ನೂತನ ಉತ್ಪಾದನಾ ತಾಂತ್ರಿಕತೆ ಅಳವಡಿಸಿಕೊಳ್ಳಿ
Team Udayavani, Aug 29, 2022, 3:13 PM IST
ಬೀದರ: ರೈತನ ಕಠಿಣ ಪರಿಶ್ರಮಕ್ಕೆ ಫಲ ದೊರಕಬೇಕಾದಲ್ಲಿ ನೂತನ ಉತ್ಪಾದನಾ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕೆವಿಕೆ ಕೀಟ ವಿಜ್ಞಾನಿ ಡಾ| ಸುನೀಲಕುಮಾರ ಎನ್.ಎಂ. ಹೇಳಿದರು.
ತರನಳ್ಳಿ ಗ್ರಾಮದ ಧೂಳಪ್ಪ ಬಶೆಟ್ಟಿ ಅವರ ಕ್ಷೇತ್ರದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಕಾರ್ಯಕ್ರಮದಡಿ ಕೃಷಿ ವಿಜ್ಞಾನ ಕೇಂದ್ರದಿಂದ ನೂತನ ಬೆಳೆ ಉತ್ಪಾದನಾ ತಾಂತ್ರಿಕತೆಗಳ “ಹೆಸರು ಬೆಳೆಯ ಸಮಗ್ರ ನಿರ್ವಹಣೆ’ ಕುರಿತು ಮೂಂಚುಣಿ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದ ಅವರು, ಬೆಳೆಕಾಳುಗಳ ಕಣಜವೆಂದು ಕರೆಯಲ್ಪಡುವ ಜಿಲ್ಲೆಯಲ್ಲಿ ಹೆಸರು ಬೆಳಗೆ ವಿಶೇಷ ಬೇಡಿಕೆ ಇದೆ. ಇತ್ತೀಚಿನ ದಿನಗಳಲ್ಲಿ ಹೆಸರಿನ ಇಳುವರಿ ಕಡಿಮೆಯಾಗುತ್ತಿದ್ದು ಕೇಂದ್ರವು ಕೈಗೊಂಡ ಇಂತಹ ಪ್ರಾತ್ಯಕ್ಷಿಕೆಗಳು ರೈತ ಸಮುದಾಯಕ್ಕೆ ಸಮಯಕ್ಕೆ ತಕ್ಕಂತೆ ತಾಂತ್ರಿಕೆತೆಗಳನ್ನು ನೀಡಿ ಪ್ರಾಯೋಗಿಕವಾಗಿ ರೈತರಿಗೆ ಮನನ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ವಿಜ್ಞಾನಿ ಡಾ| ನಿಂಗದಳ್ಳಿ ಮಲ್ಲಿಕಾರ್ಜುನ ಮಾತನಾಡಿ, ಪ್ರಾತ್ಯಕ್ಷಿಕೆಯಲ್ಲಿ ಬಳಸಿದ ಸೂಕ್ಷ್ಮ ಜೀವಾಣುಗಳಾದ ರೈಜೋಬಿಯಂ, ರಂಜಕ ಕರಗಿಸುವ ಗೊಬ್ಬರಗಳ ಉಪಯುಕ್ತತೆ ಕುರಿತು ತಿಳಿಸಿದರು.
ಕೃಷಿ ಅಧಿಕಾರಿ ಸತ್ಯಭಾಮ ಪ್ರಾತ್ಯಕ್ಷಿಕೆ ನೀಡಿದರು. ಯುವ ರೈತ ಗುರುನಾಥ ಬಿರಾದರ ಮತ್ತು ಪ್ರಭು ಮೇಳಕುಂದೆ ಮಾತನಾಡಿದರು. ಬೆಳೆ ಕ್ಷೇತ್ರೋತ್ಸವದಲ್ಲಿ ಅನಿಲಕುಮಾರ ಹರಣೆ, ಹಣಮಂತ, ಸಂಗಶೆಟ್ಟಿ ಸೇರಿದಂತೆ ಸುಮಾರು 71 ರೈತ ಬಾಂಧವರು ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.