ನಿವೃತ್ತ ಉಪನ್ಯಾಸಕನ ಸಾಧನೆ
Team Udayavani, Oct 21, 2018, 1:40 PM IST
ಔರಾದ: ಬಾದಲಗಾಂವ ನಿವಾಸಿ ಅಮರೇಶ್ವರ ಕಾಲೇಜಿನ ನಿವೃತ್ತ ಉಪನ್ಯಾಸಕ ಸೂರ್ಯಕಾಂತ ಜಾಧವ ಉಪನ್ಯಾಸಕ ವೃತ್ತಿಯಿಂದ ನಿವೃರಾದರೂ ಕೃಷಿಯಲ್ಲಿ ಉತ್ಸಾಹದಿಂದ ಕೆಲಸ ಮಾಡಿ ಕೈ ತುಂಬಾ ಹಣ ಸಂಪಾದಿವ ಮೂಲಕ ಸ್ಥಳೀಯ ರೈತರಿಗೆ ಮಾದರಿಯಾಗಿದ್ದಾರೆ.
ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿದೆ ಎಂದು ತಾಲೂಕಿನ ರೈತರು ಆತಂಕ ಪಡುತ್ತಿರುವುದು ಒಂದೆಡೆಯಾದರೆ, ಇವರು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶನ ಪಡೆದು ಕಡಿಮೆ ನೀರಿನಲ್ಲೂ ಉತ್ತಮ ಫಸಲು ತೆಗೆದು ತಾಲೂಕಿನ ರೈತರಿಗೆ
ಮಾದರಿಯಾಗಿದ್ದಾರೆ.
ಒಂದು ವರ್ಷದ ಹಿಂದೆಯೇ ಉಪನ್ಯಾಸಕ ವೃತ್ತಿಯಿಂದ ನಿವೃತ್ತಿಯಾಗಿದ್ದ ಸೂರ್ಯಕಾಂತ ಜಾಧವ ಮನೆಯಲ್ಲಿ ಮಕ್ಕಳು, ಕುಟುಂಬದ ಸದಸ್ಯರೊಂದಿಗೆ ವಿಶ್ರಾಂತಿ ಜೀವನ ಕಳೆಯದೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಉತ್ತಮ ಮಾರ್ಗದರ್ಶನ ಹಾಗೂ ಸರ್ಕಾರದ ಪ್ರೊತ್ಸಾಹ ಧನದ ಸಂಪೂರ್ಣ ಲಾಭ ಪಡೆದು ಐದು ಎಕರೆ ಭೂಮಿಯಲ್ಲಿ ವರ್ಷಕ್ಕೆ 14 ಲಕ್ಷ ರೂ. ಸಂಪಾದನೆ ಮಾಡಿ, ಗ್ರಾಮದ ಇನ್ನಿತರ ರೈತರು ಬೆರಗಾಗುವಂತೆ ಮಾಡಿದ್ದಾರೆ.
ಐದು ಎಕರೆ ಭೂಮಿಯಲ್ಲಿ ಜೆ-9 ತಳಿಯ ಬಾಳೆ ಹಣ್ಣಿನ 500 ಸಸಿಗಳನ್ನು ತಂದು ನೆಟ್ಟಿದ್ದರು. ಪ್ರತಿಯೊಂದು ಬಾಳೆ ಹಣ್ಣಿನ ಮರಕ್ಕೆ 20ರಿಂದ 25 ಕೆಜಿ ಬಾಳೆಹಣ್ಣು ಇಳುವರಿಯಾಗುತ್ತಿವೆ. ಐದು ಎಕರೆ ಭೂಮಿಯಲ್ಲಿ ವರ್ಷಕ್ಕೆ 60-70 ಟನ್ ಬಾಳೆ ಇಳುವರಿ ಬರುತ್ತಿದೆ. ವರ್ಷದ ಆದಾಯ 14-15 ಲಕ್ಷವಾಗುತ್ತಿದೆ ಎಂದು ಸೂರ್ಯಕಾಂತ ಹೇಳುತ್ತಾರೆ.
