಣ ಮುಚ್ಚಿಹಾಕಲು ಸರ್ಕಾರದ ಯತ್ನ: ಸಹೋದರಿ ಆರೋಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.