ಉತ್ತಮ ಮಾರ್ಗದರ್ಶನ: ಐದು ಎಕರೆ ಭೂಮಿಗೆ ನೀರು ಉಣಿಸಲು ಒಂದೇ ಒಂದು ಕೊಳವೆ ಬಾವಿ ಇದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದಾಗ, ಹನಿ ನೀರಾವರಿ ಅಥವಾ ತುಂತುರು ನೀರಾವರಿ ಮೂಲಕ ಬೆಳೆ ಬೆಳೆಸುವಂತೆ ಮಾರ್ಗದರ್ಶನ ನೀಡಿದ್ದರು. ಅದರಂತೆ ಅರ್ಜಿ ಸಲ್ಲಿಸಿದ ವಾರದಲ್ಲಿ ಅಧಿಕಾರಿಗಳು ಹೊಲ ವೀಕ್ಷಣೆ ಮಾಡಿ, ಖಾಸಗಿ ಗುತ್ತಿಗೇದಾರರ ಮೂಲಕ ಕೆಲಸ ಮಾಡಿಕೊಟ್ಟಿದ್ದಾರೆ. ಅಲ್ಲದೆ ಬೆಳೆ ಬೆಳೆಸಲು ಸರ್ಕಾರದಿಂದ ಶೇ.90 ರಿಯಾಯಿತಿ ನೀಡಿದ್ದಾರೆ. ಬಾಳೆ ಸಸಿಗಳನ್ನು ಖರೀದಿಸಲು ಕೂಡ ಸಹಾಯಧನ ನೀಡಿದ್ದಾರೆ.
ಭಾರಿ ಲಾಭ: ತೋಟಗಾರಿಕೆ ಇಲಾಖೆ ಬೆಳೆಗಳಲ್ಲಿ ಹಲವು ಬಗೆಗಳಿವೆ. ಆದರೆ ಬಾಳೆ ಸಸಿಗಳನ್ನು ರೈತರು ಒಂದು ವರ್ಷ ತಮ್ಮ ಹೊಲದಲ್ಲಿ ನೆಟ್ಟರೆ ಮೂರು ವರ್ಷಗಳ ಕಾಲ ಅದರ ಸಂಪೂರ್ಣ ಲಾಭ ಪಡೆಯಬಹುದಾಗಿದೆ. ಅದಲ್ಲದೆ ಸರ್ಕಾರದಿಂದ ವಿಶೇಷ ಸೌಲಭ್ಯಗಳಿವೆ. ಅವುಗಳನ್ನು ಪಡೆದು ಪ್ರತಿಯೊಬ್ಬ ರೈತರು ಕೃಷಿಯಲ್ಲಿ ಉತ್ತಮ ಸಾಧನೆ ಮಾಡಲು ಮುಂದಾಗಬೇಕು ಎಂದು ತೋಟಗಾರಿಕೆ ಇಲಾಖೆ ಅಧಿ ಕಾರಿಗಳು ತಿಳಿಸಿದ್ದಾರೆ.
ಉಪನ್ಯಾಸಕ ವೃತ್ತಿಯಲ್ಲಿ ಇದ್ದಾಗ ವರ್ಷಕ್ಕೆ ಐದು ಲಕ್ಷ ರೂ. ಒಂದೇ ಸಾರಿ ನೋಡಿದ ಉದಾರಣೆಗಳು ನಮ್ಮ ಜೀವನದಲ್ಲಿ ಇಲ್ಲ. ತೋಟಗಾರಿಕೆ ಬೆಳೆಗಳನ್ನು ಬೆಳೆಸಿ ವರ್ಷಕ್ಕೆ 14 ಲಕ್ಷ ರೂ. ಸಂಪಾದನೆ ಮಾಡುತ್ತಿದ್ದೇನೆ. ಕೃಷಿಯಲ್ಲಿ ಎಲ್ಲವೂ ಇದೆ. ಅಧಿಕಾರಿಗಳ ಮಾರ್ಗದರ್ಶನ ಪಡೆದು ಕೆಲಸ ಮಾಡಿದರೆ ಕೃಷಿಯಲ್ಲಿ ಯಶಸ್ವಿ ಕಾಣಬಹುದಾಗಿದೆ ಎನ್ನುತ್ತಾರೆ ಸೂರ್ಯಕಾಂತ ಜಾಧವ
ತೋಟಗಾರಿಕೆ ಇಲಾಖೆ ಅಧಿಕಾರಿಗಳ ಉತ್ತಮ ಮಾರ್ಗದರ್ಶನದಿಂದ ಇಂದು ವರ್ಷಕ್ಕೆ 14 ಲಕ್ಷ ರೂ. ಸಂಪಾದನೆ ಮಾಡುತ್ತಿದ್ದೇನೆ. ನಮ್ಮ ತಾಲೂಕಿನ ರೈತರು ಕೃಷಿ ಇಲಾಖೆಯ ಬೆಳೆಗಳನ್ನು ಬೆಳೆಸುವುದರ ಜೊತೆಗೆ ತೋಟಗಾರಿಕೆ ಬೆಳೆಗಳನ್ನೂ ಬೆಳೆಸಿ ಆರ್ಥಿಕವಾಗಿ ಮುಂದೆ ಬರಬೇಕು ಎನ್ನುವುದೇ ನಮ್ಮ ಆಶಯವಾಗಿದೆ.
ಸೂರ್ಯಕಾಂತ ಜಾಧವ, ನಿವೃತ್ತ ಉಪನ್ಯಾಸಕ
ರೈತರು ಕೃಷಿಯಲ್ಲಿ ಉತ್ಸಾಹದಿಂದ ತೊಡಗಿದರೆ, ಸರ್ಕಾರದಿಂದ ಸಿಗುವ ಪ್ರತಿಯೊಂದು ಯೋಜನೆ ಹಾಗೂ ಬೆಳೆ ಕುರಿತು ಕಾಲಕಾಲಕ್ಕೆ ಸಂಪೂರ್ಣ ಮಾಹಿತಿ ನೀಡಲಾಗುವುದು. ಜೊತೆಗೆ ನಿರ್ವಹಣೆಯ ಬಗ್ಗೆ ಅರಿವು ಮೂಡಿಸಲು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸಿದ್ಧರಾಗಿದ್ದೆವೆ.
ಮಾರುತಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು
ನಮ್ಮೂರಿನ ಉಪನ್ಯಾಸಕರು ಕೃಷಿಯಲ್ಲಿ ಮಾಡಿರುವ ಸಾಧನೆ ನೋಡಿ ನಾವು ಕೂಡ ಅವರಂತೆ ತೋಟಗಾರಿಕೆ ಬೆಳೆ ಬೆಳೆಸಿ ಆರ್ಥಿಕವಾಗಿ ಮುಂದೆ ಸಾಗಬೇಕೆಂಬ ನಿರೀಕ್ಷೆಯಲ್ಲಿದ್ದೇವೆ. ಉಪನ್ಯಾಸಕರ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಮಾರ್ಗದರ್ಶನ ಪಡೆದು ಕೃಷಿಯಲ್ಲಿ ಲಾಭದಾಯಕ ಜೀವನ ರೂಪಿಸಿಕೊಳ್ಳುತ್ತೇವೆ.
ರಾಮಪ್ಪ, ಕೃಷಿಕ
ರವೀಂದ್ರ ಮುಕ್ತೇದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Bantwal: ತುಂಬೆ ಜಂಕ್ಷನ್; ಸರಣಿ ಅಪಘಾತ
Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.